ಕೋವಿಡ್ ಬಳಿಕ ಚೀನಾದ ರಫ್ತು ವಹಿವಾಟಿನಲ್ಲಿ ಭಾರಿ ಏರಿಕೆ

ಬಿಜಿಂಗ್, ಮಾರ್ಚ್ 7: ಕೋವಿಡ್ -19 ಕಾರಣದಿಂದ ಜಗತ್ತಿನ ಬಹುತೇಕ ದೇಶಗಳಲ್ಲಿನ ಉತ್ಪಾದನಾ ಚಟುವಟಿಕೆಗಳು ಸ್ಥಗಿತಗೊಂಡು ಸಂಕಷ್ಟದಲ್ಲಿದ್ದರೆ, ಚೀನಾ ಮಾತ್ರ ಕಳೆದ ಎರಡು ದಶಕಗಳಲ್ಲಿಯೇ ತನ್ನ ರಫ್ತು ಪ್ರಮಾಣವನ್ನು ಹೆಚ್ಚಿಸಿಕೊಂಡಿದೆ. ಕೋವಿಡ್ ಸಾಂಕ್ರಾಮಿಕದ ಕಾರಣ ಕೆಲವು ಸಮಯ ಚೀನಾ ಕೂಡ ತನ್ನ ಉತ್ಪಾದನೆ ಹಾಗೂ ರಫ್ತು ಚಟುವಟಿಕೆಗಳಲ್ಲಿ ತೊಂದರೆ ಎದುರಿಸಿತ್ತು. ಆದರೆ ಈಗ ಅದರಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ.

ವಿದ್ಯುತ್ ಉಪಕರಣಗಳು ಹಾಗೂ ಮಾಸ್ಕ್‌ನಂತಹ ಜವಳಿ ರಫ್ತುಗಳಲ್ಲಿ ಭಾರಿ ಪ್ರಮಾಣದ ಹೆಚ್ಚಳವಾಗಿದೆ. ವರ್ಕ್ ಫ್ರಂ ಹೋಮ್ ಉಪಕರಣಗಳು ಮತ್ತು ವೈರಸ್‌ನಿಂದ ರಕ್ಷಣೆ ನೀಡುವ ರಕ್ಷಣಾ ಕವಚಗಳಿಗೆ ಬೇಡಿಕೆ ವಿಪರೀತ ಹೆಚ್ಚಾಗಿದೆ.

ಜನವರಿ-ಫೆಬ್ರವರಿ ಅವಧಿಯಲ್ಲಿ ರಫ್ತು ಶೇ 60.6ರಷ್ಟು ಏರಿಕೆಯಾಗಿದೆ. ಇದು ವಿಶ್ಲೇಷಕರ ನಿರೀಕ್ಷೆಗಿಂತಲೂ ಅಧಿಕವಾಗಿದೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಸ್ಕ್ ಇದರಲ್ಲಿ ಪ್ರಮುಖ ಪಾತ್ರವಹಿಸಿವೆ. ಇದಲ್ಲದೆ ಆಮದಿನಲ್ಲಿಯೂ ಶೇ 22.2ರಷ್ಟು ಏರಿಕೆ ಕಂಡಿದೆ.

China Exports Spike To Highest Level In Decades After COVID-19 Hit

ಚೀನಾದ ಒಟ್ಟಾರೆ ವ್ಯಾಪಾರ ವಹಿವಾಟಿನ ಮೊತ್ತ 103.3 ಬಿಲಿಯನ್ ಡಾಲರ್‌ಗೆ ಹೆಚ್ಚಳವಾಗಿದೆ ಎಂದು ಕಸ್ಟಮ್ಸ್ ಆಡಳಿತ ತಿಳಿಸಿದೆ. ಚೀನಾದ ಅಧಿಕೃತ ದಾಖಲೆಗಳ ಪ್ರಕಾರ ಎಲೆಕ್ಟ್ರಾನಿಕ್ಸ್ ರಫ್ತು ಶೇ 54.1ರಷ್ಟು ಹೆಚ್ಚಳವಾಗಿದೆ. ಮಾಸ್ಕ್ ಸೇರಿದಂತೆ ಜವಳಿ ರಫ್ತಿನಲ್ಲಿ ಶೇ 50.2ರಷ್ಟು ಏರಿಕೆ ಕಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+