ಸುಂಕ ಇಳಿಕೆ ನಂತರ ಚಿನ್ನದ ಬೆಲೆ ಕುಸಿತ, ಬೆಳ್ಳಿ ದರ ಏರಿಕೆ!

ನವದೆಹಲಿ, ಫೆಬ್ರವರಿ 1: ಮೋದಿ ಸರ್ಕಾರ್ 2.0ನ ಮತ್ತೊಂದು ಪೂರ್ಣ ಪ್ರಮಾಣ ಬಜೆಟ್ ಮಂಡನೆ ಮಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಚಿನ್ನ, ಬೆಳ್ಳಿ ಮೇಲಿನ ಆಮದು ಸುಂಕವನ್ನು ಇಳಿಕೆ ಮಾಡುವುದಾಗಿ ಘೋಷಿಸಿದ್ದಾರೆ. ಬಜೆಟ್ 2021 ಮಂಡನೆ ನಂತರ ಚಿನಿವಾರ ಪೇಟೆಯಲ್ಲಿ ಹಳದಿ ಲೋಹದ ಬೆಲೆ 450 ರಿಂದ 1,324 ರು ತನಕ ಕುಸಿತ ಕಂಡಿದ್ದರೆ, ಬೆಳ್ಳಿ ಬೆಲೆ 2,641 ರು ಏರಿಕೆ ಕಂಡಿದೆ.

ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ190 ರು ಏರಿಕೆ ಕಂಡು 10 ಗ್ರಾಂ 48, 150 ರೂಪಾಯಿ ದಾಖಲಾಗಿದ್ದು, ಶುದ್ಧ ಚಿನ್ನ 40 ರು ಕಳೆದುಕೊಂಡು 10 ಗ್ರಾಂ 52,270 ರೂಪಾಯಿ ದಾಖಲಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 3,500 ರೂಪಾಯಿ ಹೆಚ್ಚಳಗೊಂಡು 73,300 ರೂಪಾಯಿಗೆ ತಲುಪಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಸತತವಾಗಿ ಚಿನ್ನ ಹಾಗೂ ಬೆಳ್ಳಿ ದರ ಏರಿಳಿತ ಕಂಡಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಸ್ವಲ್ಪ ಇಳಿಕೆ ಕಂಡು ಪ್ರತಿ ಔನ್ಸ್‌ಗೆ 1,871 ಯುಎಸ್ ಡಾಲರ್ ನಷ್ಟಿತ್ತು. ಇದೇ ವೇಳೆ ಬೆಳ್ಳಿ ದರ ಪ್ರತಿ ಔನ್ಸ್‌ಗೆ 29.88 ಯುಎಸ್ ಡಾಲರ್ ನಷ್ಟಿದೆ.

ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರೂಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಚಿನ್ನದ ಮೇಲಿನ ಅಬಕಾರಿ ಸುಂಕ ಇಳಿಕೆ

ಚಿನ್ನದ ಮೇಲಿನ ಅಬಕಾರಿ ಸುಂಕ ಇಳಿಕೆ

ಪ್ರಮುಖ ಲೋಹಗಳ ಮೇಲಿನ ಮೂಲ ಅಬಕಾರಿ ಸುಂಕವನ್ನು 2019ರ ಜುಲೈಯಲ್ಲಿ ಶೇ 10 ರಿಂದ ಶೇ 12.5ಕ್ಕೇರಿಸಲಾಗಿತ್ತು. ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಚಿನ್ನದ ಮೇಲಿನ ಅಬಕಾರಿ ಸುಂಕ ಇಳಿಕೆ ಮಾಡಲಾಗಿದೆ. ಶೇ 11.85% ರಿಂದ ಶೇ 6.9ಕ್ಕಿಳಿಸಲಿದೆ. ಬೆಳ್ಳಿ ಮೇಲೆ ಇದ್ದ ಅಬಕಾರಿ ಸುಂಕ ಶೇ 11%ರಿಂದ ಶೇ 6.1ಕ್ಕೆ ಇಳಿಸಲಾಗಿದೆ. ಇದೇ ರೀತಿ ಪ್ಲಾಟಿನಂ ಹಾಗೂ ಪಲ್ಲಿಡಂ ಮೇಲಿನ ಸುಂಕ ಶೇ 12.5ರಿಂದ 10ಕ್ಕಿಳಿಸಲಾಗಿದೆ. ಇದಲ್ಲದೆ ಈ ಬಾರಿ ಬಜೆಟ್ ನಲ್ಲಿ ಕೃಷಿ ಮೂಲಸೌಕರ್ಯ ಹಾಗೂ ಅಭಿವೃದ್ಧಿ ಸೆಸ್ 2.5% ಚಿನ್ನ ಹಾಗೂ ಬೆಳ್ಳಿ ಮೇಲೂ ಹಾಕಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಫೆಬ್ರವರಿ 1: 45,500 (310 ರು ಇಳಿಕೆ)<>49, 640 (320ಇಳಿಕೆ)
ಜನವರಿ 31: 45,810 (10 ಏರಿಕೆ)<>49, 960 (10 ಏರಿಕೆ)
ಜನವರಿ 30: 45, 800 (150 ಏರಿಕೆ)<> 49,950 (150 ಏರಿಕೆ )
ಜನವರಿ 29: 45,650 (0---)<>49, 800 (0--)

ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಫೆಬ್ರವರಿ 1: 48,150 (190 ರು ಏರಿಕೆ)<>52,270 (40 ರು ಇಳಿಕೆ)
ಜನವರಿ 31: 47,960 (10 ಏರಿಕೆ)<>52,310 (10 ಏರಿಕೆ)
ಜನವರಿ 30: 47,950 (150 ಏರಿಕೆ)<> 52,300 (160 ಏರಿಕೆ )
ಜನವರಿ 29: 47, 800 (0---)<>52,470(0--)

ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಫೆಬ್ರವರಿ 1: 46, 250 (310 ರು ಇಳಿಕೆ)<>50, 450 (330ಇಳಿಕೆ)
ಜನವರಿ 31: 46,560 (10 ಏರಿಕೆ)<>50, 780 (10 ಏರಿಕೆ)
ಜನವರಿ 30: 46,550 (170 ಏರಿಕೆ)<> 50,770 (170 ಏರಿಕೆ )
ಜನವರಿ 29: 46,380 (160 ಏರಿಕೆ)<>50, 600 (20 ಇಳಿಕೆ)

ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ 22 ಕ್ಯಾರೆಟ್24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಫೆಬ್ರವರಿ 1: 48,450 (490 ರು ಏರಿಕೆ)<>49,450 (490 ಏರಿಕೆ)
ಜನವರಿ 31: 47,960 (10 ಏರಿಕೆ)<>48,960 (10 ಏರಿಕೆ)
ಜನವರಿ 30: 47,950 (150 ಏರಿಕೆ)<>48,950 (150 ಏರಿಕೆ )
ಜನವರಿ 29: 47,800 (0--)<>48,800 (0--)

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಪ್ರತಿ ದಿನ ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ? ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+