ಕಾವೇರಿಗಾಗಿ ಗಲಭೆ: ಬೆಂಗಳೂರಿಗೆ 25 ಸಾವಿರ ಕೋಟಿ ರು ನಷ್ಟ!

Posted By:
Subscribe to Oneindia Kannada

ಬೆಂಗಳೂರು, ಸೆ. 13: ಕಾವೇರಿ ವಿವಾದ ಹಿನ್ನಲೆಯಲ್ಲಿ ಉಂಟಾದ ಗಲಭೆ, ಬಂದ್, ವಾಹನ- ಕಟ್ಟಡ ಧ್ವಂಸ, ಸಾರಿಗೆ ಸಂಪರ್ಕ ಕಡಿತ ಹೀಗೆ ಅವ್ಯವಸ್ಥೆಯಿಂದಾಗಿ ಸಿಲಿಕಾನ್ ಸಿಟಿ ಬೆಂಗಳೂರಿಗೆ ಸರಿ ಸುಮಾರು 25,000 ಕೋಟಿ ರು ನಷ್ಟ ತಂದಿದೆ ಎಂದು ಅಸ್ಸೋಚಾಮ್ ಅಂದಾಜಿಸಿದೆ.

ವಿವಿಧ ಸ್ತರದ ಶ್ರಮಿಕ ವರ್ಗದ ದಿನ ನಿತ್ಯದ ಸಂಚಾರಕ್ಕೆ ಸಂಚಕಾರ ಉಂಟಾದ ಹಿನ್ನಲೆಯಲ್ಲಿ ಬೆಂಗಳೂರಿನ ಇಮೇಜ್ ಕೂಡಾ ಹಾಳಾಗಿದ್ದು, 22,000 ಕೋಟಿ ರು ನಿಂದ 25,000 ಕೋಟಿ ರು ನಷ್ಟವಾಗಿರುವ ಸಾಧತೆಯಿದೆ ಎಂದು ಕೈಗಾರಿಕಾ ಕೇಂದ್ರ ಸಮಿತಿ ಅಸ್ಸೋಚಾಮ್ ಮಂಗಳವಾರ ಹೇಳಿದೆ.[ಕಾವೇರಿ ಹೋರಾಟ, ಮಂಗಳವಾರ ಏನಾಯ್ತು?]

ಬೆಂಗಳೂರಿನಲ್ಲಿ ಫಾರ್ಚ್ಯೂನ್ 500 ಶ್ರೇಣಿಯ ಅನೇಕ ಕಂಪನಿಗಳಿದ್ದು, ಬಂದ್ ಹಾಗೂ ಗಲಭೆಯಿಂದಾಗಿ ಭಾರಿ ನಷ್ಟ ಅನುಭವಿಸಿವೆ ಎಂದು ಅಸ್ಸೋಚಾಮ್ ನ ಪ್ರಧಾನ ಕಾರ್ಯದರ್ಶಿ ಡಿಎಸ್ ರಾವತ್ ಹೇಳಿದರು.[ಬೆಂಗಳೂರಿನಲ್ಲಿ ಪರಿಸ್ಥಿತಿ ಹೇಗಿದೆ, ಪೊಲೀಸರ ಹೇಳಿಕೆ ಮಾತ್ರ ನಂಬಿ!]

Bengaluru suffered a Loss 25,000 crore due to Cauvery dispute related violence : ASSOCHAM

ಬೆಂಗಳೂರು ಹಾಗೂ ಚೆನ್ನೈನಲ್ಲಿ ಸ್ಥಳೀಯರಲ್ಲದೆ ಭಾರತ ಹಾಗೂ ವಿದೇಶಿ ಮೂಲದ ಅನೇಕ ಉದ್ಯೋಗಿಗಳಿದ್ದಾರೆ. ಎಲ್ಲರ ಸುರಕ್ಷತೆ ಬಗ್ಗೆ ಉಭಯ ಸರ್ಕಾರಗಳು ಶ್ರಮಿಸುತ್ತಿವೆ. ಆದರೆ, ದುಷ್ಕರ್ಮಿಗಳ ಕೃತ್ಯದಿಂದ ರಾಜ್ಯ, ರಾಷ್ಟ್ರದ ಘನತೆಗೆ ಜಾಗತಿಕ ಮಟ್ಟದಲ್ಲಿ ಹಾನಿಯಾಗುತ್ತಿದೆ ಎಂದರು.[ಕದ್ದು ಮುಚ್ಚಿ ಕೆಲ್ಸ, ಟೆಕ್ಕಿಗಳಿಗೆ ಬಿಸಿ ಮುಟ್ಟಿಸಿದ ಕನ್ನಡಿಗರು]

ಇನ್ಫೋಸಿಸ್, ವಿಪ್ರೋ ಅಲ್ಲದೆ, ಫ್ಲಿಪ್ ಕಾರ್ಟ್, ಅಮೆಜಾನ್ ನಂಥ ಆನ್ ಲೈನ್ ಸರ್ವೀಸ್ ಸಂಸ್ಥೆಗಳಿಗೆ ಬೆಂಗಳೂರು ಮುಖ್ಯ ಕೇಂದ್ರವಾಗಿದೆ. ಎಲೆಕ್ಟ್ರಾನಿಕ್ ಸಿಟಿ, ಮಾನ್ಯತಾ ಟೆಕ್ ಪಾರ್ಕ್, ಎಕೋ ಸ್ಪೇಸ್, ಬಾಗ್ ಮನೆ ಟೆಕ್ ಪಾರ್ಕ್, ಐಟಿಪಿಎಲ್ ಸೇರಿದಂತೆ ವಿವಿಧ ಟೆಕ್ ಪಾರ್ಕ್ ನಂಬಿಕೊಂಡು ಸಾಫ್ಟ್ ವೇರ್ ಅಲ್ಲದೆ ಕ್ಯಾಬ್, ಖಾಸಗಿ ವಾಹನ, ಹೋಟೆಲ್ ಉದ್ಯಮ ಕೂಡಾ ಕಾರ್ಯನಿರ್ವಹಿಸುತ್ತಿದೆ. [ಬಸ್ ಸುಟ್ಟಿದ್ದರಿಂದ ಕಾವೇರಿ ಸಮಸ್ಯೆ ಬಗೆಹರಿಯುತ್ತಾ?: ಕೆಪಿಎನ್]

ಸೆಪ್ಟೆಂಬರ್ 2 ರಿಂದ ಕೈಗಾರಿಕಾ ವಲಯ ಆತಂಕದಿಂದಲೇ ಕಾರ್ಯ ನಿರ್ವಹಿಸುತ್ತಿದೆ. ಆದರೆ, ಬೆಂಗಳೂರು ಪೊಲೀಸರು ಹಾಗೂ ಸರ್ಕಾರದ ಸಮಯೋಚಿತ ನಿರ್ವಹಣೆಯಿಂದ ಸಮಸ್ಯೆ ತಿಳಿಗೊಂಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Bengaluru city is estimated to have suffered a loss between Rs. 22,000 to 25,000 crore due to Cauvery dispute related violence, apex industry body ASSOCHAM said Tuesday(September 13).
Please Wait while comments are loading...