ಅಂಬಾನಿ, ಜುಕರ್‌ಬರ್ಗ್ ಬಿಗ್ ಡೀಲ್: ಚೆನ್ನೈನ ರಿಲಯನ್ಸ್ ಕ್ಯಾಂಪಸ್ ಆವರಣದಲ್ಲಿ ತಲೆ ಎತ್ತಲಿದೆ ಬಿಗ್ ಪ್ರಾಜೆಕ್ಟ್
ಜಾಮ್‌ನಗರದಲ್ಲಿ ಕಳೆದ ತಿಂಗಳು ದೇಶದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ ಸಮಾರಂಭ ನಡೆಯಿತು. ಈ ಸಮಾರಂಭದಲ್ಲಿ ವಿಶ್ವದ ಪ್ರಸಿದ್ಧ ವ್ಯಕ್ತಿಗಳು ಹಾಜರಿದ್ದರು. ಈ ವೇಳೆ ಜುಕರ್‌ಬರ್ಗ್‌ನಲ್ಲಿ ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆಗ ಎಲ್ಲ ಕ್ಯಾಮೆರಾಗಳು ಅವರ ಮೇಲೆ ಇದ್ದವು. ಈಗ ಇದಕ್ಕಿಂತ ದೊಡ್ಡ ಸುದ್ದಿಯೊಂದು ಬಂದಿದೆ.
ಮಾರ್ಚ್‌ನಲ್ಲಿ ಜಾಮ್‌ನಗರದಲ್ಲಿ ನಡೆದ ಅನಂತ್ ಅಂಬಾನಿ ಅವರ ವಿವಾಹಪೂರ್ವ ಸಮಾರಂಭದಲ್ಲಿ ಮೆಟಾದ ಸಹ-ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಭಾಗವಹಿಸಿದ್ದರು ಎಂದು ಹೇಳಲಾಗುತ್ತಿದೆ. ಈ ವೇಳೆ ಅವರು ರಿಲಯನ್ಸ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದರು. ಒಪ್ಪಂದದ ಬಗ್ಗೆ ಇನ್ನೂ ಅಧಿಕೃತ ಹೇಳಿಕೆ ಬಂದಿಲ್ಲ.

ಪ್ರಸ್ತುತ, ಮೆಟಾ ಉತ್ಪನ್ನಗಳ ಭಾರತೀಯ ಬಳಕೆದಾರರ ಡೇಟಾವನ್ನು ಸಿಂಗಾಪುರದಲ್ಲಿರುವ ಡೇಟಾ ಸೆಂಟರ್‌ಗೆ ಕಳುಹಿಸಲಾಗುತ್ತದೆ. ವರದಿಗಳ ಪ್ರಕಾರ, ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್‌ನ ಮೂಲ ಕಂಪನಿ ಮೆಟಾ ಭಾರತದಲ್ಲಿ ತನ್ನ ಮೊದಲ ಡೇಟಾ ಸೆಂಟರ್ ಅನ್ನು ಚೆನ್ನೈನಲ್ಲಿರುವ ರಿಲಯನ್ಸ್ ಇಂಡಸ್ಟ್ರೀಸ್ ಕ್ಯಾಂಪಸ್‌ನಲ್ಲಿ ಸ್ಥಾಪಿಸುವ ಸಾಧ್ಯತೆ ಇದೆ.
ಚೆನ್ನೈನಲ್ಲಿ ರಿಲಯನ್ಸ್ ಕಂಪನಿಯ ಕ್ಯಾಂಪಸ್ ಸುಮಾರು 10 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ಈ ಕ್ಯಾಂಪಸ್‌ನಲ್ಲಿ 100 ಮೇಗಾ ವ್ಯಾಟ್ ಐಟಿ ಲೋಡ್ ಸಾಮರ್ಥ್ಯವನ್ನು ಹೊಂದಿದೆ. ಈ ಕ್ಯಾಂಪಸ್ ಬ್ರೂಕ್‌ಫೀಲ್ಡ್ ಅಸೆಟ್ ಮ್ಯಾನೇಜ್‌ಮೆಂಟ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಡಿಜಿಟಲ್ ರಿಯಾಲ್ಟಿಯ ಜಂಟಿ ಕ್ಯಾಂಪಸ್ ಆಗಿದೆ. ಈ ಕ್ಯಾಂಪಸ್‌ನಲ್ಲಿ ಮೆಟಾ ಕಂಪನಿ 500 ರಿಂದ 1200 ಕೋಟಿ ರೂಪಾಯಿಗಳವರೆಗೆ ಹೂಡಿಕೆ ಮಾಡಬಹುದು ಎಂದು ವರದಿಯಿಂದ ತಿಳಿದು ಬಂದಿದೆ.
ಮೆಟಾದ ಹೂಡಿಕೆಗೆ ಸಂಬಂಧಿಸಿದಂತೆ ಇನ್ನೂ ಯಾವುದೇ ಷೇರುಗಳನ್ನು ಬದಲಾವಣೆ ಮಾಡಿಕೊಂಡಿಲ್ಲ ಎಂದು ತಿಳಿದು ಬಂದಿದೆ. ಮಾಧ್ಯಮ ವರದಿಗಳ ಪ್ರಕಾರ, ಮೇಟಾ ಕಂಪನಿಯು ಸಣ್ಣ ಡೇಟಾ ಕೇಂದ್ರವನ್ನು ಚೆನ್ನೈನಲ್ಲಿ ಸ್ಥಾಪಿಸಲು ಚಿಂತನೆ ನಡೆಸಿದ್ದು, ಇದರ ಸಾಮರ್ತ್ಯ 10 ರಿಂದ 20 ಮೇಗಾ ವ್ಯಾಟ್ ವರೆಗೆ ಇರುತ್ತದೆ.

ಒಂದು ವೇಳೆ ಈ ಪ್ರಯತ್ನ ಯಶಸ್ವಿ ಆದಲ್ಲಿ ಭಾರತದಲ್ಲಿ ವೇಗವಾಗಿ ಡೇಟಾ ಪ್ರಕ್ರಿಯೆಗೆ ಅನುವು ಮಾಡಿಕೊಟ್ಟಂತೆ ಆಗುತ್ತದೆ. ಈ ಕ್ಯಾಂಪಸ್ ಮೂಲಕ, ಮೆಟಾ ಕಂಪನಿ ದೇಶಾದ್ಯಂತ ಅನೇಕ ಸ್ಥಳಗಳಲ್ಲಿ ನಾಲ್ಕರಿಂದ ಐದು ನೋಡ್‌ಗಳನ್ನು ನಿರ್ವಹಿಸಲು ಸಾಧ್ಯವಾಗುತ್ತದೆ. ಪ್ರಸ್ತುತ, ಭಾರತೀಯ ಬಳಕೆದಾರರ ಡೇಟಾವು ಸಿಂಗಾಪುರದಲ್ಲಿರುವ ಮೆಟಾದ ಡೇಟಾ ಕೇಂದ್ರಕ್ಕೆ ಬರುತ್ತದೆ.
ಡೇಟಾ ಸೆಂಟರ್ ಅಂದರೆ ಏನು?
ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಾದ ಫೇಸ್‌ಬುಕ್, ಟ್ವಿಟರ್, ವಾಟ್ಸಾಪ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್, ಬ್ಯಾಂಕಿಂಗ್, ಆರೋಗ್ಯ, ಪ್ರವಾಸೋದ್ಯಮ ಮತ್ತು ಇತರ ವಹಿವಾಟುಗಳು ಹೆಚ್ಚಿನ ಡೇಟಾವನ್ನು ಉತ್ಪಾದಿಸುತ್ತವೆ, ಇವುಗಳ ಸಂಗ್ರಹಣೆಗಾಗಿ ಡೇಟಾ ಕೇಂದ್ರಗಳು ಬೇಕಾಗುತ್ತವೆ. ಇವುಗಳನ್ನು ನಿರ್ವಹಿಸಲು ಈ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ.
ಡೇಟಾ ಸೆಂಟರ್ ಎನ್ನುವುದು ನೆಟ್‌ವರ್ಕ್‌ನಿಂದ ಸಂಪರ್ಕಗೊಂಡಿರುವ ಕಂಪ್ಯೂಟರ್ ಸರ್ವರ್‌ಗಳ ದೊಡ್ಡ ಗುಂಪು. ದೊಡ್ಡ ಪ್ರಮಾಣದ ಡೇಟಾವನ್ನು ಸಂಗ್ರಹಿಸಲು ಮತ್ತು ಪ್ರಕ್ರಿಯೆಗೊಳಿಸಲು ಕಂಪನಿಗಳು ಇದನ್ನು ಬಳಸುತ್ತವೆ. ಇದರಲ್ಲಿ ಡೇಟಾ ಸಂಗ್ರಹಣೆ, ಪ್ರಕ್ರಿಯೆ ಮತ್ತು ಮಾಹಿತಿಯ ಪ್ರಸರಣ ಮತ್ತು ಕಂಪನಿಯ ಅಪ್ಲಿಕೇಶನ್‌ಗಳಿಗೆ ಸಂಬಂಧಿಸಿದ ಕಾರ್ಯಗಳನ್ನು ಒಳಗೊಂಡಿವೆ. ಕಂಪನಿಯ ಸಂಪೂರ್ಣ ಐಟಿ ಕಾರ್ಯನಿರ್ವಹಿಸುವ ಸರ್ವರ್‌ನಂತೆ ಇದನ್ನು ಪರಿಗಣಿಸಬಹುದಾಗಿದೆ.












Click it and Unblock the Notifications