ಕ್ಯಾಡ್ಬರಿ ಚಾಕೊಲೇಟ್ ಕಂಪೆನಿ ವಿರುದ್ಧ ಸಿಬಿಐ ಎಫ್‌ಐಆರ್

ನವದೆಹಲಿ, ಮಾರ್ಚ್ 18: ಹಿಮಾಚಲ ಪ್ರದೇಶದಲ್ಲಿನ ತನ್ನ ಕಾರ್ಖಾನೆಗಾಗಿ 2009-10ರಲ್ಲಿ ಪರವಾನಗಿ ಪಡೆದುಕೊಳ್ಳುವಲ್ಲಿ ಅಕ್ರಮ ಹಾಗೂ ಭ್ರಷ್ಟಾಚಾರ ಎಸಗಿದ ಆರೋಪದಲ್ಲಿ ಕ್ಯಾಡ್ಬರಿ ಇಂಡಿಯಾ ಲಿ. ಮತ್ತು ಕೇಂದ್ರ ಅಬಕಾರಿ ತೆರಿಗೆ ಅಧಿಕಾರಿಗಲ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿದೆ.

ಹಿಮಾಚಲ ಪ್ರದೇಶದಲ್ಲಿ ಕ್ಯಾಡ್ಬರಿ ಇಂಡಿಯಾ (ಈಗ ಮೊಂಡೊಲೆಜ್ ಫುಡ್ಸ್ ಪ್ರೈ ಲಿ) ಹೊಸ ಚಾಕೊಲೇಟ್ ಉತ್ಪಾದನಾ ಘಟಕಕ್ಕೆ ಪರವಾನಗಿ ಪಡೆಯಲು 241 ಕೋಟಿ ರೂ ತೆರಿಗೆ ವಿನಾಯಿತಿ ಪಡೆದುಕೊಳ್ಳಲು ಅಲ್ಲಿನ ಅಬಕಾರಿ ಇಲಾಖೆ ಅಧಿಕಾರಿಗಳ ಜತೆ ಸಂಚು ನಡೆಸಿತ್ತು ಎಂದು ಆರೋಪಿಸಲಾಗಿದೆ. ಮುಂಬೈ, ಪಂಜಾಬ್, ಹಿಮಾಚಲಪ್ರದೇಶದ ಸುಮಾರು ಆರು ಕಡೆಗಳಲ್ಲಿ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆಗಳನ್ನು ಮಾಡಿದ್ದರು.

ಹಿಮಾಚಲ ಪ್ರದೇಶದ ಬಡ್ಡಿ ಪ್ರದೇಶದಲ್ಲಿ ನಿರ್ಮಿಸಿದ್ದ ಘಟಕದಲ್ಲಿ 5 ಸ್ಟಾರ್ ಮತ್ತು ಜೆಮ್ಸ್ ಚಾಕೋಲೇಟ್‌ಗಳನ್ನು ಉತ್ಪಾದನೆ ಮಾಡಲಾಗುತ್ತಿತ್ತು. ಕ್ಯಾಡ್ಬರಿ ಇಂಡಿಯಾ ಲಿ.ಯ ಅಧಿಕಾರಿಗಳು, ಕೇಂದ್ರ ಅಬಕಾರಿ ಇಲಾಖೆಯ ಸುಪರಿಂಟೆಂಡೆಂಟ್ ನಿರ್ಮಲ್ ಸಿಂಗ್, ಇನ್‌ಸ್ಪೆಕ್ಟರ್ ಜಸ್ಪ್ರೀತ್ ಕೌರ್ ಸೇರಿದಂತೆ ಹತ್ತು ಮಂದಿಯನ್ನು ಸಿಬಿಐ ಆರೋಪಿಗಳನ್ನಾಗಿ ಹೆಸರಿಸಿದೆ.

 CBI Files FIR Against Cadbury India Ltd For Alleged Corruption And Irregularities In Obtaining Licenses

ಪ್ರಾದೇಶಿಕ ಆಧಾರಿತ ಅಬಕಾರಿ ಸುಂಕ ಮತ್ತು ಆದಾಯ ತೆರಿಗೆಗಳಿಂದ ವಿನಾಯಿತಿ ಪಡೆಯುವ ಸಲುವಾಗಿ ಮೊಂಡೆಲೆಜ್ ಫುಡ್ಸ್ ಪ್ರೈ ಲಿ. ಸುಳ್ಳು ಮಾಹಿತಿಗಳು, ತಿರುಚಿದ ದಾಖಲೆಗಳು ಹಾಗೂ ಲಂಚಗಳನ್ನು ನೀಡಿತ್ತು ಎಂದು ಸಿಬಿಐನ ಶಿಮ್ಲಾ ಶಾಖೆಯ ಭ್ರಷ್ಟಾಚಾರ ನಿಯಂತ್ರಣ ಶಿಮ್ಲಾ ಘಟಕದ ಅಧಿಕಾರಿಗಳು ಎಫ್‌ಐಆರ್‌ನಲ್ಲಿ ದಾಖಲಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+