ಪ್ರೇಮಿಗಳ ದಿನದಂದು OYO ರೂಮ್ ಬುಕಿಂಗ್‌ನಲ್ಲಿ ಶೇ 51ರಷ್ಟು ಹೆಚ್ಚಳ: ಇದು ಬೆಂಗಳೂರಿನ ಪ್ರೇಮಿಗಳ ಮಹಿಮೆ- ಉಳಿದ ನಗರಗಳಲ್ಲಿ ಎಷ್ಟು?
ಪ್ರೇಮಿಗಳ ದಿನದಂದು ಐಟಿ ಸಿಟಿ ಬೆಂಗಳೂರಿನ ಓಯೋ ರೂಂ ಬುಕ್ಕಿಂಗ್‌ನಲ್ಲಿ ಶೇ 51ರಷ್ಟು ಹೆಚ್ಚಳವಾಗಿದೆ. ಇದು ದೇಶದಲ್ಲಿ 2ನೇ ಸ್ಥಾನದಲ್ಲಿದೆ. ಉಳಿದ ನಗರಗಳು ಯಾವವು ಮಾಹಿತಿ ತಿಳಿಯಿರಿ.
ಬೆಂಗಳೂರು ಫೆಬ್ರವರಿ 16: ಪ್ರೇಮಿಗಳ ದಿನದಂದು ಐಟಿ ಸಿಟಿ ಬೆಂಗಳೂರಿನ ಓಯೋ ರೂಂ ಬುಕ್ಕಿಂಗ್‌ನಲ್ಲಿ ಶೇ 51ರಷ್ಟು ಹೆಚ್ಚಳವಾಗಿದೆ ಎಂದು OYO ತಿಳಿಸಿದೆ. ಈ ಮಹತ್ವದ ಏರಿಕೆಯೊಂದಿಗೆ, ಫೆಬ್ರವರಿ 14 ರಂದು ಬೆಂಗಳೂರು ಪ್ರೇಮಿಗಳ ಆದ್ಯತೆಯ ತಾಣಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಕಂಪನಿಯ ಪ್ರಕಾರ, ಕಳೆದ ವರ್ಷಕ್ಕೆ ಹೋಲಿಸಿದರೆ ಉತ್ತರ ಪ್ರದೇಶದ ವೃಂದಾವನವು ಹೋಟೆಲ್ ಬುಕಿಂಗ್‌ನಲ್ಲಿ ಶೇಕಡಾ 231 ರಷ್ಟು ಹೆಚ್ಚಳವನ್ನು ದಾಖಲಿಸಿದೆ. ಎರಡನೇ ಸ್ಥಾನ ಬೆಂಗಳೂರು ( ಶೇ 51 ) ಮತ್ತು ಹೈದರಾಬಾದ್ ಮೂರನೇ ಸ್ಥಾನದಲ್ಲಿದೆ ( ಶೇ 47 ) ಏರಿಕೆಯೊಂದಿಗೆ ನಂತರದ ಸ್ಥಾನದಲ್ಲಿದೆ.
ಹೆಚ್ಚಿನ ಸಂಖ್ಯೆಯ OYO ಬುಕಿಂಗ್‌ಗಳನ್ನು ಕಂಡ ಇತರ ನಗರಗಳೆಂದರೆ, ಪುಣೆ (45 ಶೇಕಡಾ), ಕೋಲ್ಕತ್ತಾ (38 ಶೇಕಡಾ), ಚೆನ್ನೈ (35 ಶೇಕಡಾ) ಮತ್ತು ಮುಂಬೈ (19 ಶೇಕಡಾ). ಒಟ್ಟಾರೆಯಾಗಿ, OYO ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಪ್ರೇಮಿಗಳ ದಿನದಂದು ಹೋಟೆಲ್ ಬುಕಿಂಗ್‌ನಲ್ಲಿ ಸುಮಾರು 35 ಪ್ರತಿಶತದಷ್ಟು ಹೆಚ್ಚಳವನ್ನು ದಾಖಲಿಸಿದೆ.
'ಓಯೋನಲ್ಲಿ ಉತ್ತಮ ಅವಕಾಶಗಳಿವೆ. ಜನರು ಈಗ ವಾರದ ದಿನಗಳಲ್ಲಿಯೂ ಹೋಟೆಲ್ ಬುಕ್ ಮಾಡಲು ಬಯಸುತ್ತಾರೆ. ಈ ಬೆಳವಣಿಗೆಯು ಆಸಕ್ತಿದಾಯಕವಾಗಿದೆ' ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ.

2022 ಕ್ಕೆ ಹೋಲಿಸಿದರೆ, ಓಯೋ ರೂಮ್ ಬುಕಿಂಗ್ ಅವಧಿಯು ಹೆಚ್ಚಾಗಿದೆ. 2 ದಿನಗಳಿಂದ ಈ ವರ್ಷ 4 ದಿನಗಳವರೆಗೆ ಹೆಚ್ಚಾಗಿದೆ ಎಂದು ಕಂಪನಿ ಹೇಳಿದೆ.
'ಬಹುತೇಕ ಪ್ರವಾಸಿಗರು ಕಡಲತೀರದ ಸ್ಥಳಗಳನ್ನು ಕಡಿಮೆ ಮಾಡಿ, ಗಿರಿಧಾಮಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ತಂಗುವಿಕೆಯ ಸರಾಸರಿ ಅವಧಿಯು 2023 ಮತ್ತು 2022 ರಲ್ಲಿ 2 ದಿನಗಳಿಂದ 4 ದಿನಗಳವರೆಗೆ ಹೆಚ್ಚಾಗಿದೆ. ಇದು ದೀರ್ಘ ಪ್ರಯಾಣಕ್ಕಾಗಿ ಗ್ರಾಹಕರ ಬೇಡಿಕೆಯನ್ನು ಸೂಚಿಸುತ್ತದೆ. ಕೋವಿಡ್ ಸಾಂಕ್ರಾಮಿಕದಲ್ಲಿ ಕಾಣಿಸಿಕೊಂಡಿದ್ದ ಕುಸಿತವು, ಈಗ ದಿಡೀರ್ ಏರಿಕೆ ಕಂಡಿರುವುದು ಹೋಟೆಲ್ ಉದ್ಯಮಿಗಳಲ್ಲಿ ಸಂತಸವನ್ನು ಹೆಚ್ಚಿಸಿದೆ' ಎಂದು OYO ತನ್ನ ವರದಿಯಲ್ಲಿ ಹೇಳಿದೆ.

OYO ನ ಸಿಇಒ ರಿತೇಶ್ ಅಗರ್ವಾಲ್ ಅವರು, ಓಯೋ ಹೋಟೆಲ್ ಹಾಗೂ ರೂಮ್‌ಗಲ ಬಗ್ಗೆ ಪ್ರಾಮಾಣಿಕ ಪ್ರತಿಕ್ರಿಯೆ, ದೂರುಗಳು, ಟೀಕೆಗಳು ಮತ್ತು ಸಲಹೆಗಳನ್ನು ಹಂಚಿಕೊಳ್ಳಲು ಗ್ರಾಹಕರಿಗೆ ಕೇಳಿಕೊಂಡಿದ್ದಾರೆ.

'OYO ಅನ್ನು ಗ್ರಾಹಕರಿಂದ ನಿರ್ಮಿಸಲಾಗಿದೆ. ನೀವು ಯಾವಾಗಲೂ ನಮ್ಮ ಮೊದಲ ಪ್ರೀತಿಪಾತ್ರರಾಗಿದ್ದೀರಿ. ಇಂದು ನಾವೆಲ್ಲರೂ ನಿಮ್ಮ ಪ್ರತಿಕ್ರಿಯೆಗಳನ್ನು ಕೇಳಲು ಕಿವಿಯಾಗಿದ್ದೇವೆ. ಅದು ಮೆಚ್ಚುಗೆಯಾಗಿರಲಿ, ನಿರಾಶೆಯಾಗಿರಲಿ ಅಥವಾ ಟೀಕೆಯಾಗಿರಲಿ, ನಾವು ಎಲ್ಲವನ್ನೂ ಕೇಳಲು ಇಷ್ಟಪಡುತ್ತೇವೆ. ಇಂದಿನಿಂದ, ನಾವು ಸರಳವಾದ ತ್ವರಿತ ಪ್ರಾಯೋಗಿಕ ಪ್ರತಿಕ್ರಿಯೆ ಪುಟವನ್ನು ಪ್ರಾರಂಭಿಸುತ್ತಿದ್ದೇವೆ. ಅಲ್ಲಿ ನೀವು OYO ಕುರಿತು ಹೇಗೆ ಭಾವಿಸುತ್ತೀರಿ ಮತ್ತು ನಾವು ಉತ್ತಮವಾಗಿ ಏನು ಮಾಡಬಹುದು ಎಂಬುದನ್ನು ಬಹಿರಂಗವಾಗಿ, ಪ್ರಾಮಾಣಿಕವಾಗಿ ಮತ್ತು ಅನಾಮಧೇಯವಾಗಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಹುದು' ಎಂದು ಅಗರ್ವಾಲ್ ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.












Click it and Unblock the Notifications