ಕೇಂದ್ರ ಸರ್ಕಾರದಿಂದ ಶೇಕಡ 4ರಷ್ಟು ತುಟ್ಟಿಭತ್ಯೆ ಹೆಚ್ಚಳ, ಇದರ ಲೆಕ್ಕಾಚಾರ ಹೇಗೆ?
ನವದೆಹಲಿ, ಅಕ್ಟೋಬರ್ 18: ಬಹು ದಿನಗಳಿಂದ ತುಟ್ಟಿಭತ್ಯೆ ಹೆಚ್ಚಳಕ್ಕಾಗಿ ಕಾಯುತ್ತಿದ್ದ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಕೇಂದ್ರ ಸರ್ಕಾರ ಕೊನೆಗೂ ಸಿಹಿ ಸುದ್ದಿ ನೀಡಿದೆ. ಅವರಿಗೆ ಈಗ ಶೇಕಡಾ 4ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಿದೆ.
ತುಟ್ಟಿಭತ್ಯೆ ಹೆಚ್ಚಳದ ಘೋಷಣೆ ಅಕ್ಟೋಬರ್‌ನಲ್ಲಿ ಬರಲಿದೆ ಎಂದು ವರದಿಗಳು ಈ ಹಿಂದೆ ತಿಳಿಸಿದ್ದವು. ಅದರಂತೆ ಶೇಕಡಾ 4 ರಷ್ಟು ಡಿಎ ಹೆಚ್ಚಳವು ಕೇಂದ್ರ ಸರ್ಕಾರಿ ನೌಕರರಿಗೆ ಭಾರಿ ವೇತನ ಹೆಚ್ಚಳವಾಗಿದೆ. ಪ್ರಸ್ತುತ ಇರುವ ಡಿಎ 42 ರಿಂದ ಹೆಚ್ಳವು 46 ಕ್ಕೆ ಇರುತ್ತದೆ ಎಂದು ತಿಳಿದು ಬಂದಿದೆ.

ಡಿಎ ಹೇಗೆ ಲೆಕ್ಕ ಹಾಕಲಾಗುತ್ತದೆ?
ಮೂಲ ವೇತನದ ಶೇಕಡಾವಾರು ಪ್ರಕಾರ ಡಿಎ ಅನ್ನು ಲೆಕ್ಕಹಾಕಲಾಗುತ್ತದೆ. ಕೇಂದ್ರ ಸರ್ಕಾರಿ ನೌಕರ ವೇತನವನ್ನು ಲೆಕ್ಕಾಚಾರ ಮಾಡಲು ಸೂತ್ರವು ತುಟ್ಟಿಭತ್ಯೆ ಶೇಕಡಾ = (AICPI (BASE ವರ್ಷ 2001=100) ಕಳೆದ 12 ತಿಂಗಳುಗಳ ಸರಾಸರಿ -115.76) / 115.76)* 100 ಆಗಿರುತ್ತದೆ.
ಎಷ್ಟು ಸಂಬಳ ಹೆಚ್ಚಾಗುತ್ತದೆ?
18,000 ರೂ.ಗಳ ಕನಿಷ್ಠ ಮೂಲ ವೇತನ ಹೊಂದಿರುವ ಉದ್ಯೋಗಿಗೆ ಪ್ರಸ್ತುತ 42 ಶೇಕಡಾ ಡಿಎ 7,560 ರೂಪಾಯಿಗಳ ಮಾಸಿಕ ಹೆಚ್ಚಳವನ್ನು ಪಾವತಿಸಲಾಗುತ್ತದೆ. ಒಮ್ಮೆ ಡಿಎ 46 ಪರ್ಸೆಂಟ್ ಹೆಚ್ಚಳವಾದರೆ ಈ ಮಾಸಿಕ ಹೆಚ್ಚಳವು ರೂ 8,640 ಕ್ಕೆ ಏರುತ್ತದೆ.
ಇತ್ತೀಚೆಗೆ ಕರ್ನಾಟಕ ಸರ್ಕಾರಿ ಸಚಿವಾಲಯದ ನೌಕರರ ಸಂಘವು ವೇತನ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ 7ನೇ ವೇತನ ಆಯೋಗಕ್ಕೆ ಮನವಿ ಸಲ್ಲಿಸಿದೆ. ಮಾಜಿ ಮುಖ್ಯ ಕಾರ್ಯದರ್ಶಿ ಕೆ ಸುಧಾಕರ್ ರಾವ್ ಅವರು 7ನೇ ವೇತನ ಆಯೋಗದ ಮುಖ್ಯಸ್ಥರಾಗಿದ್ದು, ನಿವೃತ್ತ ಐಎಎಸ್ ಅಧಿಕಾರಿ ಪಿ ಬಿ ರಾಮಮೂರ್ತಿ, ನಿವೃತ್ತ ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಪ್ರಧಾನ ನಿರ್ದೇಶಕ ಶ್ರೀಕಾಂತ್ ಬಿ ವನಹಳ್ಳಿ ಮತ್ತು ಐಎಎಸ್ ಅಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸದಸ್ಯ-ಕಾರ್ಯದರ್ಶಿಗಳಾಗಿದ್ದಾರೆ.












Click it and Unblock the Notifications