ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರಾಹಕರಿಗಾಗಿ ಬಿಎಸ್‌ಎನ್‌ಎಲ್‌ನಿಂದ ಸೆಲ್ಫ್‌ ಕೇರ್‌ ಆಪ್‌: ನಿಮಗಿದೆ ಹಲವು ಪ್ರಯೋಜನ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್‌, 27: ಟೆಲಿಕಾಂ ಕಂಪನಿಗಳಾದ ಏರ್‌ಟೇಲ್‌, ಜಿಯೋ, ವಿಐ ಮೊದಲಾದವುಗಳು ತಮ್ಮದೇ ಆದ ಆಪ್‌ ಅನ್ನು ಹೊಂದಿದೆ. ಈ ಆಪ್‌ ಮೂಲಕ ಈ ಕಂಪನಿಗಳ ಸೇವೆ ಪಡೆಯುತ್ತಿರುವ ಗ್ರಾಹಕರು ತಮ್ಮ ರೀಚಾರ್ಜ್ ಮಾಡಿಕೊಳ್ಳಬಹುದು, ಹೊಸ ಯೋಜನೆಗಳ ಬಗ್ಗೆ ಮಾಹಿತಿಯನ್ನು ಪಡೆಯಬಹುದು. ಆದರೆ ಸರ್ಕಾರ ಸ್ವಾಮ್ಯದ ಟೆಲಿಕಾಂ ಕಂಪನಿ ಭಾರತ ಸಂಚಾರ್‌ ನಿಗಮ ಲಿಮಿಟೆಡ್‌ ಅಥವಾ ಬಿಎಸ್‌ಎನ್‌ಎಲ್‌ಗೆ ಯಾವುದೇ ಆಪ್‌ಗಳು ಈವರೆಗೂ ಇರಲಿಲ್ಲ. ಆದರೆ ಈಗ ಟೆಲಿಕಾಂ ಕಂಪನಿ ಬಿಎಸ್‌ಎನ್‌ಎಲ್‌ ಕೂಡಾ ತನ್ನ ಆಪ್‌ ಅನ್ನು ಜಾರಿ ಮಾಡಿದೆ.

ಭಾರತ ಸಂಚಾರ್‌ ನಿಗಮ ಲಿಮಿಟೆಡ್‌ ಅಥವಾ ಬಿಎಸ್‌ಎನ್‌ಎಲ್‌ನ ಈ ಹೊಸ ಆಪ್‌ನ ಹೆಸರು ಬಿಎಸ್‌ಎನ್‌ಎಲ್‌ ಸೆಲ್ಫ್‌ಕೇರ್‌ ಆಗಿದೆ. ಇದು ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಹಾಗೂ ಆಪ್‌ ಸ್ಟೋರ್‌ನಲ್ಲಿ ಲಭ್ಯವಿದೆ. ಪ್ರಿಪೇಡ್‌ ಮೊಬೈಲ್‌ ರಿಚಾರ್ಚ್ ಯೋಜನೆಗಳು, ಮೇನ್‌ ಅಕೌಂಟ್ ಬ್ಯಾಲೆನ್ಸ್‌, ರಿಚಾರ್ಜ್ ಪ್ಲ್ಯಾನ್‌ನ ವಾಲಿಡಿಟಿ, ಹೊಸ ಆಫರ್‌ಗಳನ್ನು ಗ್ರಾಹಕರು ಬಿಎಸ್‌ಎನ್‌ಎಲ್‌ನ ಈ ಹೊಸ ಆಪ್‌ ಸೆಲ್ಫ್‌ಕೇರ್‌ ಮೂಲಕ ತಿಳಿಯಬಹುದು.

ಬಿಎಸ್‌ಎನ್‌ಎಲ್‌ ವಾರ್ಷಿಕ ಯೋಜನೆಗಳಲ್ಲಿ ಬದಲಾವಣೆ!ಬಿಎಸ್‌ಎನ್‌ಎಲ್‌ ವಾರ್ಷಿಕ ಯೋಜನೆಗಳಲ್ಲಿ ಬದಲಾವಣೆ!

ಇನ್ನು ಬಿಎಸ್‌ಎನ್‌ಎಲ್‌ ಗ್ರಾಹಕರು ತಮ್ಮ ಟಾರಿಫ್‌ ಪ್ಲಾನ್‌, ಚಾಲ್ತಿಯಲ್ಲಿರುವ ಯೋಜನೆ, ಉಚಿತ ಡೇಟಾ, ಒಟ್ಟು ಉಪಯೋಗಿಸಿದ ಡೇಟಾ, ಉಳಿದಿರುವ ಡೇಟಾದ ಬಗೆಗಿನ ಮಾಹಿತಿಯನ್ನು ಕೂಡಾ ಬಿಎಸ್‌ಎನ್‌ಎಲ್‌ನ ಸೆಲ್ಫ್‌ಕೇರ್‌ ಆಪ್‌ ಮೂಲಕ ಪಡೆಯಬಹುದು.

BSNL launches Selfcare app for customers, will help users with recharge and more

ಬಿಎಸ್‌ಎನ್‌ಎಲ್‌ನ ಸೆಲ್ಫ್‌ಕೇರ್‌ ಆಪ್‌ನಲ್ಲಿ ಬಿಲ್‌ ಪಾವತಿ ಮಾಡಬಹುದು. ಹಾಗೆಯೇ ರಿಚಾರ್ಜ್ ಕೂಡಾ ಮಾಡಬಹುದು. ನಿಮ್ಮ ಖಾತೆಯನ್ನು ಕೂಡಾ ನಿರ್ವಹಣೆ ಮಾಡಬಹುದು. ನಿಮ್ಮ ವ್ಯವಹಾರದ ಬಗ್ಗೆ ತಿಳಿಯಬಹುದು. ವಿಶೇಷ ಆಫರ್‌ಗಳು, ಸಹಾಯ, ಸಲಹೆ, ಬೆಂಬಲ, ಬಿಎಸ್‌ಎನ್‌ಎಲ್‌ ರಿವಾರ್ಡ್, ಭಾಷೆ, ಸೆಟ್ಟಿಂಗ್‌, ಲಾಗ್‌ಔಟ್‌ ಹೀಗೆ ಹಲವಾರು ಆಯ್ಕೆಗಳು ಈ ಆಪ್‌ನಲ್ಲಿ ಇದೆ. ಬಿಎಸ್‌ಎನ್‌ಎಲ್‌ ಗ್ರಾಹಕರು ತನ್ನ ಮೊಬೈಲ್‌ನಲ್ಲಿ ಈ ಆಪ್‌ ಅನ್ನು ಡೌನ್‌ಲೋಡ್‌ ಮಾಡಿ, ಬಳಿಕ ತಮ್ಮ ಮೊಬೈಲ್‌ ಸಂಖ್ಯೆಗೆ ಬರುವ ಒಟಿಪಿಯನ್ನು ಹಾಕಿ ರಿಜಿಸ್ಟರ್‌ ಮಾಡಬಹುದು. ಪ್ರಿಪೇಡ್‌ ಹಾಗೂ ಪೋಸ್ಟ್‌ಪೇಡ್‌ ಗ್ರಾಹಕರು ತಾವು ಎಷ್ಟು ರಿಚಾರ್ಜ್ ಮಾಡಿದ್ದಾರೆ, ಯಾವಾಗ ಮಾಡಿದ್ದಾರೆ ಎಂಬುವುದನ್ನು ತಿಳಿಯಬಹುದು. ಹಾಗೆಯೇ ವಿದ್ಯುತ್‌ ಬಿಲ್‌ ಪಾವತಿ ಮಾಡಬಹುದು ಹಾಗೂ ರಿಚಾರ್ಚ್ ಮಾಡಿಕೊಳ್ಳಬಹುದು.

ಬಿಎಸ್‌ಎನ್‌ಎಲ್‌ ಸೆಲ್ಫ್‌ಕೇರ್‌ ಮೊಬೈಲ್‌ ಆಪ್‌ ತಮ್ಮ ಗ್ರಾಹಕರಿಗೆ ಫಿಂಗರ್‌ ಪ್ರಿಂಟ್‌ ಸುರಕ್ಷತೆಯನ್ನು ಕೂಡಾ ನೀಡುತ್ತದೆ. ಆದ್ದರಿಂದ ಅನಧಿಕೃತವಾಗಿ ಆಪ್‌ ಅನ್ನು ಯಾರೂ ಕೂಡಾ ತೆರೆಯಲು ಸಾಧ್ಯವಾಗುವುದಿಲ್ಲ. ಈ ಆಪ್‌ನಲ್ಲಿ ರೀಚಾರ್ಜ್ ಮಾಡಲು ಗ್ರಾಹಕರು ರಿಜಾರ್ಜ್ ನೌ ಆಯ್ಕೆಗೆ ಹೋಗಿ ಮಾಡಿಕೊಳ್ಳಬಹುದು. ತಮಗೆ ಬೇಕಾದ ಪ್ಲಾನ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ನಿಮ್ಮ ರಿಚಾರ್ಜ್ ಒಪ್ಪಿಗೆಗೆ ಎಸ್‌ಎಮ್‌ಎಸ್‌ ಮೂಲಕ ಖಾತರಿ ಪಡಿಸಲಾಗುತ್ತದೆ. ಇನ್ನು ಬಿಎಸ್‌ಎನ್‌ಎಲ್‌ ಪೋಸ್ಟ್‌ ಪೇಡ್‌ ಮೊಬೈಲ್‌ ಗ್ರಾಹಕರು ಕೂಡಾ ಬಿಲ್‌ಗಳನ್ನು ಪಾವತಿ ಮಾಡಬಹುದು. ತಮ್ಮ ಭಾಷೆಯನ್ನು ಕೂಡಾ ಆಯ್ಕೆ ಮಾಡಿಕೊಳ್ಳಬಹುದು.

4 ವರ್ಷದ ಬಳಿಕ ಜಿಯೋವನ್ನು ಹಿಂದಿಕ್ಕಿದ ಭಾರ್ತಿ ಏರ್‌ಟೆಲ್: ಷೇರು ಬೆಲೆ ಏರಿಕೆ4 ವರ್ಷದ ಬಳಿಕ ಜಿಯೋವನ್ನು ಹಿಂದಿಕ್ಕಿದ ಭಾರ್ತಿ ಏರ್‌ಟೆಲ್: ಷೇರು ಬೆಲೆ ಏರಿಕೆ

ಬಿಲ್‌ ಪಾವತಿ ಮಾಡಲು ಬಯಸುವ ಬಿಎಸ್‌ಎನ್‌ಎಲ್‌ ಗ್ರಾಹಕರು, ಬಿಎಸ್‌ಎನ್‌ಎಲ್‌ನ ಸೆಲ್ಫ್‌ಕೇರ್‌ ಆಪ್‌ನಲ್ಲಿ ಹೋಮ್‌ ಪೇಜ್‌ನಲ್ಲಿ ಇರುವ ಬಿಲ್‌ ಪೇ ಆಯ್ಕೆಯನ್ನು ಒತ್ತಬೇಕು. ಬಳಿಕ ತಮ್ಮ ಪೋಸ್ಟ್‌ ಪೇಡ್‌ ಮೊಬೈಲ್‌ ಸಂಖ್ಯೆ ಅಥವಾ ಅಕೌಂಟ್‌ ಸಂಖ್ಯೆಯನ್ನು ಹಾಕಬೇಕು. ಬಳಿಕ ನಿಮಗೆ ಬಿಲ್‌ ಪಾವತಿ ಮಾಡಲಿರುವ ನೂತನ ಅಪ್‌ಡೇಟ್‌ ಬರಲಿದೆ. ಗ್ರಾಹಕರು ಕ್ವಿಕ್‌ ಪೇ ಆಯ್ಕೆಯನ್ನು ಮಾಡಬಹುದು. ಈ ಬಿಎಸ್‌ಎನ್‌ಎಲ್‌ ಆಪ್‌ನಲ್ಲಿ ಎರಡು ಭಾಷೆಯ ಆಯ್ಕೆ ಇದೆ. ಇಂಗ್ಲೀಷ್‌ ಹಾಗೂ ಹಿಂದಿ ಎರಡು ಆಯ್ಕೆ ಆಗಲಿದೆ.

(ಒನ್‌ಇಂಡಿಯಾ ಸುದ್ದಿ)

English summary
BSNL launches Selfcare app for customers, will help users with recharge plans and bills. Read More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X