ವರ್ಷದಲ್ಲಿ ಬಿಎಸ್‌ಎನ್‌ಎಲ್‌ ತೊರೆದವರು 2 ಕೋಟಿ !

ನವದೆಹಲಿ, ಆಗಸ್ಟ್, 17: ರಾತ್ರಿ ಗ್ರಾಹಕರಿಗೆ ಉಚಿತ ಕರೆ ಕೊಡುಗೆ ನೀಡಿದ್ದರೂ ಭಾರತೀಯ ದೂರ ಸಂಚಾರ ನಿಗಮ 2 ಕೋಟಿಗೂ ಅಧಿಕ ಬಳಕೆದಾರರನ್ನು ಕಳೆದುಕೊಂಡಿದೆ.
ಖಾಸಗಿ ಕಂಪನಿಗಳೊಂದಿಗೆ ಪೈಪೋಟಿ ಸಾಧ್ಯವಾಗದೇ ಇರುವುದು, ಗುಣಮಟ್ಟದ ಶ್ರೇಷ್ಠತೆಯನ್ನು ಕೆಲವೆಡೆ ಕಳೆದುಕೊಂಡಿರಿವುದು ಬಳಕೆದಾರರ ಪ್ರಮಾಣ ಕಡಿಮೆಯಾಗಲು ಕಾರಣವಾಗಿದೆ ಎಂದು ಬಿಎಸ್ ಎನ್ ಎಲ್ ಅಧಿಕಾರಿಗಳೇ ತಿಳಿಸಿದ್ದಾರೆ.

ಆದರೆ ಕಳೆದುಕೊಂಡಿರುವ ಲೆಕ್ಕದಲ್ಲಿ ಬಿಎಸ್ ಎನ್ ಎಲ್ ಮೊಬೈಲ್ ಬಳಕೆದಾರರೇ ಹೆಚ್ಚಿದ್ದಾರೆ. 2014ರ ಮಾರ್ಚ್‌ನಿಂದ 2015ರ ಮಾರ್ಚ್‌ವರೆಗಿನ ಅವಧಿಯಲ್ಲಿ ಬಿಎಸ್‌ಎನ್‌ಎಲ್‌ 1.78 ಕೋಟಿ ಮೊಬೈಲ್ ಮತ್ತು 20 ಲಕ್ಷಕ್ಕೂ ಸ್ಥಿರ ದೂರವಾಣಿ ಗ್ರಾಹಕರನ್ನು ಬಿಎಸ್ ಎನ್ ಎಲ್ ಕಳೆದುಕೊಂಡಿದೆ. [ಬಿಎಸ್ ಎನ್ ಎಲ್ ಗ್ರಾಹಕರಿಗೆ ಉಚಿತ ರೋಮಿಂಗ್ ಕೊಡುಗೆ]

bsnl

ಮೊಬೈಲ್ ಸಂಪರ್ಕಗಳು ಅಧಿಕವಾಗಿರುವುದು. ಇತರೇ ಕಂಪನಿಗಳ ವಿವಿಧ ಆಫರ್ ಗಳು, ನೆಟ್ ವರ್ಕ್ ನೀಡಿಕೆ ಸಮಸ್ಯೆಗಳು ಗ್ರಾಹಕರನ್ನು ಖಳೆದುಕೊಳ್ಳುವಂತೆ ಮಾಡಿದೆ. ಗುಣಮಟ್ಟದ ಸೇವೆ ನೀಡಿದರೆ ಮತ್ತೆ ಬದಲಾವಣೆ ಸಾಧ್ಯ ಎಂದು ಬಿಎಎಎಸ್ ಎನ್ ಎಲ್ ನ ಅಧಿಕಾರಿಯೊಬ್ಬರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಗ್ರಾಹಕರ ಸಂಖ್ಯೆಯನ್ನು ವೃದ್ಧಿ ಮಾಡಲು ಕಂಪನಿ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಏಳು ಅಂಶಗಳ ಕಾರ್ಯಕ್ರಮವನ್ನು ಅಳವಡಿಸಿಕೊಂಡಿದ್ದು 4,804.77 ಕೋಟಿ ರು. ಬಳಕೆ ಮಾಡಿಕೊಂಡು ಲಕ್ಷಾಂತರ ಟವರ್ ಗಳನ್ನು ನಿರ್ಮಿಸಲು ಮುಂದಾಗಿದೆ. ರಾತ್ರಿ ಉಚಿತ ಕರೆ ಪದ್ಧತಿ ಜಾರಿ ಮಾಡಲಾಗಿದ್ದು ಸ್ಥಿರ ದೂರವಾಣಿ ಗ್ರಾಹಕರು ಸಂಪರ್ಕ ತೊರೆಯದಂತೆ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+