ಬೆಂಗಳೂರಿನ ಕ್ರೆಡಾಯ್ ಸಂಸ್ಥೆಗೆ ಐದು ಪ್ರಶಸ್ತಿಗಳ ಗರಿ
ಗಳೂರು, ಮಾ.18: ಪಬ್ಲಿಕ್ ರಿಲೇಷನ್ಸ್ ಕೌನ್ಸಿಲ್ ಆಫ್ ಇಂಡಿಯಾವು 2015ರ ಮಾರ್ಚ್ 13 ಮತ್ತು 14ರಂದು ದೆಹಲಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕ್ರೆಡಾಯ್ ಬೆಂಗಳೂರು ಸಂಸ್ಥೆಗೆ 5 ಪ್ರಶಸ್ತಿಗಳನ್ನು ಪ್ರದಾನ ಮಾಡಿತು. ವಿವಿಧ ಚಟುವಟಿಕೆಗಳಿಗೆ ಸಂಬಂಧಿಸಿ ಈ ಪ್ರಶಸ್ತಿಗಳನ್ನು ನೀಡಲಾಗಿದ್ದು, ಈ ಪೈಕಿ 1 ಬೆಳ್ಳಿ, 1 ಕಂಚು ಮತ್ತು 3 ಮೆಚ್ಚುಗೆ ಪ್ರಶಸ್ತಿಗಳಾಗಿದ್ದವು.
ಕ್ರೆಡಾಯ್ ಬೆಂಗಳೂರಿನ ಸಿಇಒ ಆಗಿರುವ ಅನಿಲ್ ನಾಯಕ್ ಅವರು ಪಿಆರ್ ವೃತ್ತಿ, ಕೈಗಾರಿಕೆ ಮತ್ತು ಸಮಾಜಕ್ಕೆ ನೀಡಿದ ಗಣನೀಯ ಕೊಡುಗೆಯನ್ನು ಪರಿಗಣಿಸಿ ಅವರಿಗೆ ಜ್ಯೂರಿ ಸ್ಪೆಷಲ್ ಚಾಣಕ್ಯ ಫಾರ್ ಸ್ಟ್ರ್ಯಾಟೆಜಿಕ್ ಪ್ಲಾನಿಂಗ್ ಪ್ರಶಸ್ತಿಯನ್ನೂ ಪಿಆರ್ ಸಿಐ ಪ್ರದಾನ ಮಾಡಿದೆ.

ಪ್ರಶಸ್ತಿ ಬಗ್ಗೆ ಮಾತನಾಡಿದ ಕ್ರೆಡಾಯ್ ಬೆಂಗಳೂರು ಸಿಇಒ ಅನಿಲ್ ನಾಯಕ್, "ಪಿಆರ್ ಸಿಐ ನಮ್ಮ ವಿವಿಧ ಚಟುವಟಿಕೆಗಳನ್ನು ಗಣನೆಗೆ ತೆಗೆದುಕೊಂಡು ಐದು ಸಮಾಂತರ ಕಾರ್ಪೊರೇಟ್ ಪ್ರಶಸ್ತಿಗಳನ್ನು ಮತ್ತು ಈ ವೃತ್ತಿಗೆ, ಕೈಗಾರಿಕೆಗೆ ಮತ್ತು ಸಮಾಜಕ್ಕೆ ನಾನು ನೀಡಿದ ಕೊಡುಗೆಗಾಗಿ ಜ್ಯೂರಿ ಸ್ಪೆಷಲ್ ಚಾಣಕ್ಯ ಫಾರ್ ಸ್ಟ್ರ್ಯಾಟೆಜಿಕ್ ಪ್ಲಾನಿಂಗ್ ಪ್ರಶಸ್ತಿಯನ್ನೂ ಪ್ರದಾನ ಮಾಡಿದೆ'' ಎಂದರು.
ಸುಮಾರು ಒಂದು ದಶಕಗಳಿಂದಲೂ ಪಿಆರ್ ಸಿಐ ಈ ಕೊಲ್ಯಾಟರಲ್ ಕಾರ್ಪೊರೇಟ್ ಪ್ರಶಸ್ತಿಗಳನ್ನು ನೀಡುತ್ತಾ ಬಂದಿದೆ. ವಿವಿಧ ವಿಭಾಗಗಳ ಸಂವಹನ ಉತ್ತೇಜನ ಅಂಶಗಳಲ್ಲಿನ ವೃತ್ತಿಪರ ಮಾನದಂಡವನ್ನು ಗುರುತಿಸಿಯೇ ಪಿಆರ್ ಸಿಐ ಈ ಕಾರ್ಪೊರೇಟ್ ಕೊಲ್ಯಾಟರಲ್ ಪ್ರಶಸ್ತಿಗಳನ್ನು ಪ್ರದಾನ ಮಾಡುತ್ತಿದೆ.

ಈ ಪ್ರಶಸ್ತಿಗಳ ಪೈಕಿ ನಾವು, ಕಾರ್ಪೊರೇಟ್ ಜಾಹೀರಾತು ಅಭಿಯಾನಕ್ಕಾಗಿ ಬೆಳ್ಳಿ, ಆನ್ ಲೈನ್ ನ್ಯೂಸ್ ಲೆಟರ್ ಗಾಗಿ ಕಂಚು ಮತ್ತು ಸಾರ್ವಜನಿಕ ಸೇವಾ ಅಭಿಯಾನ, ಸಾಕ್ಷ್ಯಚಿತ್ರ ಹಾಗೂ ಇನ್-ಹೌಸ್ ಮ್ಯಾಗಜಿನ್ ಗಾಗಿ 3 ಮೆಚ್ಚುಗೆಯ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದೇವೆ. ನಿಜ ಹೇಳಬೇಕೆಂದರೆ, ಪಿಆರ್ ಮತ್ತು ಸಂವಹನದ ವಿವಿಧ ಚಟುವಟಿಕೆಗಳಲ್ಲಿ ಗಣನೀಯ ಸಾಧನೆಯನ್ನು ಮೆಚ್ಚಿ ಕ್ರೆಡಾಯ್ ಬೆಂಗಳೂರಿಗೆ ಪಿಆರ್ ಸಿಐ ಈ ಪ್ರಶಸ್ತಿಗಳನ್ನು ನೀಡುತ್ತಿರುವುದು ಇದು ಸತತ 4ನೇ ಬಾರಿ ಎಂದೂ ಹೇಳಿದರು ನಾಯಕ್.
ದೆಹಲಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅನಿಲ್ ನಾಯಕ್ ಅವರೇ ಪ್ರಶಸ್ತಿಗಳನ್ನು ಸ್ವೀಕರಿಸಿದರು. ಇದೇ ವೇಳೆ ಮಾತನಾಡಿದ ಕ್ರೆಡಾಯ್ ಬೆಂಗಳೂರು ಕಾರ್ಯದರ್ಶಿ ಸುರೇಶ್ ಹರಿ, "ಕಳೆದ ಕೆಲವು ವರ್ಷಗಳಿಂದ ಕ್ರೆಡಾಯ್ ಪಿಆರ್ ಸಿಐನಿಂದ ಪ್ರಶಸ್ತಿಗಳನ್ನು ಪಡೆಯುತ್ತಾ ಬಂದಿದೆ. ಆದರೆ ಪ್ರಸಕ್ತ ವರ್ಷ ಹಿಂದೆಂದಿಗಿಂತಲೂ ಹೆಚ್ಚು ಅಂದರೆ 5 ಪ್ರಶಸ್ತಿಗಳನ್ನು ನಮ್ಮದಾಗಿಸಿಕೊಂಡಿದ್ದೇವೆ'' ಎಂದರು.
ಪಿಆರ್ ಸಿಐ ಬಗ್ಗೆ: ದಿ ಪಬ್ಲಿಕ್ ರಿಲೇಷನ್ಸ್ ಕೌನ್ಸಿಲ್ ಆಫ್ ಇಂಡಿಯಾವು ಭಾರತದಲ್ಲಿರುವ ಅತಿದೊಡ್ಡ ಪಿಆರ್ ವೃತ್ತಿಪರ ಸಂಸ್ಥೆಗಳಲ್ಲಿ ಒಂದಾಗಿದೆ. ಇದು ಪಿಆರ್, ಜಾಹೀರಾತು, ಮಾಧ್ಯಮ ವೃತ್ತಿಪರರು, ಅಕಾಡೆಮಿಷಿಯನ್‍ಗಳು, ಫೋರಂಗಳು ಮತ್ತು ಸಂಸ್ಥೆಗಳ ಪಾನ್-ಇಂಡಿಯಾ ಸಂಸ್ಥೆಯಾಗಿದೆ. ಬೆಂಗಳೂರಿನಲ್ಲಿ ಇದರ ಪ್ರಧಾನ ಕಚೇರಿಯಿದ್ದು, ಭಾರತದಾದ್ಯಂತ 23 ಕೇಂದ್ರಗಳಲ್ಲಿ ವ್ಯಾಪಿಸಿದೆ. (ಒನ್ಇಂಡಿಯಾ ಬಿಜಿನೆಸ್)












Click it and Unblock the Notifications