• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಾಷ್ 3ನೇ ತ್ರೈಮಾಸಿಕದಲ್ಲಿ ಆದಾಯ, ಲಾಭ ಎಲ್ಲವೂ ಏರಿಕೆ

|

ಬೆಂಗಳೂರು, ಫೆಬ್ರವರಿ 11: ತಂತ್ರಜ್ಞಾನ ಮತ್ತು ಸೇವೆಗಳ ಪೂರೈಕೆಯಲ್ಲಿ ಮುಂಚೂಣಿಯಲ್ಲಿರುವ ಬಾಷ್ ಲಿಮಿಟೆಡ್ 2020-2021 ನೇ ಹಣಕಾಸು ಸಾಲಿನ 3 ನೇ ತ್ರೈಮಾಸಿಕದಲ್ಲಿ 3,030 ಕೋಟಿ ರೂಪಾಯಿಗಳ ಒಟ್ಟು ಆದಾಯ ಗಳಿಸಿದೆ. ಈ ಮೂಲಕ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.19.4ರಷ್ಟು ಹೆಚ್ಚಳ ಸಾಧಿಸಿದೆ. ತೆರಿಗೆ ಪೂರ್ವ ಲಾಭ(PBT)ವು 365.7ಕೋಟಿ ರೂಪಾಯಿಗಳಾಗಿದ್ದು, ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.5.2 ರಷ್ಟು ಏರಿಕೆಯಾಗಿದೆ.

ಬಾಷ್ 3ಆರ್ ರಚನಾತ್ಮಕವಾದ ಪುನರ್ ರಚನೆ, ಪುನರ್ ಕೌಶಲ್ಯ ಮತ್ತು ಇತರೆ ರೂಪಾಂತರ ಯೋಜನೆಗಳಿಗೆ ಹೂಡಿಕೆ ಮಾಡುವುದನ್ನು ಮುಂದುವರಿಸುತ್ತಿದೆ. ಇದಕ್ಕೆ ಬೆಂಬಲ ನೀಡುವ ಸಂಬಂಧ ಸಂಸ್ಥೆಯು 2020 ರ ಡಿಸೆಂಬರ್ 31ಕ್ಕೆ ಕೊನೆಗೊಂಡ ತ್ರೈಮಾಸಿಕದ ವೇಳೆಗೆ 146.6 ಕೋಟಿ ರೂಪಾಯಿಗಳನ್ನು ಅಸಾಧಾರಣ ಉತ್ಪನ್ನ ರೂಪದಲ್ಲಿ ನೀಡಿದೆ.

2 ನೇ ತ್ರೈಮಾಸಿಕ: ಬಾಷ್ ಲಿಮಿಟೆಡ್‌ಗೆ ಶೇ. 12.4 ರಷ್ಟು ತೆರಿಗೆ ಪೂರ್ವ ಲಾಭ

ಅಸಾಧಾರಣ ಉತ್ಪನ್ನಕ್ಕೆ ಅವಕಾಶ ನೀಡಿದ ನಂತರ ತೆರಿಗೆ ಪೂರ್ವ ಲಾಭವು 219 ಕೋಟಿ ರೂಪಾಯಿ ಮತ್ತು ತೆರಿಗೆ ನಂತರದ ಲಾಭವು 185.7 ಕೋಟಿ ರೂಪಾಯಿಗಳಾಗಿದೆ. ಕಾರ್ಯಾಚರಣೆಗಳಿಂದ ಬಂದ ಒಟ್ಟು ಆದಾಯವು ಅಸಾಧಾರಣ ಉತ್ಪನ್ನಗಳ ಪೂರ್ವದ ತೆರಿಗೆ ಪೂರ್ವ ಲಾಭವು ಶೇ.9.8 ರಷ್ಟಾಗಿದೆ.

 2020 ರ ಡಿಸೆಂಬರ್ 31 ಕ್ಕೆ ಕೊನೆಗೊಂಡ ಮೂರನೇ ತ್ರೈಮಾಸಿಕ

2020 ರ ಡಿಸೆಂಬರ್ 31 ಕ್ಕೆ ಕೊನೆಗೊಂಡ ಮೂರನೇ ತ್ರೈಮಾಸಿಕ

2020 ರ ಡಿಸೆಂಬರ್ 31 ಕ್ಕೆ ಕೊನೆಗೊಂಡ ಮೂರನೇ ತ್ರೈಮಾಸಿಕ ಅವಧಿಯಲ್ಲಿ ಬಾಷ್ ಲಿಮಿಟೆಡ್ ಕಾರ್ಯಾಚರಣೆಗಳಿಂದ 6500 ಕೋಟಿ ರೂಪಾಯಿಗಳ ಒಟ್ಟು ಆದಾಯವನ್ನು ಗಳಿಸಿದೆ. ಇದು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.14.5ರಷ್ಟು ಕಡಿಮೆಯಾಗಿದೆ. ಅಸಾಧಾರಣ ಉತ್ಪನ್ನದ ಪೂರ್ವದ ಪಿಬಿಟಿ 670.9 ಕೋಟಿ ರೂಪಾಯಿಗಳಾಗಿದ್ದು, ಇದು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ, ಶೇ.47.4 ರಷ್ಟು ಕಡಿಮೆಯಾಗಿದೆ. ಅಸಾಧಾರಣ ಉತ್ಪನ್ನಕ್ಕೆ ಅವಕಾಶ ನೀಡಿದ ನಂತರ ತೆರಿಗೆ ಪೂರ್ವ ನಷ್ಟವು 72.9 ಕೋಟಿ ರೂಪಾಯಿಗಳಾಗಿದೆ. ಅದೇ ರೀತಿ ತೆರಿಗೆ ನಂತರದ ನಷ್ಟವು 0.49 ಕೋಟಿ ರೂಪಾಯಿಗಳಾಗಿದೆ.

 ಅಧ್ಯಕ್ಷ ಸೌಮಿತ್ರ ಭಟ್ಟಾಚಾರ್ಯ ಪ್ರತಿಕ್ರಿಯೆ

ಅಧ್ಯಕ್ಷ ಸೌಮಿತ್ರ ಭಟ್ಟಾಚಾರ್ಯ ಪ್ರತಿಕ್ರಿಯೆ

ಈ ಬಗ್ಗೆ ಮಾತನಾಡಿದ ಬಾಷ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಬಾಷ್ ಗ್ರೂಪ್ ಇನ್ ಇಂಡಿಯಾದ ಅಧ್ಯಕ್ಷ ಸೌಮಿತ್ರ ಭಟ್ಟಾಚಾರ್ಯ, ''ಕಳೆದ ತ್ರೈಮಾಸಿಕದ ಹಬ್ಬಗಳ ಸಂದರ್ಭದಲ್ಲಿ ನಿರೀಕ್ಷೆಗಿಂತ ಹೆಚ್ಚು ಮಾರಾಟವನ್ನು ವಿಶೇಷವಾಗಿ ಟ್ರಾಕ್ಟರ್ ಮತ್ತು ಪ್ಯಾಸೆಂಜರ್ ಆಟೋಮೋಟಿವ್ ವಿಭಾಗದಲ್ಲಿ ಕಾಣಲಾಗಿದೆ. ಪೂರೈಕೆ ಸರಪಳಿಯಲ್ಲಿನ ಅಡೆತಡೆಗಳು ಪ್ರಗತಿಗೆ ಅಡ್ಡಿಯಾಗುವುದು ಮುಂದುವರಿದಿದೆ. ಕಳೆದ ವರ್ಷಾಂತ್ಯದಿಂದ ಉದ್ಯಮವು ಸೆಮಿಕಂಡಕ್ಟರ್ ಗಳ ಕೊರತೆಯನ್ನು ಎದುರಿಸುತ್ತಿದೆ. ಇದರ ಪರಿಣಾಮ ಭಾರತದಲ್ಲಿ ಕಂಪನಿಯ ಆಮದು ಮತ್ತು ಆಟೋಮೋಟಿವ್ ಉತ್ಪಾದನೆಯ ಮೇಲೆ ಬೀರಿದೆ. ಬಾಷ್ ಪ್ರಸ್ತುತ ಮಾರುಕಟ್ಟೆಯಲ್ಲಿ ಬಿಗುವಿನ ವಾತಾವರಣ ಇದ್ದಾಗ್ಯೂ ತನ್ನ ಪೂರೈಕೆ ಜಾಲವನ್ನು ಉತ್ತಮವಾಗಿಟ್ಟುಕೊಳ್ಳುವತ್ತ ಗಮನ ಹರಿಸಿದೆ. ಯಾವುದೇ ಸಮಸ್ಯೆಗಳಿದ್ದಾಗ್ಯೂ ನೇರವಾಗಿ ಗ್ರಾಹಕರು ಮತ್ತು ಪೂರೈಕೆದಾರರೊಂದಿಗೆ ಚರ್ಚೆ ಮಾಡಿ ಅವುಗಳನ್ನು ಬಗೆಹರಿಸುತ್ತಿದೆ'' ಎಂದು ತಿಳಿಸಿದರು.

 ವ್ಯವಹಾರ ವಿಭಾಗದ ಸಾಧನೆಯ ಪಕ್ಷಿನೋಟ

ವ್ಯವಹಾರ ವಿಭಾಗದ ಸಾಧನೆಯ ಪಕ್ಷಿನೋಟ

2020-21 ನೇ ಸಾಲಿನ 3 ನೇ ತ್ರೈಮಾಸಿಕದಲ್ಲಿ ವ್ಯವಹಾರ ವಿಭಾಗದಲ್ಲಿನ ಪವರ್ ಟ್ರೇನ್ ಸಲೂಶನ್ಸ್ ಮಾರಾಟದಲ್ಲಿ ಹೆಚ್ಚಳವಾಗಿರುವುದು ಬಾಷ್ ಲಿಮಿಟೆಡ್ ನ ಮೊಬಿಲಿಟಿ ಸಲೂಶನ್ಸ್ ವಹಿವಾಟನ್ನು ಶೇ.46ರಷ್ಟು ಹೆಚ್ಚಳವಾಗಲು ನೆರವಾಗಿದೆ. ದ್ವಿಚಕ್ರ ವಾಹನ ಮತ್ತು ಪವರ್ ಸ್ಪೋರ್ಟ್ಸ್ ವ್ಯವಹಾರವು ಉತ್ತಮವಾಗಿ ಮುಂದುವರಿದಿದೆ. ಮೊಬಿಲಿಟಿ ವಿಭಾಗದ ಹೊರತಾಗಿ ಕಂಪನಿಯ ವ್ಯವಹಾರದಲ್ಲಿ ಶೇ.7.7 ರಷ್ಟು ಕಡಿಮೆಯಾಗಿದೆ. ಯೋಜನೆ ಚಾಲಿತ ವ್ಯವಹಾರಗಳಾದ ಸೋಲಾರ್ ಇಂಧನ ಮತ್ತು ಭದ್ರತಾ ತಂತ್ರಜ್ಞಾನಗಳ ವ್ಯವಹಾರದಲ್ಲಿ ಇಳಿಕೆ ಕಂಡುಬಂದಿದ್ದರಿಂದ ಈ ಹಿನ್ನಡೆ ಉಂಟಾಗಿದೆ.

  ಯಾವುದೇ ಕಾರಣಕ್ಕೂ ಮನೆ ಮುಂದೆ ಗಾಡಿ ನಿಲ್ಲಿಸಬೇಡಿ ! | Oneindia Kannada
   ಕೆಲಸ ಮಾಡುವ ಅತ್ಯುತ್ತಮ ತಾಣ ಎಂಬ ಪ್ರಮಾಣಪತ್ರ

  ಕೆಲಸ ಮಾಡುವ ಅತ್ಯುತ್ತಮ ತಾಣ ಎಂಬ ಪ್ರಮಾಣಪತ್ರ

  2021 ನೇ ಸಾಲಿನಲ್ಲಿ ಕೆಲಸ ಮಾಡುವ ಅತ್ಯುತ್ತಮ ತಾಣ ಎಂಬ ಪ್ರಮಾಣಪತ್ರಕ್ಕೆ ಪಾತ್ರವಾಗಿದೆ. ಈ ಮೆಚ್ಚುಗೆಯು ಬಾಷ್ ಲಿಮಿಟೆಡ್ ಅತ್ಯುತ್ತಮ ಕಾರ್ಯ ನಿರ್ವಹಣೆ ಮತ್ತು ಪ್ರಗತಿ ಸಾಧಿಸುವ ಬದ್ಧತೆಯನ್ನು ಹೆಚ್ಚಿಸಿದೆ ಎಂದು ಸಂಸ್ಥೆ ಹೇಳಿದೆ

  2020 ರ ಡಿಸೆಂಬರ್ 31ಕ್ಕೆ ಕೊನೆಗೊಂಡ ಮೂರನೇ ತ್ರೈಮಾಸಿಕ ಅವಧಿಯಲ್ಲಿ ಕಂಪನಿಯ ಒಟ್ಟಾರೆ ವಹಿವಾಟು ಶೇ.15ರಷ್ಟು ಕಡಿಮೆಯಾಗಿದೆ. ಮೊಬಿಲಿಟಿ ಸಲೂಶನ್ಸ್ ನ ಮಾರಾಟದಲ್ಲಿ ಶೇ.13.3ರಷ್ಟು ಕಡಿಮೆಯಾಗಿದ್ದರೆ, ಮೊಬಿಲಿಟಿ ಸಲೂಶನ್ಸ್ ವಿಭಾಗದ ಹೊರತಾದ ವ್ಯವಹಾರದಲ್ಲಿಯೂ ಶೇ.24.4 ಇಳಿಕೆ ಕಂಡುಬಂದಿದೆ. ಇತರೆ ಉದ್ಯಮದಂತೆಯೇ ಆಟೋಮೋಟಿವ್ ಉದ್ಯಮದಲ್ಲಿನ ಕುಸಿತ ಮತ್ತು ಸಾಂಕ್ರಾಮಿಕದ ಪರಿಣಾಮವು ಬಾಷ್ ಲಿಮಿಟೆಡ್ ಮಾರಾಟದ ಮೇಲೆಯೂ ಬೀರಿದೆ.

  English summary
  Bosch limited has posted increased revenue and 12.1 pc profit before tax in Q3 GY 2020-21.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X