ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫಿಕ್ಸೆಡ್ ಡೆಪಾಸಿಟ್ ಮೇಲಿನ ಬಡ್ಡಿ ದರ ಏರಿಕೆ ಮಾಡಿದ ಕೆನರಾ ಬ್ಯಾಂಕ್: ಎಷ್ಟಿದೆ ಬಡ್ಡಿ ದರ?

|
Google Oneindia Kannada News

ನವದೆಹಲಿ, ಡಿಸೆಂಬರ್ 04: ಕೆನರಾ ಬ್ಯಾಂಕ್ ನವೆಂಬರ್ 27 ರಿಂದ ಜಾರಿಗೆ ಬರುವಂತೆ 2 ವರ್ಷದಿಂದ 10 ವರ್ಷದ ಅವಧಿಯ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಏರಿಕೆ ಮಾಡಿದೆ. ಈ ಪರಿಷ್ಕರಿಸಿದ ಬಡ್ಡಿದರವು ಎರಡು ಕೋಟಿ ರೂಪಾಯಿವರೆಗಿನ ಎಫ್‌ಡಿ ಮೇಲೆ ಅನ್ವಯವಾಗುತ್ತದೆ.

ಕೆನರಾ ಬ್ಯಾಂಕ್ ಪತ್ರಿಕಾ ಪ್ರಕಟಣೆಯ ಪ್ರಕಾರ ಎಫ್‌ಡಿ ಮೇಲಿನ ಬಡ್ಡಿ ದರ 2 ವರ್ಷದಿಂದ 3 ವರ್ಷಗಳ ಅವಧಿಗೆ ಸಾಮಾನ್ಯ ಜನರಿಗೆ ಶೇಕಡಾ 5.40ರಷ್ಟು ಬಡ್ಡಿದರ ನಿಗದಿ ಪಡಿಸಿದ್ದು, ಹಿರಿಯ ನಾಗರಿಕರಿಗೆ ಶೇಕಡಾ 5.90ರಷ್ಟು ಬಡ್ಡಿ ದರವಿದೆ.

ಕೆನರಾ ಬ್ಯಾಂಕ್ ನೇಮಕಾತಿ: ಸ್ಪೆಷಲಿಸ್ಟ್ ಅಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನಕೆನರಾ ಬ್ಯಾಂಕ್ ನೇಮಕಾತಿ: ಸ್ಪೆಷಲಿಸ್ಟ್ ಅಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ

ಇನ್ನು 3 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ (10 ವರ್ಷಗಳವರೆಗೆ) ನಿಶ್ಚಿತ ಠೇವಣಿಗಳಿಗೆ ಶೇಕಡಾ 5.50 ಬಡ್ಡಿ ದರವಿದೆ. ಹಿರಿಯ ನಾಗರಿಕರಿಗೆ 10 ವರ್ಷಗಳವರೆಗಿನ ನಿಶ್ಚಿತ ಠೇವಣಿಗಳಿಗೆ ಶೇಕಡಾ 6ರಷ್ಟು ಬಡ್ಡಿದರವನ್ನು ಪರಿಷ್ಕರಿಸಲಾಗಿದೆ.

Canara Bank Hikes FD Rates: Latest Rates Here

ಕೆನರಾ ಬ್ಯಾಂಕ್‌ನ ಈ ಘೋಷಣೆಯು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ದ್ವೈಮಾಸಿಕ ಹಣಕಾಸು ನೀತಿ ಪ್ರಕಟಣೆಗೂ ಒಂದು ದಿನ ಮೊದಲು ಬಂದಿದೆ. ಆರ್‌ಬಿಐ ರೆಪೋ ಮತ್ತು ರಿವರ್ಸ್ ರೆಪೋ ದರಗಳನ್ನು ಶೇಕಡಾ 4ರಷ್ಟು ಮತ್ತು ಶೇಕಡಾ 3.35ರಷ್ಟು ಮುಂದುವರಿಸಿದೆ.

ನವೆಂಬರ್ ತಿಂಗಳಿನಲ್ಲಿ ಕೆನರಾ ಬ್ಯಾಂಕ್ 2 ಕೋಟಿಗಿಂತ ಕಡಿಮೆ ಇರುವ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಕಡಿತಗೊಳಿಸಿತ್ತು. ಬ್ಯಾಂಕ್ ಎಲ್ಲಾ ಅವಧಿಗಳ ಮೇಲಿನ ಬಡ್ಡಿಯನ್ನು 5 ಬೇಸಿಸ್ ಪಾಯಿಂಟ್‌ಗಳು (ಬಿಪಿಎಸ್) ಅಥವಾ 10 ಬಿಪಿಎಸ್ ಇಳಿಕೆ ಮಾಡಿತ್ತು.

English summary
Canara Bank has Rises interest rates on fixed deposits. Latest interest rates here
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X