ಎಂಎಸ್‌ಎಂಇ ವಲಯಕ್ಕೆ ಬ್ಯಾಂಕ್‌ನಿಂದ 2.05 ಲಕ್ಷ ಕೋಟಿ ಸಾಲ ಮಂಜೂರು

ನವದೆಹಲಿ, ಡಿಸೆಂಬರ್ 11: ಕೊರೊನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಆಗಿರುವ ಆರ್ಥಿಕ ಹಾನಿಯಿಂದ ಚೇತರಿಕೆ ಕಾಣಲು ಎಂಎಸ್‌ಎಂಇ ವಲಯಕ್ಕೆ ತುರ್ತು ಕ್ರೆಡಿಟ್ ಲೈನ್ ಗ್ಯಾರೆಂಟಿ ಸ್ಕೀಮ್(ಇಸಿಎಲ್‌ಜಿಎಸ್) ಅಡಿಯಲ್ಲಿ ಸುಮಾರು 81 ಲಕ್ಷ ಖಾತೆಗಳಿಗೆ 2,05,563 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ ಎಂದು ಹಣಕಾಸು ಸಚಿವಾಲಯ ಶುಕ್ರವಾರ ತಿಳಿಸಿದೆ.

ಎಂಎಸ್‌ಎಂಇ ವಲಯಕ್ಕೆ 3 ಲಕ್ಷ ಕೋಟಿ ತುರ್ತು ಕ್ರೆಡಿಟ್ ಲೈನ್ ಗ್ಯಾರೆಂಟಿ ಸ್ಕೀಮ್ ಅಡಿಯಲ್ಲಿ ಈ ಹಣವನ್ನು ಸಾಲವಾಗಿ ನೀಡಲಾಗಿದೆ. ಆದರೆ ಡಿಸೆಂಬರ್ 4 ರವರೆಗೆ 40 ಲಕ್ಷ ಎಂಎಸ್‌ಎಂಇ ಖಾತೆಗಳಿಗೆ 1,58,626 ಕೋಟಿ ರೂ. ಬಂದಿದೆ ಎಂದು ಹಣಕಾಸು ಸಚಿವಾಲಯ ಸರಣಿ ಟ್ವೀಟ್‌ಗಳಲ್ಲಿ ತಿಳಿಸಿದೆ.

ಕಳೆದ ತಿಂಗಳು ಆತ್ಮನಿರ್ಭರ ಭಾರತ್ ಪ್ಯಾಕೇಜ್ 3.0 ಅನ್ನು ಪ್ರಕಟಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಸಿಎಲ್‌ಜಿಎಸ್ 1.0 ರ ಅಡಿಯಲ್ಲಿ 2.05 ಲಕ್ಷ ಕೋಟಿ ಮಂಜೂರು ಮತ್ತು 1.52 ಲಕ್ಷ ಕೋಟಿ ವಿತರಿಸಲಾಗಿದೆ ಎಂದು ಹೇಳಿದ್ದಾರೆ.

 Bank Saction 2.05 Lakh Crore To 81 Lakh MSMEs Under ECLGS

"ಆತ್ಮನಿರ್ಭರ್ ಭಾರತ್ ಅಭಿಯಾನ್ 3.0 (ನವೆಂಬರ್ 12 ರಂದು ಘೋಷಿಸಲಾಗಿದೆ) ಯ ಭಾಗವಾಗಿ, ಇಸಿಎಲ್‌ಜಿಎಸ್ ಯೋಜನೆಯನ್ನು 26 ಒತ್ತಡ ಕ್ಷೇತ್ರಗಳು ಮತ್ತು ಆರೋಗ್ಯ ಕ್ಷೇತ್ರಗಳಿಗೆ ಇಸಿಎಲ್‌ಜಿಎಸ್ 2.0 ಮೂಲಕ ವಿಸ್ತರಿಸಲಾಗಿದ್ದು, ಫೆಬ್ರವರಿ ವೇಳೆಗೆ 50 ಕೋಟಿ ಮತ್ತು 500 ಕೋಟಿ ಸಾಲವನ್ನು ಬಾಕಿ ಉಳಿದಿದೆ'' ಎಂದು ಟ್ವೀಟ್ನಲ್ಲಿ ತಿಳಿಸಿದೆ.

ಇಸಿಎಲ್‌ಜಿಎಸ್ 2.0 ರ ಅಡಿಯಲ್ಲಿ, 2020 ರ ಫೆಬ್ರವರಿ 29 ರ ವೇಳೆಗೆ 50 ಕೋಟಿಗಿಂತ ಹೆಚ್ಚಿನ ಸಾಲ ಮತ್ತು 500 ಕೋಟಿಯನ್ನು ಮೀರದ ಸಂಸ್ಥೆಗಳು, ಫೆಬ್ರವರಿ 29, 2020 ರಂತೆ 30 ದಿನಗಳಿಗಿಂತ ಕಡಿಮೆ ಅಥವಾ ಸಮನಾಗಿರುವ ಸಂಸ್ಥೆಗಳು ಅರ್ಹವಾಗಿವೆ ಎಂದು ಸಚಿವಾಲಯ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+