ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Q4:ಬಾಷ್ ತೆರಿಗೆ ನಂತರದ ಲಾಭ 482 ಕೋಟಿ ರು ಗಳಿಕೆ

|
Google Oneindia Kannada News

ಬೆಂಗಳೂರು, ಮೇ 20:ಜಾಗತಿಕ ತಂತ್ರಜ್ಞಾನ ಮತ್ತು ಸೇವೆಗಳ ಪೂರೈಕೆದಾರ ಸಂಸ್ಥೆ ಬಾಷ್ ಲಿಮಿಟೆಡ್ 2020-21 ನೇ ಹಣಕಾಸು ಸಾಲಿನಲ್ಲಿ ಕಾರ್ಯಾಚರಣೆಗಳ ಮೂಲಕ ಒಟ್ಟು 9,718 ಕೋಟಿ ರೂಪಾಯಿಗಳ (1.12 ಬಿಲಿಯನ್ ಯೂರೋಗಳು) ಆದಾಯವನ್ನು ಗಳಿಸಿದೆ. ಆದಾಗ್ಯೂ, ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ 1.3% ರಷ್ಟು ಕಡಿಮೆ ದಾಖಲಾಗಿದೆ. ಹೊರತಾದ ಉತ್ಪನ್ನಗಳ ತೆರಿಗೆ ಪೂರ್ವ ಲಾಭ(ಪಿಬಿಟಿ) 19.9% ರಷ್ಟು ಕುಸಿದಿದ್ದು, 1,311 ಕೋಟಿ ರೂಪಾಯಿಗಳನ್ನು ಗಳಿಸಿದೆ. 2020-21 ನೇ ಹಣಕಾಸು ಸಾಲಿನಲ್ಲಿ ಕಾರ್ಯಾಚರಣೆಗಳಿಂದ ಹೊರತಾದ ಉತ್ಪನ್ನಗಳ ಮುನ್ನ ಆದಾಯ ಪಿಬಿಟಿ 13.5% ಕ್ಕೆ ತಲುಪಿದೆ.

2020-21 ನೇ ಹಣಕಾಸು ಸಾಲಿನಲ್ಲಿ ಬಾಷ್ ಲಿಮಿಟೆಡ್ ವಿವಿಧ ಪುನರ್ ರಚನೆ, ಪುನರ್ ಕೌಶಲ್ಯ ಮತ್ತು ಪುನರ್ ನಿಯೋಜನೆ ಉಪಕ್ರಮಗಳಿಗಾಗಿ 743 ಕೋಟಿ ರೂಪಾಯಿಗಳ ಅವಕಾಶವನ್ನು ಕಲ್ಪಿಸಿಕೊಂಡಿತ್ತು. ಹೊರತಾದ ಉತ್ಪನ್ನಗಳ ನಂತರದ ಪಿಬಿಟಿ 567 ಕೋಟಿ ರೂಪಾಯಿಗಳಾಗಿತ್ತು ಅಥವಾ ಕಾರ್ಯಾಚರಣೆಗಳ 5.8% ಒಟ್ಟು ಆದಾಯವಾಗಿತ್ತು. ತೆರಿಗೆ ನಂತರದ ಲಾಭವು(ಪಿಎಟಿ) 482 ಕೋಟಿ ರೂಪಾಯಿಗಳಾಗಿದೆ.ಪಿಎಟಿ ಕಾರ್ಯಾಚರಣೆಗಳಿಂದ ಒಟ್ಟು ಆದಾಯದ 10.7% ರಷ್ಟು ದಾಖಲಾಗಿದೆ. 2020-21 ನೇ ಹಣಕಾಸು ಸಾಲಿನಲ್ಲಿ ಆಡುಗೋಡಿ ಕ್ಯಾಂಪಸ್ ಅನ್ನು ಸ್ಮಾರ್ಟ್ ಕ್ಯಾಂಪಸ್ ಅನ್ನಾಗಿ ಪರಿವರ್ತನೆ ಮಾಡುವಂತಹ ಪ್ರಮುಖ ಕಾರ್ಯಗಳಿಗಾಗಿ 246 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಾಗಿದೆ.

ಕೋವಿಡ್ ಸೋಂಕಿತರ ಚಿಕಿತ್ಸೆಗೆ ಕ್ರೀಡಾ ಸಂಕೀರ್ಣ ಬಿಟ್ಟುಕೊಟ್ಟ ಬಾಷ್ಕೋವಿಡ್ ಸೋಂಕಿತರ ಚಿಕಿತ್ಸೆಗೆ ಕ್ರೀಡಾ ಸಂಕೀರ್ಣ ಬಿಟ್ಟುಕೊಟ್ಟ ಬಾಷ್

ಈ ಹಣಕಾಸು ಸಾಲಿನ ಫಲಿತಾಂಶದ ಬಗ್ಗೆ ಮಾತನಾಡಿದ ಬಾಷ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಬಾಷ್ ಇಂಡಿಯಾದ ಅಧ್ಯಕ್ಷ ಸೌಮಿತ್ರ ಭಟ್ಟಚಾರ್ಯ, ''2020 ರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಶೂನ್ಯ ಮಾರಾಟದ ಸನಿಹ ಇದ್ದಾಗ್ಯೂ ಕೃಷಿ ಕ್ಷೇತ್ರ ಅದರಲ್ಲೂ ಪ್ರಮುಖವಾಗಿ ಟ್ರಾಕ್ಟರ್ ವ್ಯವಹಾರದಲ್ಲಿ ಬೇಡಿಕೆ ಹೆಚ್ಚಾಗಿ ಕಂಡುಬಂದಿತ್ತು. 2020-21 ನೇ ಹಣಕಾಸು ಸಾಲಿನ ಎರಡನೇ ತ್ರೈಮಾಸಿಕದಿಂದ ಉದ್ಯಮವು ಚೇತರಿಕೆ ಕಾಣಲಾರಂಭಿಸಿತು. ಆದಾಗ್ಯೂ, ಮಾರುಕಟ್ಟೆಯಲ್ಲಿ ಅನಿಶ್ಚಿತತೆಯಿದ್ದ ಪರಿಣಾಮ ಮುಂದುವರಿದಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೂರೈಕೆ ಜಾಲದಲ್ಲಿ ಏರಿಳಿತಗಳು ಮತ್ತು ಅನಿಶ್ಚಿತತೆಗಳು ಮುಂದುವರಿದ ಪರಿಣಾಮವು ಆಟೋ ಕ್ಷೇತ್ರದ ಮೇಲೆ ಬೀರಿತು. ಇದಲ್ಲದೇ, ಪವರ್ ಟೂಲ್ಸ್ ವಿಭಾಗ ವಿಶೇಷವಾಗಿ ನಿರ್ಮಾಣ ಮತ್ತು ಇ-ಕಾಮರ್ಸ್ ಕ್ಷೇತ್ರಗಳಲ್ಲಿ ಪ್ರಗತಿಯನ್ನು ಕಂಡಿದ್ದೇವೆ'' ಎಂದು ತಿಳಿಸಿದರು.

Bosch Q4 results: Net profit surges 495% to Rs 482 crore

Recommended Video

Ind vs Nz WTC finals ವೀಕ್ಷಕರಿಗೆ ಅವಕಾಶ | Oneindia Kannada

ಮಾರ್ಚ್ 31, 2021 ಕ್ಕೆ ಕೊನೆಗೊಂಡ 4 ನೇ ತ್ರೈಮಾಸಿಕದಲ್ಲಿ ಬಾಷ್ ಲಿಮಿಟೆಡ್ ಕಾರ್ಯಾಚರಣೆಗಳಿಂದ ಒಟ್ಟು 3,218 ಕೋಟಿ ರೂಪಾಯಿಗಳ ಆದಾಯವನ್ನು ಗಳಿಸಿದ್ದು, ಇದು ಹಿಂದಿನ ವರ್ಷದ 4 ನೇ ತ್ರೈಮಾಸಿಕಕ್ಕೆ ಹೋಲಿಸಿದರೆ 43.8 % ರಷ್ಟು ಹೆಚ್ಚಾಗಿದೆ. ಪ್ರಸಕ್ತ ತ್ರೈಮಾಸಿಕದಲ್ಲಿ ಪಿಬಿಟಿ 640 ಕೋಟಿ ರೂಪಾಯಿಗಳಾಗಿದ್ದು, ಹಿಂದಿನ ವರ್ಷದ ಇದೇ ಅವಧಿಗಿಂತ 77.2 % ಹೆಚ್ಚಾಗಿದೆ.

English summary
Automotive components major Bosch reported a sharp growth in revenue and profit with net profit grew five-fold to Rs 482 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X