ಇತಿಹಾಸ ಪುಟ ಸೇರಲಿರುವ ಎಚ್ಎಂಟಿ ಗಡಿಯಾರ

Posted By:
Subscribe to Oneindia Kannada

ನವದೆಹಲಿ, ಜ. 06: ಹಿಂದೂಸ್ತಾನ್ ಮಿಷನ್ ಟೂಲ್ಸ್ (ಎಚ್ ಎಂಟಿ) ಇತಿಹಾಸ ಪುಟ ಸೇರುವ ದಿನಗಳು ಹತ್ತಿರವಾಗುತ್ತಿದೆ. ಎಚ್ ಎಂಟಿ ಸಮೂಹದ ಮೂರು ಸಂಸ್ಥೆಗಳನ್ನು ಮುಚ್ಚಲು ಆರ್ಥಿಕ ವ್ಯವಹಾರಗಳ ಕೇಂದ್ರ ಸಚಿವ ಸಂಪುಟದ ಸಮಿತಿ (ಸಿಸಿಇಎ) ಬುಧವಾರ ನಿರ್ಧರಿಸಿದೆ.

ಈ ಮೂಲಕ ಎಚ್ ಎಂಟಿ ವಾಚ್ ಕಂಪನಿ, ಎಚ್ ಎಂಟಿ ಚಿನಾರ್ ಹಾಗೂ ಎಚ್ ಎಂಟಿ ಬೇರಿಂಗ್ಸ್ ಸಂಸ್ಥೆ ಮುಚ್ಚಲಾಗುತ್ತದೆ. ನಷ್ಟದ ಹಾದಿಯಲ್ಲಿ ಸಾಗುತ್ತಿರುವ ಕಂಪನಿಗೆ ಬೀಗ ಹಾಕಲು ತೀರ್ಮಾನಿಸಲಾಗಿದೆ. ಹೆಚ್ಚುವರಿ 427.48 ಕೋಟಿ ರು ನಗದು ಅನುದಾನ ನೀಡಲಾಗಿತ್ತು. [ಎಚ್ಎಂಟಿ ಸಮಾಧಿ ಮೇಲೆ ಕಾಂಗ್ರೆಸ್ಸಿಗರ ದುಡ್ಡಿನ ಸೌಧ]

Cabinet approves closure of 3 HMT companies

ಆದರೆ, ಮೂರು ಲಿಮಿಟೆಡ್ ಸಂಸ್ಥೆಗಳು ಚೇತರಿಕೆ ಕಾಣದ ಹಿನ್ನಲೆಯಲ್ಲಿ ಸಂಸ್ಥೆಗಳಿಗೆ ಬಾಗಿಲು ಹಾಕುವುದು ಅನಿವಾರ್ಯ ಎಂದು ಸಿಸಿಇಎ ಹೇಳಿದೆ. ಈ ಮೂರು ಸಂಸ್ಥೆಗಳ ಉದ್ಯೋಗಿಗಳು ವಿಆರ್ ಎಸ್ /ವಿಎಸ್ಎಸ್ ಮೂಲಕ ಬಾಕಿ ಮೊತ್ತವನ್ನು ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ.[ಎಚ್ಎಂಟಿ ಕಂಪನಿಗೆ ಬೀಳಲಿದೆ ಬೀಗ]

ಸ್ವಯಂ ನಿವೃತ್ತಿ ಅಡಿಯಲ್ಲಿ ನಿವೃತ್ತಿ ಪಡೆಯುವ ಉದ್ಯೋಗಿಗಳಿಗೆ 2007ರ ವೇತನ ಆಯೋಗದಂತೆ ಸಂಬಳ ಭತ್ಯೆ ಸಿಗಲಿದೆ. ಮೂರು ಸಂಸ್ಥೆಗಳಾ ಸ್ಥಿರ, ಚರಾಸ್ತಿಗಳನ್ನು ಸರ್ಕಾರಿ ನಿಯಮದಂತೆ ಹರಾಜು ಹಾಕಲಾಗುವುದು ಎಂದು ಸಿಸಿಇಎ ಹೇಳಿದೆ.

53 ವರ್ಷಗಳಿಂದ ಭಾರತೀಯರಿಗೆ ನಿಖರ ಸಮಯ ತೋರಿಸುತ್ತಿದ್ದ ಕಂಪನಿ 2000ದಿಂದ ನಷ್ಟದ ಹಾದಿಯಲ್ಲಿ ಸಾಗುತ್ತಾ ಬಂದಿದೆ.

1961ರಲ್ಲಿ ಜಪಾನ್‌ನ ಸಿಟಿಜನ್‌ ವಾಚ್‌ ಕಂಪನಿಯ ಸಹಯೋಗದಲ್ಲಿ ಆರಂಭವಾದ ಎಚ್‌ಎಂಟಿ ವಾಚಸ್‌ ಕಂಪನಿಯು 2011-12ನೇ ಸಾಲಿನಲ್ಲಿ 224.04 ಕೋಟಿ ರೂ. ನಷ್ಟ ಅನುಭವಿಸಿತು. 2012-13ನೇ ಸಾಲಿನಲ್ಲಿ ಇದು 242.47 ಕೋಟಿ ರೂ.ಗೆ ಏರಿತು. 2012ರಲ್ಲಿ ಕೇಂದ್ರ ಸರ್ಕಾರ ಈ ಕಂಪನಿಗೆ 694.52 ಕೋಟಿ ರೂ. ಸಾಲ ನೀಡಿದರೂ ಕಂಪನಿ ನಷ್ಟದಿಂದ ಬಿಡುಗಡೆ ಹೊಂದಿಲ್ಲ. ಬೆಂಗಳೂರು, ತುಮಕೂರು ಸೇರಿದಂತೆ ದೇಶದ 4 ಕಡೆ ಉತ್ಪಾದನಾ ಘಟಕವನ್ನು ಎಚ್ಎಂಟಿ ಹೊಂದಿದೆ. (ಐಎಎನ್ಎಸ್)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Cabinet Committee on Economic Affairs (CCEA) on Wednesday approved the closure of three Hindustan Machine Tools (HMT) companies -- HMT Watches, HMT Chinar Watches and HMT Bearings.
Please Wait while comments are loading...