• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವೈಯಕ್ತಿಕ ದುರ್ನಡತೆ ಆರೋಪ: ಫ್ಲಿಪ್ ಕಾರ್ಟ್ ಸಿಇಒ ಸ್ಥಾನ ತ್ಯಜಿಸಿದ ಬಿನ್ನಿ ಬನ್ಸಲ್

|

ಫ್ಲಿಪ್ ಕಾರ್ಟ್ ನ ಸಹ ಸಂಸ್ಥಾಪಕ ಹಾಗೂ ಸಮೂಹದ ಸಿಇಒ ಬಿನ್ನಿ ಬನ್ಸಲ್ ತಕ್ಷಣದಿಂದಲೇ ತಮ್ಮ ಸ್ಥಾನವನ್ನು ತ್ಯಜಿಸಿದ್ದಾರೆ. ವಾಲ್ ಮಾರ್ಟ್ ಕಂಪನಿಯು ಫ್ಲಿಪ್ ಕಾರ್ಟ್ ಮಾಲೀಕತ್ವದ ಬಹು ಪಾಲು ಖರೀದಿ ಮಾಡಿದ ಆರು ತಿಂಗಳ ಒಳಗೆ ಈ ಬೆಳವಣಿಗೆ ನಡೆದಿದೆ.

ಮತ್ತೊಬ್ಬ ಸಹ ಸಂಸ್ಥಾಪಕ ಸಚಿನ್ ಬನ್ಸಲ್ ಜೊತೆಗೂಡಿ ಬಿನ್ನಿ ಫ್ಲಿಪ್ ಕಾರ್ಟ್ ನಲ್ಲಿ ಇದ್ದರು. ಕಂಪನಿ ಮಾರಾಟದ ವೇಳೆಯಲ್ಲೇ ಸಚಿನ್ ಬನ್ಸಲ್ ಹೊರ ನಡೆದಿದ್ದರು. ಫ್ಲಿಪ್ ಕಾರ್ಟ್ ನ ಆಡಳಿತ ಮಂಡಳಿಯಲ್ಲಿ ಬಿನ್ನಿ ಮುಂದುವರಿಯುತ್ತಾರೋ ಇಲ್ಲವೋ ಎಂಬ ಬಗ್ಗೆ ಖಚಿತವಾಗಿಲ್ಲ.

ಫ್ಲಿಪ್ ಕಾರ್ಟ್ ಜತೆಗಿನ ವಿಲೀನ ವಿಳಂಬ : ವಾಲ್ ಮಾರ್ಟ್

ಬಿನ್ನಿ ಬನ್ಸಲ್ ವಿರುದ್ಧ ವೈಯಕ್ತಿಕ ದುರ್ನಡತೆ ಆರೋಪದ ಮೇಲೆ ಫ್ಲಿಪ್ ಕಾರ್ಟ್ ಹಾಗೂ ವಾಲ್ ಮಾರ್ಟ್ ನಿಂದ ಸ್ವತಂತ್ರ ತನಿಖೆಯೊಂದು ನಡೆದಿತ್ತು. ಆ ನಂತರ ತಮ್ಮ ಹುದ್ದೆ ತ್ಯಜಿಸುವ ನಿರ್ಧಾರಕ್ಕೆ ಅವರು ಬಂದಿದ್ದಾರೆ.

ತನಿಖೆಯು ಸಂಪೂರ್ಣವಾಗಿತ್ತು. ದೂರುದಾರರು ಆರೋಪಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯಾಧಾರ ಸಿಕ್ಕಿಲ್ಲ. ಆದರೆ ತೀರ್ಪು ಕೈಗೊಳ್ಳುವ ವೇಳೆಯಲ್ಲಿ ಇತರ ಲೋಪಗಳು ಕಂಡುಬಂದಿವೆ. ಮುಖ್ಯವಾಗಿ ಪಾರದರ್ಶಕತೆ ಹಾಗೂ ಆ ಸನ್ನಿವೇಶಕ್ಕೆ ಬಿನ್ನಿ ಪ್ರತಿಕ್ರಿಯೆ ನೀಡಿದ ರೀತಿ ಬಗ್ಗೆ ಲೋಪಗಳು ಕಂಡುಬಂದಿವೆ. ಆದ್ದರಿಂದ ಅವರ ರಾಜೀನಾಮೆಯನ್ನು ಸ್ವೀಕರಿಸಿದ್ದೇವೆ ಎಂದು ವಾಲ್ ಮಾರ್ಟ್ ಹೇಳಿಕೆಯಲ್ಲಿ ತಿಳಿಸಲಾಗಿದೆ.

English summary
Flipkart's co-founder & group CEO, Binny Bansal has stepped down from the company with immediate effect, less than six months after Walmart Inc acquired majority ownership in the web retailer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X