Get Updates
Get notified of breaking news, exclusive insights, and must-see stories!

ಒಪ್ಪೋ ಎಫ್9 ಪ್ರೋ ಫೋನ್ ಗಿಂತ ವೇಗವಾಗಿ ಚಾರ್ಜ್ ಮಾಡಲು ಸಾಧ್ಯವೆ?

ಇಂದಿನ ಜಮಾನಾದಲ್ಲಿ ನಿಮ್ಮ ಕೈಬೆರಳುಗಳು ಸ್ಮಾರ್ಟ್ ಫೋನ್ ಸ್ಕ್ರೀನ್ ಮೇಲೆ ನಲಿದಾಡಿದೆ ಸಾಕು ಅಥವಾ ಒಂದು ಸರಳವಾದ ಧ್ವನಿ ಸಂದೇಶ ಕೊಟ್ಟರೂ ಸಾಕು ಏನು ಬೇಕಾದ್ದೆಲ್ಲಾ ಆಗಿಬಿಡುತ್ತದೆ. ಪ್ರತಿದಿನ ನಡೆಯುತ್ತಿರುವ ಸಂಶೋಧನೆಗಳು ಸ್ಮಾರ್ಟ್ ಫೋನ್ ಗಳನ್ನು ಇನ್ನಷ್ಟು ಸ್ಮಾರ್ಟಾಗಿ ಮಾಡುತ್ತಿವೆ. ಆದರೆ, ಒಂದನ್ನು ಹೊರತಾಗಿ. ಅದೇನೆಂದರೆ, ಒಂದೇ ಒಂದು ದಿನ ಪೂರ್ತಿಯಾಗಿ ಚಾರ್ಜ್ ಇರಲು ಸಾಧ್ಯವಾಗುತ್ತಿಲ್ಲ.

ನಮಗೆ ಥಳಕು ಬಳುಕಿನ ಸ್ಕ್ರೀನ್ ಇರುವ, ಬಳುಕುವ ಬಳ್ಳಿಯಂತೆ ತೆಳ್ಳಗಿರುವ, ವೇಗದ ಪ್ರೊಸಸೆರ್ ಮತ್ತು ಬೆಳಕಿನ ವೇಗದಲ್ಲಿ ಇಂಟರ್ನೆಟ್ ಕನೆಕ್ಟ್ ಆಗುವಂಥ ಫೋನ್ ಗಳೇ ಬೇಕು. ಇಷ್ಟೆಲ್ಲ ಇದ್ದ ಮೇಲೆ ಮತ್ತು ಇಷ್ಟೆಲ್ಲವನ್ನೂ ಬಳಸಿದ ಮೇಲೆ ಇಡೀದಿನ ಚಾರ್ಜ್ ಆಗಿರಬೇಕೆಂದರೆ ಹೇಗೆ ಸಾಧ್ಯ?

Can You Charge Your Phone Any Faster Than The OPPO F9 Pro?

ಇದೆಲ್ಲದರ ಜೊತೆ, ನಾವು ಸೋಷಿಯಲ್ ಮೀಡಿಯಾ ಜೊತೆ ಸದಾ ಕನೆಕ್ಟ್ ಆಗಿರಬೇಕು, ಫೋಟೋ ತೆಗೆಯುತ್ತಿರಬೇಕು, ಗೇಮ್ಸ್ ಆಡುತ್ತಿರಬೇಕು, ವಿಡಿಯೋ, ಸಿನೆಮಾ ನೋಡುವುದು, ಹಾಡುಗಳನ್ನು ಕೇಳುವುದು, ಇನ್ನೂ ಏನೇನೋ. ನೀವೇ ವಿಚಾರ ಮಾಡಿ. ಇಷ್ಟೆಲ್ಲ ಮಾಡಿದ ಮೇಲೆ ಪಾಪ, ಬ್ಯಾಟರಿ ಕಥೆ ಏನಾಗಿರಬೇಕು? ಹೀಗಾಗಿ ನಮ್ಮ ಫೋನ್ ಸದಾ ಚಾರ್ಜ್ ಆಗುತ್ತಲೇ ಇರುತ್ತದೆ.

ಆದರೆ, ಅಂಥ ದಿನಗಳು ಇನ್ನು ಕೊನೆಯಾಗಲಿವೆ, ಒಪ್ಪೋದ ಫ್ಲಾಗ್ ಶಿಪ್ ಒಪ್ಪೋ ಎಫ್9 ಪ್ರೋ ಮಾರುಕಟ್ಟೆಗೆ ದಾಂಗುಡಿ ಇಡಲಿದೆ. ಒಪ್ಪೋ ಈಗಾಗಲೆ ವೇಗದ ಚಾರ್ಜಿಂಗ್ ಸೇರಿದಂತೆ ಹಲವಾರು ದಾಖಲೆಗಳನ್ನು ಬರೆದಿದೆ. ಒಪ್ಪೋದ VOOC ಫ್ಲಾಶ್ ಚಾರ್ಜ್ ತಂತ್ರಜ್ಞಾನದಿಂದಾಗಿ, ಕೇವಲ 5 ನಿಮಿಷ ಚಾರ್ಜ್ ಮಾಡಿದರೆ ಸಾಕು ಸತತ ಎರಡು ಗಂಟೆ ಮೊಬೈಲ್ ನಲ್ಲಿ ಮಾತಾಡಬಹುದು.

Can You Charge Your Phone Any Faster Than The OPPO F9 Pro?

ಆಧುನಿಕ ದಿನಮಾನದ ಸ್ಮಾರ್ಟ್ ಫೋನ್ ಗಳು ಎದುರಿಸುತ್ತಿರುವ ಬ್ಯಾಟರಿ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು VOOC ಫ್ಲಾಶ್ ಚಾರ್ಜ್ ದಂಥ ವಿನೂತನ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಇತರ ಬ್ಯಾಟರಿಗಳಿಗಿಂತ 4 ಪಟ್ಟು ವೇಗವಾಗಿ ಒಪ್ಪೋ ಬ್ಯಾಟರಿ ಚಾರ್ಜ್ ಆಗುತ್ತದೆ.

ಈ ತಂತ್ರಜ್ಞಾನದ ಬಗ್ಗೆ ಇನ್ನೂ ಹೆಚ್ಚಿನದನ್ನು ತಿಳಿಯಲು ಆಸಕ್ತಿಯೆ? ದೇಶೀಯವಾಗಿ ಅಭಿವೃದ್ಧಿಪಡಿಸಲಾದ ವೂಕ್ ಫ್ಲಾಶ್ ಚಾರ್ಜ್ ನಂಥ ತಂತ್ರಜ್ಞಾನದೊಂದಿಗೆ, ಇದರಲ್ಲಿರುವ 5 ಪದರಗಳ ರಕ್ಷಣಾ ವ್ಯವಸ್ಥೆಯಿಂದಾಗಿ ಮತ್ತು 3500 ಎಂಎಎಚ್ ಬ್ಯಾಟರಿಯಿಂದಾಗಿ ಚಾರ್ಜ್ ಮಾಡುವಾಗ ಹೆಚ್ಚು ಬಿಸಿಯಾಗುವುದಿಲ್ಲ. ಅಲ್ಲದೆ, ನಿಮ್ಮ ಮೊಬೈಲನ್ನು ವೇಗದ ಚಾರ್ಜಿಂಗ್ ಸ್ಪೀಡ್ ನಲ್ಲಿಯೂ ಇಡಬಹುದು. ಇದನ್ನು ಹೈವೋಲ್ಟೇಜ್ ಫಾಸ್ಟ್ ಚಾರ್ಜ್ ತಂತ್ರಜ್ಞಾನಗಳು ಮಾಡಲು ಸಾಧ್ಯವಿಲ್ಲ.

Can You Charge Your Phone Any Faster Than The OPPO F9 Pro?

ಇದೆಲ್ಲಕ್ಕಿಂತ ಹೆಚ್ಚಾಗಿ, ಲಕ್ಷಾಂತರ ಭಾರತೀಯ ಮೊಬೈಲ್ ಬಳಕೆದಾರನ್ನು ಗಮನದಲ್ಲಿಟ್ಟುಕೊಂಡು ಅತ್ಯಂತ ಆಕರ್ಷಕವಾಗಿ ಡಿಸೈನ್ ಮಾಡಲಾಗಿದೆ. ಸ್ಕ್ರೀನ್ ಮೇಲೆ ನೀರಿನ ಹನಿಗಳ ಎಫೆಕ್ಟ್ ಮೊಬೈಲ್ ಬಳಕೆದಾರರಿಗೆ ಹೊಸತನದ ಅನುಭವ ಕೊಡುತ್ತದೆ. 6.3 ಇಂಚ್ ಬೆಜೆಲ್ ರಹಿತ ಸ್ಕ್ರೀನ್ 2340X1080 ಪಿಕ್ಸೆಲ್ ರೆಸೊಲ್ಯೂಷನ್ ಹೊಂದಿದೆ.

ಒಪ್ಪೋ ಎಫ್9 ಪ್ರೋ ಮೊಬೈಲ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಇರುವ ಎರಡು ಅತ್ಯಾಧುನಿಕ ಮತ್ತು ಅತ್ಯುತ್ತಮ ಗುಣಮಟ್ಟದ ಕ್ಯಾಮೆರಾ ಹೊಂದಿದೆ. 16ಎಂಪಿ ಪ್ರೈಮರಿ ಸೆನ್ಸಾರ್ ಜೊತೆ ಎಫ್/1.8 ಅಪಾರ್ಚರ್ ಮತ್ತು 2ಎಂಪಿ ಸೆಕೆಂಡರಿ ಸೆನ್ಸಾರ್ ಕೂಡ ಈ ಮೊಬೈಲ್ ನಲ್ಲಿದೆ. ಇಷ್ಟು ಉತ್ತಮ ಸವಲತ್ತುಗಳಿರುವ ಮೊಬೈಲ್ ಅತ್ಯುತ್ತಮ ಚಿತ್ರಗಳನ್ನು ಸೆರೆಹಿಡಿಯಬಲ್ಲದು. ಮೊಬೈಲ್ ಸ್ಟಾಂಡರ್ಡ್ ಗಳಿಗೆ ತಕ್ಕಂತೆ 6 ಜಿಬಿ ರಾಮ್, 64 ಜಿಬಿ ರೋಮ್ ಇದ್ದು, ಉತ್ತಮ ಪರ್ಮಾರ್ಮನ್ಸ್ ನೀಡುತ್ತದೆ. ಮೀಡಿಯಾಟೆಕ್ ಹೆಲಿಯೋ ಪಿ60 ಪ್ರೊಸೆಸರ್ ಈ ಮೊಬೈಲ್ ನ್ನು ಇನ್ನಷ್ಟು ಉತ್ತಮವಾಗಿಸಿದೆ.

Can You Charge Your Phone Any Faster Than The OPPO F9 Pro?

ಸನ್ ರೈಸ್ ರೆಡ್, ಟ್ವಿಲೈಟ್ ಬ್ಲ್ಯೂ ಮತ್ತು ಸ್ಟಾರಿ ಪರ್ಪಲ್ ಕಲರ್ ಗಳಲ್ಲಿ ಇದು ಲಭ್ಯವಿದೆ. ಮೊಬೈಲ್ ನ ಹೊರಆವರಣದ ಮೇಲೆ ಹೂವು ಪಕಳೆಗಳ ಡಿನೈಸ್ ಇದ್ದು, ಈ ಮೊಬೈಲಿಗೆ ಅತ್ಯಾಧುನಿಕತೆಯ ಸ್ಪರ್ಶ ನೀಡಿದೆ. ಇಂದಿನ ಯುವ, ಫ್ಯಾಷನೇಬಲ್ ಪೀಳಿಗೆ ಮತ್ತು ಅವರ ಜೀವನಶೈಲಿಯಿಂದ ಸ್ಫೂರ್ತಿ ಪಡೆದು, ಅವರ ಅಗತ್ಯ, ಅನುಕೂಲತೆಗಳಿಗೆ ತಕ್ಕಂತೆ ಈ ಮೊಬೈಲನ್ನು ಮಾರ್ಪಾಡು ಮಾಡಲಾಗಿದೆ ಮತ್ತು ಅತ್ಯಾಧುನಿಕತೆಯ ಟಚ್ ನೀಡಲಾಗಿದೆ.

ಒಪ್ಪೋದ ಅಧಿಕೃತ ಫೇಸ್ ಬುಕ್, ಇನ್ ಸ್ಟಾಗ್ರಾಮ್ ಮತ್ತು ಟ್ವಿಟ್ಟರ್ ಪುಟಗಳನ್ನು ಫಾಲೋ ಮಾಡಿ ಮತ್ತು @oppomobileindiaದಲ್ಲಿ ಹೆಚ್ಚಿನ ಮಾಹಿತಿಗಳನ್ನು ಪಡೆಯಿರಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+