Get Updates
Get notified of breaking news, exclusive insights, and must-see stories!

ಏರ್ಟೆಲ್ ಪೋಸ್ಟ್ ಪೇಯ್ಡ್ 649ರು ಯೋಜನೆಯಲ್ಲಿ ಅಧಿಕ ಡೇಟಾ!

ಬೆಂಗಳೂರು, ಜುಲೈ 01: ಏರ್ಟೆಲ್ ತನ್ನ ಪೋಸ್ಟ್ ಪೇಯ್ಡ್ ಪ್ಲಾನ್ 649 ರೂಪಾಯಿ ಯೋಜನೆಯಲ್ಲಿ ಬದಲಾವಣೆ ಮಾಡಿದ್ದು, ಗ್ರಾಹಕರಿಗೆ ಶೇಕಡಾ 80ರಷ್ಟು ಹೆಚ್ಚುವರಿ ಇಂಟರ್ನೆಟ್ ಡೇಟಾ ನೀಡುತ್ತಿದೆ.

ಮೈಪ್ಲಾನ್ ಇನ್ಫಿನಿಟಿ ಅಡಿಯಲ್ಲಿ ಬರುವ 399, ರೂ 499, ರೂ 799 ಮತ್ತು 1,199 ರೂಪಾಯಿ ಯೋಜನೆಗಳ ಪೈಕಿ 699 ರೂಪಾಯಿ ಯೋಜನೆಯಲ್ಲಿ ಬದಲಾವಣೆ ಮಾಡಲಾಗಿದ್ದು, ಅಮೆಜಾನ್ ಪ್ರೈಮ್ ಚಂದಾದಾರಿಕೆ ಕೂಡಾ ಉಚಿತವಾಗಿ ಲಭ್ಯವಾಗಲಿದೆ.

ಏರ್ಟೆಲ್ ನ 699ರು ಪ್ಲಾನ್ ನಲ್ಲಿ ಇಲ್ಲಿ ತನಕ 50ಜಿಬಿ ತನಕ 3ಜಿ ಹಾಗೂ 4ಜಿ ಡೇಟಾ ಲಭ್ಯವಾಗುತ್ತಿತ್ತು. ಆದರೆ, ಈಗ 649 ರೂಪಾಯಿ ಯೋಜನೆಯಲ್ಲಿ ಪ್ರತಿ ತಿಂಗಳು 90ಜಿಬಿ ಡೇಟಾ ಸಿಗಲಿದೆ. ಜೊತೆಗೆ 100 ಎಸ್ಎಂಎಸ್, ಅನಿಯಮಿತ ವಾಯ್ಸ್ ಕಾಲ್, ಎಸ್ಟಿಡಿ, ಹಾಗೂ ಉಚಿತ ರೋಮಿಂಗ್ ಕಾಲ್ ಸಿಗಲಿದೆ. ವಿಶೇಷವೆಂದರೆ, ಅನಿಯಮಿತ ಕಾಲ್ ಗೆ ಯಾವುದೇ ಸಮಯ ಮಿತಿಯಿಲ್ಲ. ಬಾಕಿ ಉಳಿದ ಡೇಟಾ ಮುಂದಿನ ತಿಂಗಳಿಗೆ ವರ್ಗಾವಣೆಯಾಗಲಿದೆ.

Bharti Airtel Postpaid Plan Rs.649 Now Offers 90GB Data

649 ರೂಪಾಯಿ ಪ್ಲಾನ್ ನಲ್ಲಿ ಆ್ಯಡ್ ಆನ್ ಕನೆಕ್ಷನ್ ಫೆಸಿಲಿಟಿ, Wynk TV ಚಂದಾದಾರತ್ವ,ಲೈವ್ ಟಿವಿ,ಏರ್ ಟೆಲ್ ಸೆಕ್ಯುರ್, ಅಮೆಜಾನ್ ಪ್ರೈಮ್ ಆಪ್ ಚಂದಾದರಿಕೆ ಸಿಗಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+