ನವೆಂಬರ್ 11ರಿಂದ ದೇಶದ ಎಲ್ಲ ಎಟಿಎಂನಲ್ಲಿ ಹೊಸ ನೋಟುಗಳು

By: ವಿಕಾಸ್ ನಂಜಪ್ಪ
Subscribe to Oneindia Kannada

ನವ ದೆಹಲಿ, ನವೆಂಬರ್ 9: ಅದ್ಭುತವಾದ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಮುದ್ರಿಸಿರುವ 500, 2000 ರುಪಾಯಿಯ ನೋಟುಗಳು ದೇಶದ ಎಲ್ಲ ಎಟಿಎಂಗಳಲ್ಲಿ ನವೆಂಬರ್ 11ರಿಂದ ದೊರೆಯುತ್ತವೆ ಎಂದು ಆರ್ಥಿಕ ಇಲಾಖೆ ಕಾರ್ಯದರ್ಶಿ ಅಶೋಕ್ ಲವಾಸ ಅವರು ತಿಳಿಸಿದ್ದಾರೆ.

ಮಾಧ್ಯಮದವರಿಗೆ ಈ ಬಗ್ಗೆ ಮಾಹಿತಿ ನೀಡಿದ ಅವರು, ಕಪ್ಪು ಹಣದ ಪ್ರಮಾಣವನ್ನು ನಿಯಂತ್ರಿಸುವ ಉದ್ದೇಶದಿಂದ 500, 1000 ರುಪಾಯಿಯ ನೋಟುಗಳನ್ನು ರದ್ದುಗೊಳಿಸಲಾಗಿದೆ. ಆ ನಂತರ ಸಿಕ್ಕಿರುವ ಪ್ರತಿಕ್ರಿಯೆಗೆ ಉತ್ತರಿಸಿದ ಅವರು, ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಮಾರುಕಟ್ಟೆ ಪ್ರತಿಕ್ರಿಯಿಸುವುದೇ ಹೀಗೆ ಎಂದು ಹೇಳಿದ್ದಾರೆ.[ಹಳೇ 500, 1,000 ರುಪಾಯಿ ನೋಟು ಏನು ಮಾಡೋದು: ಪ್ರಶ್ನೋತ್ತರಗಳು..]

Note

ದೊಡ್ಡ ದೊಡ್ಡ ವ್ಯವಹಾರಗಳನ್ನು ಮಾಡುವುದಕ್ಕೆ ಜನರಿಗೆ ದೊಡ್ಡ ಮೊತ್ತದ ಹಣದ ಅವಶ್ಯಕತೆ ಇದೆ. ಆದ್ದರಿಂದ ಎರಡು ಸಾವಿರದ ನೋಟನ್ನು ಪರಿಚಯಿಸುತ್ತಿದ್ದೇವೆ. ಆರಂಭದಲ್ಲಿ ಜನರು ಕೆಲವು ಸಮಸ್ಯೆಗಳನ್ನು ಎದುರಿಸಬಹುದು. ಅದರೆ ಜನರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದಲೇ ಸರಕಾರ ಕೆಲವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.[ಕೆಲವು ಪೆಟ್ರೋಲ್ ಬಂಕ್ ಗಳಲ್ಲಿ 500, 1,000 ತಗೊಳ್ತಿಲ್ಲ]

ಆದರೆ, ಪೆಟ್ರೋಲ್ ಬಂಕ್ ಗಳಲ್ಲಂತೂ ವಿಪರೀತ ಸಂಖ್ಯೆಯಲ್ಲಿ ಜನ ಸೇರುತ್ತಿದ್ದಾರೆ. ಇಡೀ ದೇಶದಲ್ಲೇ ಇಂಥ ಸ್ಥಿತಿ ಇದೆ. ಇನ್ನು ಲೆಕ್ಕಾಚಾರದಲ್ಲಿ ಹಣ ಖರ್ಚು ಮಾಡುವ, ತುಂಬ ಅಗತ್ಯ ಕಂಡಾಗ ಮಾತ್ರ ಎಟಿಎಂನಿಂದ ಹಣ ಡ್ರಾ ಮಾಡುವ ವೇತನದಾರರು ಅಕ್ಷರಶಃ ಕಂಗಾಲಾಗಿದ್ದಾರೆ. ತಮ್ಮ ಬಳಿಯಿದ್ದ ಅಲ್ಪಸ್ವಲ್ಪ ದುಡ್ಡನ್ನೇ ಕೊಡುತ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The new high security notes of Rs 500 and Rs 2,000 will be available in ATMs across the country from November 11 onwards. The announcement was made finance secretary Ashok Lavasa.
Please Wait while comments are loading...