BSNL ಹೊಸ ಆಫರ್: ದಿನಕ್ಕೆ 1 ಜಿಬಿ ಡೇಟಾ, 80 ದಿನ ವ್ಯಾಲಿಡಿಟಿ

ನವದೆಹಲಿ, ಆಗಸ್ಟ್‌ 13: ಸರ್ಕಾರಿ ಸ್ವಾಮ್ಯದ ಭಾರತ್‌ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್‌ಎನ್‌ಎಲ್‌) 80 ದಿನಗಳ ಮಾನ್ಯತೆ ಇರುವ ಹೊಸ ಯೋಜನೆಯನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಆದರೆ ಈ ಯೋಜನೆ ಪ್ರಸ್ತುತ ಚೆನ್ನೈ ಮತ್ತು ತಮಿಳುನಾಡು ವಲಯಗಳಿಗೆ ಮಾತ್ರ ಸೀಮಿತವಾಗಿದೆ.

ಪ್ರತಿದಿನ 1ಜಿಬಿ ಡೇಟಾವನ್ನು ಹೊಂದಿರುವ ಹಾಗೂ 80 ದಿನಗಳ ಮಾನ್ಯತೆಯೊಂದಿಗೆ ಅಗ್ಗದ ಬೆಲೆಯ ಈ ಯೋಜನೆಗೆ 399 ರೂಪಾಯಿ. ಇದರಲ್ಲಿ ಅನಿಯಮಿತ ಡೇಟಾ ಜೊತೆಗೆ 250 ನಿಮಿಷಗಳ ಹೊರ ಹೋಗುವ ಕರೆಗಳು ಹಾಗೂ 100 ಎಸ್‌ಎಂಎಸ್ ಸೌಲಭ್ಯವಿದೆ. ಈ ಹೊಸ ಯೋಜನೆಯು ಆಗಸ್ಟ್‌ 15ರಿಂದ ಪ್ರಾರಂಭವಾಗಲಿದೆ.

ಎರಡು ವಾರಗಳ ಹಿಂದಷ್ಟೇ ಬಿಎಸ್ಎನ್ಎಲ್ ಚೆನ್ನೈ ವಲಯದಲ್ಲಿ 147 ರೂಪಾಯಿಗಳ ಯೋಜನೆಯನ್ನು ಪರಿಚಯಿಸಿದೆ, ಅದರ ಅಡಿಯಲ್ಲಿ ಗ್ರಾಹಕರು ಎಲ್ಲಾ ನೆಟ್‌ವರ್ಕ್‌ಗಳಿಗೆ ಅನಿಯಮಿತ ಕರೆ ಪಡೆಯುತ್ತಿದ್ದಾರೆ. ಈ ಯೋಜನೆಯ ವ್ಯಾಲಿಡಿಟಿ 30 ದಿನಗಳು ಹಾಗೂ ಗ್ರಾಹಕರು ಒಟ್ಟು 10 ಜಿಬಿ ಡೇಟಾವನ್ನು ಸಹ ಪಡೆಯುತ್ತಾರೆ. ಜುಲೈ 30ರಿಂದ ಈ ಯೋಜನೆ ಜಾರಿಗೆ ಬಂದಿದೆ.

BSNL New Plan: Rs 399 Recharge Plan 1 GB Daily Data Offer

ಇನ್ನು ಕಂಪನಿಯು ತನ್ನ ಹೊಸ ಬಿಎಸ್‌ಎನ್‌ಎಲ್ 22 ಜಿಬಿ ಸಿಯುಎಲ್ ಬ್ರಾಡ್‌ಬ್ಯಾಂಡ್ ಯೋಜನೆಯಲ್ಲಿ ಪ್ರತಿದಿನ 22 ಜಿಬಿ ಡೇಟಾವನ್ನು ನೀಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+