Get Updates
Get notified of breaking news, exclusive insights, and must-see stories!

ತಮಿಳುನಾಡಿನ ನಷ್ಟ, ಕರ್ನಾಟಕದ ಲಾಭ, ಏನಿದು ಬಿಜಿನೆಸ್?

ಬೆಂಗಳೂರು, ಏ.21: ಹತ್ತಿ, ಜೋಳ, ನೆಲಗಡೆ, ಧಾನ್ಯಗಳನ್ನು ಬೆಳೆಯುವ ಭೂಮಿಯಲ್ಲಿ ಕೋಲಾ ಕಂಪನಿಯ ಬಾಟ್ಲಿಂಗ್ ಘಟಕ ತಲೆ ಎತ್ತಿ ನಿಲ್ಲುವ ಕಾಲ ಸನ್ನಿಹಿತವಾಗಿದೆ. ತಮಿಳುನಾಡಿಗೆ 'ನೀರು' ಕೊಟ್ಟ ಕರ್ನಾಟಕಕ್ಕೆ ಈಗ ಅಮೆರಿಕದ 'ಕೋಲಾ' ಬೋನಸ್ ಆಗಿ ಸಿಗುತ್ತಿದೆ. ತಮಿಳುನಾಡಿನ ಕೈಗಾರಿಕಾ ಪ್ರದೇಶದಲ್ಲಿ ಅಂಗಡಿ ಬಾಗಿಲು ಮುಚ್ಚಿರುವ ಕೋಕಾ ಕೋಲಾ ಕಂಪನಿ ಈಗ ಯಾದಗಿರಿಯತ್ತ ಮುಖ ಮಾಡಿದೆ.

ಕಳೆದ ಎರಡು ವರ್ಷಗಳಿಂದ ಕರ್ನಾಟಕದಲ್ಲಿ ಘಟಕ ಸ್ಥಾಪನೆ ಮಾಡಲು ಕೋಕಾ ಕೋಲಾ ಕಂಪನಿ ಆರ್ಜಿ ಹಾಕುತ್ತಲೇ ಇತ್ತು. ಅದರೆ, ಬೆಂಗಳೂರಿನ ಹೊರಗೆ ಮೂಲ ಸೌಕರ್ಯ ಕೊರತೆ ಇರುವುದರಿಂದ ಜೊತೆಗೆ ಕೋಲಾ ಘಟಕಕ್ಕೆ ಹೆಚ್ಚಿನ ನೀರಿನ ಸೌಲಭ್ಯ ಒದಗಿಸಬೇಕಾಗಿರುವುದರಿಂದ ಕೋಲಾ ಕಂಪನಿ ಆರ್ಜಿಯನ್ನು ಸರ್ಕಾರ ಮುಂದೂಡುತ್ತಾ ಬಂದಿತ್ತು.

2014ರ ಕೊನೆಗೆ ಯಾದಗಿರಿಯಲ್ಲಿ 250 ಎಕರೆ ಕೊಟ್ಟ ಸಿದ್ದರಾಮಯ್ಯ ಸರ್ಕಾರಕ್ಕೆ ಈಗ ಬಂಪರ್ ಬೆಳೆ ಸಿಗುವ ಸಾಧ್ಯತೆಯಿದೆ.[ಕೋಲಾ ಕಂಪನಿ ಕೈಗೆ 250 ಎಕರೆ ಭೂಮಿ]

Coca Cola : Tamil Nadu's Loss is Karnataka's Gain

ತಮಿಳುನಾಡಿನಿಂದ ಪ್ಯಾಕ್ ಅಪ್: ತಮಿಳುನಾಡು ರಾಜ್ಯ ಕೈಗಾರಿಕಾ ಪ್ರಚಾರ ಕಾರ್ಪೊರೇಷನ್ (SIPCOT) ನಿಂದ ಕೋಕಾಕೋಲಾ ಸಂಸ್ಥೆಗೆ ನೀಡಿದ್ದ 71.34 ಎಕರೆ ಭೂಮಿಯನ್ನು ರದ್ದುಪಡಿಸಲಾಗಿದೆ. ಸಿಪ್ಕೋಟ್ ವ್ಯವಸ್ಥಾಪಕ ನಿರ್ದೇಶಕ ಆರ್ ಸೆಲ್ವರಾಜ್ ಅವರು ಹಿಂದೂಸ್ತಾನ್ ಕೋಕಾಕೋಲಾ ಸಂಸ್ಥೆ(HCCB) ಗೆ ಪತ್ರ ಬರೆದು ರಾಜ್ಯದಿಂದ ಪ್ಯಾಕ್ ಅಪ್ ಮಾಡುವಂತೆ ಸೂಚಿಸಿದ್ದಾರೆ. [ಕರ್ನಾಟಕ ಬಂದ್ : ಮೇಕೆದಾಟು ಯೋಜನೆ ವಿವಾದವೇನು?]

ಚೆನ್ನೈಮಲೈ, ಪೆರುಂದುರೈನಲ್ಲಿ ದಕ್ಕಿದ್ದ ಭೂಮಿಯಲ್ಲಿ ಕೋಕಾಕೋಲಾ ಕಂಪನಿ ಮಣ್ಣು ಪರೀಕ್ಷೆ ಮಾಡಲು ಹೋಗಿ ಸ್ಥಳೀಯರಿಂದ ವಿರೋಧ ಕಟ್ಟಿಕೊಂಡಿತ್ತು. ತಮಿಳುನಾಡಿನಲ್ಲಿ 500 ಕೋಟಿ ರು ಬಂಡವಾಳ ಹೂಡಿಕೆ ಬಗ್ಗೆ ಮಾತನಾಡಿದ್ದ ಕೋಕಾ ಕೋಲಾ ಈಗ ಕರ್ನಾಟಕದಲ್ಲಿ 1000 ಕೋಟಿ ರು ಪ್ಲಸ್ ಮೊತ್ತ ಹೂಡಿಕೆ ಮಾಡಲು ಮುಂದಾಗಿದೆ.

ಯಾದಗಿರಿ ಜಿಲ್ಲೆಯ ಕಡೆಚೂರು, ಬಳಿಯಾಳ ಪ್ರದೇಶದ 3,330 ಎಕರೆ ಭೂಮಿಯನ್ನು ಕೈಗಾರಿಕಾ ಪ್ರದೇಶವನ್ನಾಗಿ ಘೋಷಿಸಲಾಗಿದೆ. ಈ ಪೈಕಿ 250 ಎಕರೆ ಕೋಕಾ ಕೋಲಾ ಕಂಪನಿ ಪಾಲಾಗಲಿದೆ. ಮೂಲಗಳ ಪ್ರಕಾರ ಭೂ ಮಾಲೀಕರಿಗೆ ಪ್ರತಿ ಎಕರೆ 7.5 ಲಕ್ಷ (ರಸ್ತೆ ಬದಿ ಜಮೀನಿಗೆ) ರಿಂದ 6 ಲಕ್ಷ ರು ಪರಿಹಾರ ನೀಡಲಾಗುತ್ತಿದೆ. [ನರ್ಮದಾ ಒಡಲು ಬರಿದು ಮಾಡುತ್ತಿರುವ ಕೋಲಾ]

ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ರಾಜ್ಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರು ಮಾತನಾಡಿ, ಕೋಕಾ ಕೋಲಾ ಕಂಪನಿ ರಾಜ್ಯದಲ್ಲಿ ಸುಮಾರು 1000 ಕೋಟಿ ರು ಹೂಡಿಕೆ ಮಾಡಲು ಮುಂದಾಗಿರುವುದನ್ನು ದೃಢಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+