ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಗ್ನಿಜಂಟ್ ಚೇರ್ಮನ್, ಎಂಡಿ ರಾಮ್ ಕುಮಾರ್ ರಾಜೀನಾಮೆ

|
Google Oneindia Kannada News

ನವದೆಹಲಿ, ಜುಲೈ 09: ದೇಶದ ಪ್ರಮುಖ ಮಾಹಿತಿ ಮತ್ತು ತಂತ್ರಜ್ಞಾನ ಸಂಸ್ಥೆ ಕಾಗ್ನಿಜಂಟ್ ಹಿರಿಯ ಅಧಿಕಾರಿಯನ್ನು ಕಳೆದುಕೊಳ್ಳುತ್ತಿದೆ. ಕಾಗ್ನಿಜಂಟ್ ನಲ್ಲಿ ಕಾರ್ಯ ನಿರ್ವಹಿಸಿದ್ದ ಚೇರ್ಮನ್, ವ್ಯವಸ್ಥಾಪಕ ರಾಮ್ ಕುಮಾರ್ ರಾಮಮೂರ್ತಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಸಿಇಒ ಬ್ರಿಯಾನ್ ಹಂಫ್ರಿಯಿಸ್ ತಿಳಿಸಿದ್ದಾರೆ.

Recommended Video

WHO ಹಾಡಿ ಹೊಗಳಿದ ಚೀನಾ | Oneindia Kannada

ಸಿಇಒ ಆಗಿ ಬ್ರಿಯಾನ್ ಹಂಫ್ರಿಯಿಸ್ ಅವರು ಕಳೆದ ವರ್ಷ ಅಧಿಕಾರಕ್ಕೆ ಬಂದ ಬಳಿಕ ಅನೇಕ ಹಿರಿಯ ಅಧಿಕಾರಿಗಳು ಹುದ್ದೆಗಳನ್ನು ತೊರೆಯುತ್ತಿದ್ದಾರೆ. 2019ರಲ್ಲಿ ಸಿಎಂಡಿ ಸ್ಥಾನ ವಹಿಸಿಕೊಂಡಿದ್ದ ರಾಮ್ ಕುಮಾರ್ ಅವರು 10ತಿಂಗಳೊಳಗೆ ತಮ್ಮ ಹುದ್ದೆಯಿಂದ ಕೆಳಗಿಳಿದಿದ್ದಾರೆ.

18,000 ಟೆಕ್ಕಿಗಳಿಗೆ ಪಿಂಕ್ ಸ್ಲಿಪ್, ಕರ್ನಾಟಕ ಐಟಿ ಯೂನಿಯನ್ ಗರಂ18,000 ಟೆಕ್ಕಿಗಳಿಗೆ ಪಿಂಕ್ ಸ್ಲಿಪ್, ಕರ್ನಾಟಕ ಐಟಿ ಯೂನಿಯನ್ ಗರಂ

ಇದಕ್ಕೂ ಮುನ್ನ 22 ವರ್ಷಗಳ ಕಾಗ್ನಿಜಂಟ್ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದರು. ಹಿರಿಯ ಉಪಾಧ್ಯಕ್ಷ, ಸಿಕೆಒ, ಕಾರ್ಯಕಾರಿ ನಿರ್ದೇಶಕ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದರು. ನಾಸ್ಕಾಂ ಸ್ಕಿಲ್ ಸೆಕ್ಟರ್ ಕೌನ್ಸಿಲ್ ನ ಸದಸ್ಯರಾಗಿದ್ದರು. ಮದ್ರಾಸ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಅಧ್ಯಕ್ಷರಾಗಿದ್ದಾರೆ.

Cognizant India Chairman, MD Ramkumar Ramamoorthy resigns

ನಿಜವಾದ ಮುನ್ಸೂಚನೆ, ಕಾಗ್ನಿಜೆಂಟ್ ಹಿರಿಯ ಅಧಿಕಾರಿ ಹೊರಕ್ಕೆ ನಿಜವಾದ ಮುನ್ಸೂಚನೆ, ಕಾಗ್ನಿಜೆಂಟ್ ಹಿರಿಯ ಅಧಿಕಾರಿ ಹೊರಕ್ಕೆ

ಕುಂಭಕೋಣಂ ಮೂಲದ ರಾಮ್ ಕುಮಾರ್ ಅವರು ಇಂಗ್ಲೀಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಸಮೂಹ ಸಂವಹನದಲ್ಲಿ ಪತ್ರಿಕೋದ್ಯಮ ಪದವಿಯನ್ನು 1990ರಲ್ಲಿ ಲೊಯೊಲಾ ಕಾಲೇಜಿನಿಂದ ಪಡೆದಿದ್ದರು. ಅಮೆರಿಕನ್ ನ್ಯೂ ಜರ್ನಲಿಸಂನಲಿ ಎಂ.ಫಿಲ್ ಪಡೆದಿದ್ದಾರೆ. ಇಂಗ್ಲೀಷ್ ಪ್ರಾಧ್ಯಾಪಕ, ಪ್ರಿನ್ಸಿಪಾಲ್ ಆಗಿ ಕೂಡಾ ಕಾರ್ಯ ನಿರ್ವಹಿಸಿದ್ದಾರೆ.

English summary
Cognizant India’s Chairman and Managing Director Ramkumar Ramamoorthy resigned from the company after over 22 years at the company.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X