Get Updates
Get notified of breaking news, exclusive insights, and must-see stories!

ದೇಶದಲ್ಲಿ ಫೆಬ್ರವರಿ ತಿಂಗಳಲ್ಲಿ ಬ್ಯಾಂಕುಗಳ ರಜಾ ದಿನಗಳು ಎಷ್ಟಿದೆ?

ನವದೆಹಲಿ, ಜನವರಿ 25: ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಫೆಬ್ರವರಿ ತಿಂಗಳ ಬ್ಯಾಂಕ್‌ ರಜಾ ದಿನಗಳ ಪಟ್ಟಿಯಲ್ಲಿ ಪ್ರಕಟ ಮಾಡಿದೆ. ಪ್ರಸ್ತುತ ದೇಶದಲ್ಲಿ ಕೋವಿಡ್‌ ಹೆಚ್ಚಳ ಹಿನ್ನೆಲೆ ಏರಲಾಗಿದ್ದ ಕೋವಿಡ್‌ ನಿರ್ಬಂಧಗನ್ನು ಸಡಿಲಿಕೆ ಮಾಡಲಾಗಿದೆ. ಈ ನಿರ್ಬಂಧಗಳಿಂದಾಗಿ ಬ್ಯಾಂಕಿನ ಸೇವೆಗೆ ಯಾವುದೇ ತೊಂದರೆ ಉಂಟಾಗಿಲ್ಲ. ಆದರೆ ಫೆಬ್ರವರಿ ತಿಂಗಳಿನಲ್ಲಿ ಇರುವ ಬ್ಯಾಂಕ್‌ನ ರಜಾ ದಿನಗಳ ಸಂದರ್ಭದಲ್ಲಿ ಬ್ಯಾಂಕ್‌ ಬಂದ್‌ ಆಗಿರಲಿದೆ. ಈ ನಿಟ್ಟಿನಲ್ಲಿ ಈ ದಿನಗಳನ್ನು ನೀವು ತಿಳಿಯುವುದು ಮುಖ್ಯವಾಗಿದೆ.

ಹೊಸ ವರ್ಷದ ಮೊದಲ ತಿಂಗಳಾದ ಜನವರಿಯಲ್ಲಿ ಸುಮಾರು 16 ದಿನಗಳ ಕಾಲ ಬ್ಯಾಂಕ್‌ ರಜೆ ಇತ್ತು. ಆದರೆ ಈ ರಜೆಗಳು ರಾಜ್ಯವಾರು ಆಧಾರಿತವಾಗಿದೆ. ಇನ್ನು ಫೆಬ್ರವರಿಯಲ್ಲಿಯೂ ಹಲವಾರು ದಿನಗಳ ಕಾಲ ಬ್ಯಾಂಕ್‌ ರಜೆ ಇದೆ. ಸುಮಾರು 12 ದಿನಗಳ ಕಾಲ ಬ್ಯಾಂಕ್‌ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ ಅಥವಾ ಬ್ಯಾಂಕ್‌ಗಳು ಬಂದ್‌ ಆಗಲಿದೆ.

ಸಾರ್ವಜನಿಕ ವಲಯ, ಖಾಸಗಿ ವಲಯ, ವಿದೇಶಿ ಹಾಗೂ ಸಹಕಾರಿ ಬ್ಯಾಂಕ್ ಸೇರಿದಂತೆ ಪ್ರಾದೇಶಿಕ ಬ್ಯಾಂಕುಗಳು ಎಲ್ಲಾ ಭಾನುವಾರ, 2 ಮತ್ತು 4ನೇ ಶನಿವಾರ ಸರ್ಕಾರಿ ರಜೆ ಇರುತ್ತದೆ. ಭಾನುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರಗಳಂದು ಬ್ಯಾಂಕ್ ರಜಾ ದಿನವಿರಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಪಟ್ಟಿಯ ಪ್ರಕಾರ, ಮುಂದಿನ ತಿಂಗಳು ಒಟ್ಟು 12 ದಿನಗಳ ಕಾಲ ಬ್ಯಾಂಕ್‌ಗಳು ಬಂದ್ ಆಗಿರಲಿದೆ. ಆದರೆ, ಈ ರಜಾದಿನಗಳು ಎಲ್ಲಾ ರಾಜ್ಯಗಳಿಗೆ ಅನ್ವಯ ಆಗುವುದಿಲ್ಲ.

Bank Holidays in February 2022: Banks Will Be Closed for 12 Days in This Month

ಫೆಬ್ರವರಿ 2022 ರಲ್ಲಿ ವಸಂತ ಪಂಚಮಿ, ಗುರು ರವಿದಾಸ್ ಜಯಂತಿ ಮತ್ತು ಡೋಲ್ಜಾತ್ರಾ ಸೇರಿದಂತೆ ಆರು ರಜಾದಿನಗಳು ಇರುತ್ತವೆ. ಈ ದಿನಗಳಲ್ಲಿ ದೇಶಾದ್ಯಂತ ಬ್ಯಾಂಕುಗಳನ್ನು ಮುಚ್ಚಲಾಗುತ್ತದೆ. ಎರಡನೇ ಮತ್ತು ನಾಲ್ಕನೇ ಶನಿವಾರ ಮತ್ತು ಭಾನುವಾರದಂದು ವಾರದ (ವೀಕೆಂಡ್ ಬ್ಯಾಂಕ್ ಬ್ಯಾಂಡ್) ರಜೆ ಇರುತ್ತದೆ. ಇನ್ನು ಇದನ್ನು ಹೊರತುಪಡಿಸಿ ಇನ್ನೂ ಎರಡು ದಿನಗಳ ಕಾಲ ಬ್ಯಾಂಕ್‌ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರದ 'ಕಾರ್ಮಿಕ ವಿರೋಧಿ' ನೀತಿಗಳನ್ನು ವಿರೋಧಿಸಿ ಹಲವಾರು ಕೇಂದ್ರ ಕಾರ್ಮಿಕ ಸಂಘಟನೆಗಳು ಫೆಬ್ರವರಿ 23 ಮತ್ತು ಫೆಬ್ರವರಿ 24, 2022 ರಂದು ಎರಡು ದಿನಗಳ ಬ್ಯಾಂಕ್‌ ಮುಷ್ಕರಕ್ಕೆ ಕರೆ ನೀಡಿದೆ. ಈ ಮುಷ್ಕರದ ಹಿನ್ನೆಲೆಯಿಂದಾಗಿ ಫೆಬ್ರವರಿ 23 ಮತ್ತು ಫೆಬ್ರವರಿ 24ರಂದು ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ಒಟ್ಟಾಗಿ ಯಾವ್ಯಾವ ದಿನಗಳ ಬ್ಯಾಂಕ್‌ ಬಂದ್‌ ಆಗಿರಲಿದೆ ಎಂಬ ಮಾಹಿತಿ ಈ ಕೆಳಗಿದೆ...

ಬ್ಯಾಂಕ್ ರಜಾದಿನಗಳ ಪಟ್ಟಿ
ಫೆಬ್ರವರಿ 2: ಸೋನಮ್ ಲೋಚಾರ್ (ಗ್ಯಾಂಗ್ಟಾಕ್‌ನಲ್ಲಿ ಬ್ಯಾಂಕ್‌ ಬಂದ್‌)
ಫೆಬ್ರವರಿ 5: ಸರಸ್ವತಿ ಪೂಜೆ/ ಪಂಚಮಿ/ವಸಂತಿ ಪಂಚಮಿ ಅಗರ್ತಲಾ, ಭುವನೇಶ್ವರ, ಕೋಲ್ಕತ್ತಾದಲ್ಲಿ ಬ್ಯಾಂಕ್‌ ಬಂದ್‌)
ಫೆಬ್ರವರಿ 6: ಭಾನುವಾರ (ವಾರದ ರಜೆ)
ಫೆಬ್ರವರಿ 12: ತಿಂಗಳ 2ನೇ ಶನಿವಾರ (ವಾರದ ರಜೆ)
ಫೆಬ್ರವರಿ 13: ಭಾನುವಾರ (ವಾರದ ರಜೆ)
ಫೆಬ್ರವರಿ 15: ಮೊಹಮ್ಮದ್ ಹಜರತ್ ಅಲಿ ಜನ್ಮದಿನ/ಲೂಯಿಸ್-ನಾಗೈ-ನೀ (ಇಂಫಾಲ್, ಕಾನ್ಪುರ್, ಲಕ್ನೋದಲ್ಲಿ ಬ್ಯಾಂಕ್‌ ಬಂದ್‌)
ಫೆಬ್ರವರಿ 16: ಗುರು ರವಿದಾಸ್ ಜಯಂತಿ (ಚಂಡೀಗಢದಲ್ಲಿ ಬ್ಯಾಂಕುಗಳಿಗೆ ರಜೆ)
ಫೆಬ್ರವರಿ 18: ಡೊಲ್ಜಾತ್ರಾ (ಕೋಲ್ಕತ್ತಾದಲ್ಲಿ ಬ್ಯಾಂಕುಗಳು ಬಂದ್‌)
ಫೆಬ್ರವರಿ 19: ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿ (ಬೆಲಾಪುರ, ಮುಂಬೈ, ನಾಗ್ಪುರದಲ್ಲಿ ಬ್ಯಾಂಕುಗಳಿಗೆ ರಜೆ)
ಫೆಬ್ರವರಿ 20: ಭಾನುವಾರ (ವಾರದ ರಜೆ)
ಫೆಬ್ರವರಿ 26: ತಿಂಗಳ 4ನೇ ಶನಿವಾರ (ವಾರದ ರಜೆ)
ಫೆಬ್ರವರಿ 27: ಭಾನುವಾರ (ವಾರದ ರಜೆ)
(ಒನ್‌ಇಂಡಿಯಾ ಸುದ್ದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+