• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಜೆಟ್ 2021: ಮೂಲ ಸೌಕರ್ಯ ಯೋಜನೆಗಾಗಿ ರಾಷ್ಟ್ರೀಯ ಬ್ಯಾಂಕ್‌ ಸ್ಥಾಪನೆ?

|

ನವದೆಹಲಿ, ಜನವರಿ 25: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 01ರಂದು ಮಂಡಿಸಲಿರುವ 2021-22ರ ಹಣಕಾಸು ಬಜೆಟ್‌ನಲ್ಲಿ ರಾಷ್ಟ್ರೀಯ ಬ್ಯಾಂಕ್‌ ಅನ್ನು ಪ್ರಕಟಿಸಬಹುದು ಎಂದು ಸಿಎನ್‌ಬಿಸಿ ವರದಿ ಮಾಡಿದೆ.

ದೊಡ್ಡ ಮೂಲಸೌಕರ್ಯ ಯೋಜನೆಗಳಿಗೆ ಸುಲಭವಾಗಿ ಕಡಿಮೆ ಬಡ್ಡಿ ದರದಲ್ಲಿ ಹಣಕಾಸಿನ ಸೌಲಭ್ಯವನ್ನು ಪಡೆಯಲು ಅನುಕೂಲವಾಗುವಂತೆ ಈ ರಾಷ್ಟ್ರೀಯ ಬ್ಯಾಂಕ್‌ ಅನ್ನು ಸ್ಥಾಪಿಸಬಹುದು ಎನ್ನಲಾಗಿದೆ. ಈ ಬ್ಯಾಂಕ್‌ಗಳಿಗೆ ಒಂದು ನಿರ್ದಿಷ್ಟ ಮೊತ್ತವನ್ನು ಬ್ಯಾಂಕ್‌ಗೆ ಹಾಕುವುದನ್ನು ಸರ್ಕಾರ ಕಡ್ಡಾಯಗೊಳಿಸಬಹುದು ಎಂದು ಮೂಲಗಳು ತಿಳಿಸಿವೆ.

ಹಲ್ವಾ ಸಮಾರಂಭದೊಂದಿಗೆ ಅಂತಿಮ ಹಂತದಲ್ಲಿ ಬಜೆಟ್ 2021ಹಲ್ವಾ ಸಮಾರಂಭದೊಂದಿಗೆ ಅಂತಿಮ ಹಂತದಲ್ಲಿ ಬಜೆಟ್ 2021

ಪ್ರಸ್ತಾವಿತ ಬ್ಯಾಂಕ್ ಅಧಿಕೃತ ಬಂಡವಾಳವು 1 ಲಕ್ಷ ಕೋಟಿ ರೂ. ಆಗಿದ್ದು, ಆರಂಭಿಕ ಬಂಡವಾಳವಾಗಿ 20,000 ಕೋಟಿ ರೂ.ಗಳನ್ನು ಹೊಂದಿರಬಹುದು ಎಂದು ವರದಿ ತಿಳಿಸಿದೆ. ಇನ್ನು ಕೇಂದ್ರ ಸರ್ಕಾರವು ವಿಶೇಷ ಕಾನೂನಿನ ಮೂಲಕ ಬ್ಯಾಂಕ್ ಅನ್ನು ಸ್ಥಾಪಿಸುತ್ತದೆ ಎಂದು ಅನೇಕ ಮೂಲಗಳು ಸಿಎನ್‌ಬಿಸಿಗೆ ದೃಢಪಡಿಸಿವೆ.

ಸರ್ಕಾರವು ನ್ಯಾಷನಲ್ ಬ್ಯಾಂಕ್ ಫಾರ್ ಫೈನಾನ್ಸಿಂಗ್ ಇನ್ಫಾಸ್ಟ್ರಕ್ಚರ್ ಮತ್ತು ಡೆವಲಪ್‌ಮೆಂಟ್ ಬಿಲ್ 2020 ಎಂಬ ಮಸೂದೆಯ ಕರಡನ್ನು ಸಿದ್ಧಪಡಿಸಿದೆ ಎಂದು ತಿಳಿಸಿದೆ. ಈ ಮೂಲಕ ಬ್ಯಾಂಕ್ ಹೆಚ್ಚಿನ ಶಕ್ತಿ ಮತ್ತು ಸ್ವಾಯತ್ತತೆಯನ್ನು ಹೊಂದಿರುತ್ತದೆ. ಈ ಬ್ಯಾಂಕ್ ಸ್ಥಾಪಿಸುವ ಉದ್ದೇಶ ರಾಷ್ಟ್ರೀಯ ಮೂಲಸೌಕರ್ಯ ಯೋಜನೆಗಳಿಗೆ ಹಣಕಾಸನ್ನು ದೀರ್ಘಾವಧಿವರೆಗೆ ಒದಗಿಸುವುದು ಎಂದು ವರದಿಗಳು ತಿಳಿಸಿವೆ.

English summary
Finance minister Nirmala Sitharaman may announce a national bank in the upcoming Budget 2021 on February 1 for easy access to low cost fund for big infrastructure project, reports CNBC.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X