ಜಗತ್ತಿನ ಮೊದಲ ಟ್ರಿಲಿಯನೇರ್ ಆಗ್ತಾರಂತೆ ಬಿಲ್ ಗೇಟ್ಸ್!

Posted By:
Subscribe to Oneindia Kannada

ಹ್ಯೂಸ್ಟನ್, ಜನವರಿ 25: ನಮಗೆಲ್ಲ ಈಗ ಬಿಲಯನೇರ್ ಎಂಬ ಪದದ ಪರಿಚಯವಿದೆ. ಮುಂದಿನ 25 ವರ್ಷದಲ್ಲಿ ಮೈಕ್ರೋಸಾಫ್ಟ್ ಸ್ಥಾಪಕ ಬಿಲ್ ಗೇಟ್ಸ್ ಟ್ರಿಲಿಯನೇರ್ ಆಗ್ತಾರಂತೆ. ಹೊಸ ಅಧ್ಯಯನವೊಂದು ಇಂಥದ್ದೊಂದು ಭವಿಷ್ಯ ನುಡಿದಿದೆ. ಆಕ್ಸ್ ಫಾಮ್ ನಡೆಸಿದ ಅಧ್ಯಯನದ ಪ್ರಕಾರ ಮುಂದಿನ 25 ವರ್ಷಕ್ಕೆ, ಅಂದರೆ ಬಿಲ್ ಗೇಟ್ಸ್ 86 ವರ್ಷದವರಾದಾಗ ಅವರ ಆಸ್ತಿ ಮೌಲ್ಯ ಅಷ್ಟಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಆಕ್ಸ್ ಫಾಮ್ ಇಂಟರ್ ನ್ಯಾಷನಲ್ ವರದಿ ಪ್ರಕಾರ, ಬಿಲ್ ಗೇಟ್ಸ್ ಆಸ್ತಿ 2009ರಿಂದ ಈಚೆಗೆ ಪ್ರತಿ ವರ್ಷ ಶೇ 11ರಷ್ಟು ವೃದ್ಧಿಸುತ್ತಿದೆ. ಅದನ್ನೇ ಲೆಕ್ಕಕ್ಕೆ ತೆಗೆದುಕೊಂಡು ಹೇಳುವುದಾದರೆ ಬಿಲ್ ಗೇಟ್ಸ್ ಜಗತ್ತಿನ ಮೊದಲ ಟ್ರಿಲಿಯನೇರ್ ಆಗ್ತಾರೆ. ಅಯ್ಯೋ ಅದೇನ್ರಿ, ಆಗಿಂದ ಟ್ರಿಲಿಯನೇರ್ ಅಂತಲೇ ಹೇಳ್ತಿದ್ದೀರಿ ಹಾಗಂದರೆ ಸಂಖ್ಯೆ ಎಷ್ಟು, ಹಣ ಎಷ್ಟು ಹೇಳಬಾರದಾ ಅಂತೀರಾ?[ಫೋರ್ಬ್ಸ್ ಪ್ರಕಟಿಸಿದ ದೇಶದ 100 ಶ್ರೀಮಂತರ ಪಟ್ಟಿಯಲ್ಲಿ ಯಾರಿದ್ದಾರೆ?]

Bill Gates could soon become world's 1st trillionaire

ಉಸಿರು ಬಿಗಿ ಹಿಡಿದುಕೊಳ್ಳಿ. 10ರ ಸಂಖ್ಯೆ ನಂತರ 12 ಸೊನ್ನೆ ಬರೆದರೆ ಟ್ರಿಲಿಯನ್ ಆಗುತ್ತದೆ. ಇದು ಡಾಲರ್ ಗಳಲ್ಲಿ ಇರುವ ಮೊತ್ತ. ಇಂದಿಗೆ ಅಂದರೆ ಜನವರಿ 25, 2017ಕ್ಕೆ ಡಾಲರ್ ವಿರುದ್ಧ ರುಪಾಯಿ ಮೌಲ್ಯ 68 ಇದೆ. ಅಂದರೆ 10ರ ಮುಂದೆ ಹನ್ನೆರಡು ಸೊನ್ನೆ ಹಾಕಿ, ಅದನ್ನು 68ರಿಂದ ಗುಣಿಸಿದರೆ ಅಷ್ಟು ರುಪಾಯಿ ಆಗುತ್ತದೆ.

ಬಿಲ್ ಗೇಟ್ಸ್ 2006ರಲ್ಲಿ ಮೈಕ್ರೋಸಾಫ್ಟ್ ತೊರೆದಾಗ ಅವರ ಒಟ್ಟು ಆಸ್ತಿ ಮೌಲ್ಯ 50 ಬಿಲಿಯನ್ ಅಮೆರಿಕನ್ ಡಾಲರ್. ಆಕ್ಸ್ ಫಾಮ್ ಪ್ರಕಾರ 2016ರಲ್ಲಿ ಅವರ ಆಸ್ತಿ ಮೌಲ್ಯ 75 ಬಿಲಿಯನ್ ಅಮೆರಿಕನ್ ಡಾಲರ್. ಅದೂ ತಮ್ಮ ಫೌಂಡೇಷನ್ ನಿಂದ ದಾನ-ಧರ್ಮ ಅಂತ ಮಾಡಿದ ನಂತರವೂ ಗೇಟ್ಸ್ ಆಸ್ತಿ ಮೌಲ್ಯ ಇಷ್ಟಿದೆ.[ವಿಶ್ವದ ಕುಬೇರ ರಾಜಕಾರಣಿಗಳು: ಸೋನಿಯಾ ಗಾಂಧಿ ಹೆಸರು ಡಿಲಿಟ್!]

ವರದಿ ಪ್ರಕಾರ ಎಂಟು ಮಂದಿ ಬಿಲಿಯನೇರ್ ಗಳಿದ್ದಾರೆ. 2016ರ ಮಾರ್ಚ್ ನಲ್ಲಿ ಫೋರ್ಬ್ಸ್ ಪ್ರಕಟಿಸಿದ ಬಿಲಿಯನೇರ್ ಗಳ ಪಟ್ಟಿ ಹೀಗಿದೆ. ವಾರನ್ ಬಫೆಟ್, ಬಿಲ್ ಗೇಟ್ಸ್, ಅಮಾನ್ಸಿಯೋ ಒರ್ಟೆಗಾ, ಕಾರ್ಲೋಸ್ ಸ್ಲಿಮ್, ಜೆಫ್ ಬೆಜೋಸ್, ಮಾರ್ಕ್ ಜುಕರ್ ಬರ್ಗ್, ಮೈಕಲ್ ಬ್ಲೂಮ್ ಬರ್ಗ್, ಲ್ಯಾರಿ ಎಲಿಸನ್.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Microsoft founder Bill Gates will be world's first trillionaire in the next 25 years, according to a new research from Oxfam International, the world would get its first trillionaire in the next 25 years, when Bill Gates becomes around 86 years old.
Please Wait while comments are loading...