Adani Group: ಆಸ್ಟ್ರೇಲಿಯಾದಲ್ಲಿ ಅದಾನಿ ಗ್ರೂಪ್‌ಗೆ ಭರ್ಜರಿ ಗೆಲುವು, ವಿರೋಧಿಗಳಿಗೆ ಸೋಲು!
ಅದಾನಿ ಗ್ರೂಪ್ ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನ ಹಲವು ದೇಶಗಳಲ್ಲಿ ತಮ್ಮ ಉದ್ಯಮಗಳನ್ನು ಬೆಳೆಸುತ್ತಿದ್ದು, ಜಾಗತಿಕವಾಗಿ ಭಾರತದ ಉದ್ಯಮ ವಲಯವನ್ನ ಗುರುತಿಸಿಕೊಳ್ಳಲು ಸಹಾಯಕವಾಗಿ ನಿಂತಿದೆ. ಇದೇ ರೀತಿ ಆಸ್ಟ್ರೇಲಿಯಾದಲ್ಲಿ ಕೂಡ ಅದಾನಿ ಗ್ರೂಪ್ ಬಹುದೊಡ್ಡ ಉದ್ಯಮಗಳನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದು, ಆದರೆ ಇದಕ್ಕೆ ಕೆಲವರಿಂದ ಅಡೆತಡೆ ಎದುರಾಗಿತ್ತು. ಆದರೆ ಆ ಎಲ್ಲಾ ಅಡೆತಡೆ ಮಾಡುವವರಿಗೆ ಇದೀಗ ಕ್ವೀನ್ಸ್‌ಲ್ಯಾಂಡ್‌ನ ಸುಪ್ರೀಂ ಕೋರ್ಟ್ ಆದೇಶ ತಕ್ಕ ಉತ್ತರ ನೀಡಿದೆ.
ಕ್ವೀನ್ಸ್‌ಲ್ಯಾಂಡ್‌ನ ಸುಪ್ರೀಂ ಕೋರ್ಟ್ ಇದೀಗ ಮಹತ್ವದ ತೀರ್ಪು ನೀಡಿದ್ದು, ಅದಾನಿ ಗ್ರೂಪ್‌ನ ಕಾರ್ಮೈಕಲ್ ಕಲ್ಲಿದ್ದಲು ಗಣಿಗೆ ಸಂಬಂಧಿಸಿರುವ ಗೌಪ್ಯ ಮಾಹಿತಿ ಹುಡುಕುವುದು ಅಥವಾ ಅಂತಹ ಮಾಹಿತಿ ಬಳಸುವ ಸಂಬಂಧ ಮಹತ್ವದ ತಡೆಯಾಜ್ಞೆ ಆದೇಶವನ್ನು ಹೊರಡಿಸಿದೆ. ಅಂದಹಾಗೆ ಪಳೆಯುಳಿಕೆ-ಇಂಧನ ವಿರೋಧಿ ಕಾರ್ಯಕರ್ತ ಒಬ್ಬ ಆಸ್ಟ್ರೇಲಿಯಾದಲ್ಲಿ ಅದಾನಿ ಗ್ರೂಪ್‌ನ ಭಾರಿ ಮಹತ್ವದ ಪ್ರಾಜೆಕ್ಟ್‌ಗಳ ಪೈಕಿ ಒಂದಾಗಿರುವ ಕಾರ್ಮೈಕಲ್ ಕಲ್ಲಿದ್ದಲು ಗಣಿ ಸಂಬಂಧ ಕಾನೂನು ವ್ಯಾಜ್ಯ ಶುರು ಮಾಡಿದ್ದ. ಆದರೆ ಆ ವ್ಯಕ್ತಿಗೆ ಇದೀಗ ಹಿನ್ನಡೆ ಅಗಿದ್ದು, ಕ್ವೀನ್ಸ್‌ಲ್ಯಾಂಡ್ ಸುಪ್ರೀಂ ಕೋರ್ಟ್ ಈ ಕಾನೂನು ಹೋರಾಟದ ವಿಚಾರವಾಗಿ ಮಹತ್ವದ ತೀರ್ಪು ನೀಡಿದೆ.

ಅಂದಹಾಗೆ ಕ್ವೀನ್ಸ್‌ಲ್ಯಾಂಡ್‌ನ ಸುಪ್ರೀಂ ಕೋರ್ಟ್ ಇದೀಗ ಹೊರಡಿಸಿರುವ ಮಹತ್ವದ ಆದೇಶದ ಅನ್ವಯ, ಬೆನ್ ಪೆನ್ನಿಂಗ್ಸ್ ಬ್ರಾವಸ್ ಉದ್ಯೋಗಿಗಳೇ ಆಗಿರಲಿ ಅಥವಾ ಗುತ್ತಿಗೆದಾರರು, ಸಂಭಾವ್ಯ ಗುತ್ತಿಗೆದಾರರಿಂದ ಗೌಪ್ಯ ವ್ಯವಹಾರ ಮಾಹಿತಿ ಪಡೆಯುವ ಎಲ್ಲ ಪ್ರಯತ್ನವನ್ನು ತಕ್ಷಣ ನಿಲ್ಲಿಸಬೇಕು ಎಂಬ ವಿಚಾರ ತಿಳಿಸಿದೆ. ಇದರ ಜೊತೆಗೆ ಅಂತಹ ಮಾಹಿತಿಯನ್ನು ಬಹಿರಂಗಪಡಿಸಲು ಇತರರನ್ನು ಪ್ರೋತ್ಸಾಹಿಸುವುದನ್ನು ಕೂಡ ನಿರ್ಬಂಧಿಸಬೇಕು ಎಂದು ಬ್ರಾವಸ್ ಮೈನಿಂಗ್ ಮತ್ತು ರಿಸೋರ್ಸಸ್ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಅದಾನಿ ಗ್ರೂಪ್‌ನ ಭಾಗವಾಗಿರುವ ಬ್ರಾವಸ್, ಅದರ ಕಾನೂನು ವೆಚ್ಚವನ್ನು ಮುಂದುವರಿಸದಿರಲು ಒಪ್ಪಿಕೊಂಡಿದ್ದು, ಸಂಸ್ಥೆಯು ಗಲಿಲೀ ಬೇಸಿನ್‌ನಲ್ಲಿ ಕಾರ್ಮೈಕಲ್ ಕಲ್ಲಿದ್ದಲು ಗಣಿಯನ್ನು ನಿರ್ವಹಿಸುತ್ತದೆ. ರಫ್ತು ಮಾರುಕಟ್ಟೆಗೋಸ್ಕರ ಪ್ರತಿ ವರ್ಷವೂ ಸುಮಾರು 10 ಮಿಲಿಯನ್ ಟನ್ ಕಲ್ಲಿದ್ದಲನ್ನು ಉತ್ಪಾದಿಸುತ್ತದೆ.
ಸಂಸ್ಥೆಯ ಆಂತರಿಕ ವಿಚಾರ ಹೊರ ಹಾಕುವ ಗುರಿ ಹೊಂದಿದ "ನೇರ ಕ್ರಮ" ಮೂಲಕವಾದ ಗೌಪ್ಯ ಮಾಹಿತಿ ಬಹಿರಂಗಪಡಿಸುವ ಪ್ರಯತ್ನ ಅಥವಾ ಪ್ರಚಾರ ಮಾಡುವುದನ್ನು ನಿಷೇಧಿಸುವ ಮೂಲಕ ಮಹತ್ವದ ಆದೇಶ ನೀಡಲಾಗಿದೆ. ಕಾನೂನುಬದ್ಧ ಪ್ರತಿಭಟನೆ ಅಥವಾ ವಕಾಲತ್ತು ವಹಿಸುವ ಅವರ ಸಾಮರ್ಥ್ಯವನ್ನ ನಿರ್ಬಂಧಿಸುವುದಿಲ್ಲ. ಗ್ಯಾಲಿಲೀ ಬ್ಲಾಕೇಡ್ ಗ್ರೂಪ್ ರಾಷ್ಟ್ರೀಯ ವಕ್ತಾರ ಪೆನ್ನಿಂಗ್ಸ್ ವಿರುದ್ಧ ಬ್ರಾವಸ್ ಸಿವಿಲ್ ಮೊಕದ್ದಮೆ ಹೂಡಿ, ಕಾರ್ಮೈಕಲ್ ಕಲ್ಲಿದ್ದಲು ಗಣಿ ಕಾರ್ಯಾಚರಣೆ ಸೇರಿ ಅದರ ಪೂರೈಕೆದಾರರು & ಗುತ್ತಿಗೆದಾರರ ಅಡ್ಡಿಪಡಿಸಲು ಯತ್ನಿಸಿದ್ದಾರೆ ಎಂದು ಆರೋಪವನ್ನ ಮಾಡಲಾಗಿತ್ತು.
ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮಿಕ್ ಕ್ರೋವ್ ಇದನ್ನ ಸ್ವಾಗತಿಸಿದ್ದು, ಕಂಪನಿ ಉದ್ದೇಶವು ಯಾವಾಗಲೂ ಕಿರುಕುಳ & ಬೆದರಿಕೆ ಎಂದು ನಿರೂಪಿಸಲ್ಪಟ್ಟ ನಡವಳಿಕೆಯನ್ನು ನಿಲ್ಲಿಸುವುದಾಗಿತ್ತು ಎಂದು ಹೇಳಿದ್ದಾರೆ. ಪೆನ್ನಿಂಗ್ಸ್ ನಮ್ಮ ಉದ್ಯೋಗಿಗಳು ಮತ್ತು ಗುತ್ತಿಗೆದಾರರನ್ನ ಕಿರುಕುಳ ನೀಡುತ್ತಾ ಬೆದರಿಸುವುದನ್ನ ತಡೆಯಲು ನಾವು ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಹೋರಾಟ ಆರಂಭಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಈ ಹಕ್ಕು ಎಂದಿಗೂ ಹಣದ ಬಗ್ಗೆ ಅಲ್ಲ, ಆದರೆ ಪೆನ್ನಿಂಗ್ಸ್ ನಮ್ಮ ಗೌಪ್ಯ ಮಾಹಿತಿ ಪಡೆಯಲು ಪ್ರಯತ್ನಿಸುವುದು ನಿಲ್ಲಿಸಬೇಕು ಮತ್ತು ನಮ್ಮ ಗುತ್ತಿಗೆದಾರರ ಸೇರಿದಂತೆ ಪೂರೈಕೆದಾರರು ನಮ್ಮೊಂದಿಗೆ ಕೆಲಸ ಮಾಡುವುದನ್ನು ನಿಲ್ಲಿಸುವಂತೆ ಒತ್ತಡ ಹೇರಲು ಕಿರುಕುಳ ಮತ್ತು ಬೆದರಿಸಬಾರದು ಎಂದು ತಿಳಿಸಿದ್ದಾರೆ.












Click it and Unblock the Notifications