ಫೋನ್ ಪೇ ಮೂಲಕ ಯುಪಿಐ ಬಳಸುವವರು ಈ ಸುದ್ದಿ ಮಿಸ್ ಮಾಡಬೇಡಿ, ಬಹುಮುಖ್ಯ ಮಾಹಿತಿ ಇಲ್ಲಿದೆ | Biometric UPI Payments
ಹಣ ತೆಗೆದುಕೊಂಡು ಹೋಗಿ ಶಾಪಿಂಗ್ ಮಾಡುವುದು & ವಸ್ತುಗಳನ್ನು ಖರೀದಿ ಮಾಡುವುದು ಆಧುನಿಕ ಕಾಲದಲ್ಲಿ ಮುಗಿದು ಹೋಗಿರುವ ಅಧ್ಯಾಯ. ಬಹುತೇಕ ಎಲ್ಲಾ ಕಡೆಯೂ ಯುಪಿಐ ಹಾಗೂ ಕಾರ್ಡ್ ಮೂಲಕವೇ ಎಲ್ಲಾ ವಹಿವಾಟು ಡಿಜಿಟಲ್ ಜಗತ್ತಿನಲ್ಲಿ ನಡೆದು ಹೋಗುತ್ತದೆ. ಅದರಲ್ಲೂ ಫೋನ್‌ಪೇ ಭಾರತದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದು, ಬಹುತೇಕರು ಇದನ್ನೇ ಆದ್ಯತೆಯಾಗಿ ತೆಗೆದುಕೊಳ್ಳುತ್ತಾರೆ.
ಹೀಗಿದ್ದಾಗಲೇ ಇನ್ನುಮುಂದೆ ನೀವು ಯುಪಿಐ ಪಾವತಿ ಮಾಡಲು, ಫೋನ್‌ಪೇ ಬಳಸಿದರೆ ಸಣ್ಣಪುಟ್ಟ ವಹಿವಾಟು ನಡೆಸಲು ಪಿನ್ ಹಾಕುವ ಅಗತ್ಯತೆ ಇರುವುದಿಲ್ಲ. ಈ ರೀತಿ ಹೊಸ ಆಪ್ಷನ್ ಕೊಟ್ಟಿದೆ ಫೋನ್ ಪೇ ಅಪ್ಲಿಕೇಷನ್ ಇದೀಗ, ಬಯೋಮೆಟ್ರಿಕ್ ಮೂಲಕ ಪಾವತಿ ಮಾಡಲು ಈಗ ಅವಕಾಶ ನೀಡಲಾಗಿದೆ. ಫೇಸ್ ಐಡಿ ಅಥವಾ ಫಿಂಗರ್ ಪ್ರಿಂಟ್ ಬಳಸಿ ನೀವು ಪಾವತಿ ಮಾಡಲು ಫೋನ್‌ಪೇ ಹೊಸ ಅವಕಾಶ ಕಲ್ಪಿಸಿದೆ. ಹಾಗಾದರೆ ಇದರಿಂದ ಏನೆಲ್ಲಾ ಅನುಕೂಲ ಆಗಲಿದೆ? ಬನ್ನಿ ತಿಳಿಯೋಣ.

5,000 ರೂಪಾಯಿ ಒಳಗೆ ಇರಬೇಕು
ಫಿನ್‌ಟೆಕ್ ಪ್ಲಾಟ್‌ಫಾರ್ಮ್ ತನ್ನ ಗ್ರಾಹಕರಿಗೆ ಹೊಸ ಅಪ್ಷನ್ ತಂದಿದೆ, ಯುಪಿಐ ಮೂಲಕ ಪಾವತಿ ಮಾಡುವ ಫೋನ್‌ಪೇ ಬಳಕೆದಾರರಿಗೆ ಇದೀಗ ಪಿನ್ ಬಳಸುವ ಅವಶ್ಯಕತೆ ಇರುವುದಿಲ್ಲ, ಆದರೆ ಆ ನಿಮ್ಮ ವಹಿವಾಟು 5,000 ರೂಪಾಯಿ ಒಳಗೆ ಇರಬೇಕು. ಸಣ್ಣಪುಟ್ಟ ವಹಿವಾಟು ಮಾಡಲು, ಈಗ ಸುಮಾರು 5,000 ಒಳಗೆ ಪಾವತಿ ಮಾಡಲು ಗ್ರಾಹಕರು ಪಿನ್ ಹಾಕುವ ಬದಲಾಗಿ ನೇರವಾಗಿ ಫಿಂಗರ್ ಪ್ರಿಂಟ್ ಅಥವಾ ತಮ್ಮ ಫೇಸ್ ಐಡಿ ಬಳಕೆ ಮಾಡಬಹುದು ಎಂದು ತಿಳಿಸಲಾಗಿದೆ. ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ನ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅಥವಾ ಫೇಸ್ ಐಡಿ ಮೂಲಕ ಪಾವತಿಸಬಹುದಾಗಿದೆ.
ಡಬಲ್ ವೇರಿಫಿಕೇಷನ್ ಸೌಲಭ್ಯ ಲಭ್ಯ
ಹಾಗೇ ಗ್ರಾಹಕರ ಸುರಕ್ಷತೆ ದೃಷ್ಟಿಯಿಂದ ಡಬಲ್ ವೇರಿಫಿಕೇಷನ್ ಅಂದ್ರೆ, ಎರಡು ಬಾರಿ ಪರಿಶೀಲನೆಗೆ ಅವಕಾಶ ಕೂಡ ಇರಲಿದೆ. 5,000 ರೂಪಾಯಿ ಮೀರಿದ ಯುಪಿಐ ಪಾವತಿಗಳಿಗೆ ಈ ಹೊಸ ಆಪ್ಷನ್ ಅನ್ವಯ ಆಗುವುದಿಲ್ಲ, ಆಗ ಗ್ರಾಹಕರು ತಮ್ಮ ಪಿನ್ ಬಳಸಬೇಕಾಗುತ್ತದೆ. ಈ ಮೂಲಕ ಗ್ರಾಹಕರು ತಮ್ಮ ಸ್ನೇಹಿತರು & ಕುಟುಂಬಕ್ಕೆ ಹಣ ಕಳುಹಿಸಲು ಇದು ಸಹಕಾರಿ ಆಗಲಿದೆ. ಅಂಗಡಿಯಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ನೇರವಾಗಿ ಪಿನ್ ಹಾಕದೆ ಪಾವತಿಸಬಹುದು. ಆನ್‌ಲೈನ್ ಪಾವತಿ & ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲನೆಗೆ ಕೂಡ ಇದು ಸಹಕಾರಿ ಆಗಲಿದೆ.
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ












Click it and Unblock the Notifications