ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಮನಿಸಿ: ಹೊಸ ವರ್ಷದಲ್ಲಿ ಎಟಿಎಂ ವಿತ್‌ಡ್ರಾ ಶುಲ್ಕ ದುಬಾರಿ

|
Google Oneindia Kannada News

ನೀವು ಬ್ಯಾಂಕಿನ ಗ್ರಾಹಕರಾಗಿದ್ದರೆ, ಹೆಚ್ಚಾಗಿ ಎಟಿಎಂ ಕಾರ್ಡ್ ಅನ್ನು ಬಳಸುತ್ತಿದ್ದರೆ ನಿಮಗೆ ಪ್ರಮುಖವಾದ ಅಪ್‌ಡೇಟ್‌ ಇಲ್ಲಿದೆ ನೋಡಿ. ಮುಂದಿನ ವರ್ಷದಿಂದ ನೀವು ಎಟಿಎಂನಿಂದ ಹಣವನ್ನು ವಿತ್‌ಡ್ರಾ ಮಾಡುವುದು ದುಬಾರಿ ಆಗಲಿದೆ.

ಆರ್‌ಬಿಐನ ಹೊಸ ಮಾರ್ಗಸೂಚಿ ಪ್ರಕಾರ ಹೊಸ ವರ್ಷದ ಆರಂಭದಿಂದ ನೀವು ಆ ಎಟಿಎಂನಿಂದ ವಿತ್‌ಡ್ರಾ ಮಾಡಲು ಹೆಚ್ಚಿನ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ. ಎಟಿಎಂ ನಲ್ಲಿ ನಾವು ಹಣವನ್ನು ವಿತ್‌ಡ್ರಾ ಮಾಡುವುದಕ್ಕೆ ಮಿತಿ ಇದೆ. ನಾವು ಆ ಮಿತಿಯನ್ನು ಮೀರಿ ಹೆಚ್ಚು ಬಾರಿ ವಿತ್‌ ಡ್ರಾ ಮಾಡಿದರೆ ಅದಕ್ಕೆ ಹೆಚ್ಚಿನ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ. ಈ ಬಗ್ಗೆ ಆರ್‌ಬಿಐ ಈಗಾಗಲೇ ಅಧಿಕೃತ ಹೇಳಿಕೆಯನ್ನು ನೀಡಿದೆ.

ಸೈಬರ್ ವಂಚನೆಗೆ ಒಳಗಾದ ಕೂಡ್ಲೇ ಈ ಪ್ಲಾನ್ ಬಳಿಸಿ ಮೋಸದಿಂದ ಬಚಾವ್ ಆಗಿ ಸೈಬರ್ ವಂಚನೆಗೆ ಒಳಗಾದ ಕೂಡ್ಲೇ ಈ ಪ್ಲಾನ್ ಬಳಿಸಿ ಮೋಸದಿಂದ ಬಚಾವ್ ಆಗಿ

ಡೆಬಿಟ್‌ ಕಾರ್ಡ್ ಅನ್ನು ಬಳಕೆ ಮಾಡುವ ಗ್ರಾಹಕರು ತಮ್ಮದೇ ಬ್ಯಾಂಕ್‌ನ ಎಟಿಎಂನಿಂದ ತಿಂಗಳಿಗೆ ಐದು ಬಾರಿ ಉಚಿತವಾಗಿ ಎಟಿಎಂ ವಹಿವಾಟು ನಡೆಸಬಹುದು. ಇದರಲ್ಲಿ ವಿತ್‌ಡ್ರಾ ಮಾಡುವುದು ಹಾಗೂ ಬೇರೆ ವಹಿವಾಟು ಸೇರಿರಲಿದೆ. ಹಾಗೆಯೇ ಬೇರೆ ಬ್ಯಾಂಕ್‌ಗಳ ಎಟಿಎಂನಲ್ಲಿ ಮೆಟ್ರೋ ನಗರದಲ್ಲಿ ಮೂರು ಬಾರಿ ಹಾಗೂ ಮೆಟ್ರೋಯೇತರ ನಗರದಲ್ಲಿ ಐದು ಬಾರಿ ಎಟಿಎಂ ವಹಿವಾಟು ನಡೆಸಬಹುದು ಎಂದು ಆರ್‌ಬಿಐ ಈಗಾಗಲೇ ತಿಳಿಸಿದೆ.

ATM Cash Withdrawal to Become Costly Affair From New Year

ಈ ಹೊಸ ಶುಲ್ಕವು ಜನವರಿ 1, 2022 ರಂದು ಜಾರಿಗೆ ಬರಲಿದೆ. ಹೊಸ ಮಾರ್ಗಸೂಚಿಯ ಪ್ರಕಾರ, ಇನ್ನು ಮುಂದೆ ಕ್ರೆಡಿಟ್‌ ಹಾಗೂ ಡೆಬಿಟ್‌ ಕಾರ್ಡ್ ಗ್ರಾಹಕರು ತಮ್ಮ ಹೆಚ್ಚಿನ ಎಟಿಎಂ ವಹಿವಾಟಿಗೆ 21 ರೂಪಾಯಿ ಪಾವತಿ ಮಾಡಬೇಕು. ಈವರೆಗೆ ಉಚಿತ ವಹಿವಾಟಿನ ಮಾಸಿಕ ಮಿತಿಯನ್ನು ದಾಟಿದ ಗ್ರಾಹಕರು ರೂಪಾಯಿ 20 ಶುಲ್ಕವು ಪಾವತಿ ಮಾಡಬೇಕಾಗಿತ್ತು. ಆದರೆ ಇನ್ನು ಮುಂದೆ ಉಚಿತ ವಹಿವಾಟಿನ ಮಿತಿಯನ್ನು ಮೀರಿದರೆ 21 ರೂಪಾಯಿ ಜೊತೆಗೆ ಜಿಎಸ್‌ಟಿಯನ್ನು ಪಾವತಿ ಮಾಡಬೇಕಾಗುತ್ತದೆ.

ಆರ್‌ಬಿಐ ಸುತ್ತೋಲೆಯಲ್ಲಿ ಏನಿದೆ?

ಈ ಬಗ್ಗೆ ಆರ್‌ಬಿಐ ಸುತ್ತೋಲೆಯನ್ನು ಹೊರಡಿಸಿದೆ. "ಗ್ರಾಹಕರು ತಮ್ಮದೇ ಆದ ಬ್ಯಾಂಕ್‌ ಎಟಿಎಂನಿಂ ಐದು ಬಾರಿ ಉಚಿತವಾಗಿ ವಹಿವಾಟು ನಡೆಸಬಹುದು. ಬೇರೆ ಬ್ಯಾಂಕುಗಳ ಎಟಿಎಂನಲ್ಲಿ ವಹಿವಾಟು ಮಾಡುವ ಗ್ರಾಹಕರು, ಮೆಟ್ರೋ ನಗರದಲ್ಲಿ ಮೂರು ಬಾರಿ, ಮೆಟ್ರೋಯೇತರ ನಗರದಲ್ಲಿ ಐದು ಬಾರಿ ವಹಿವಾಟು ನಡೆಸಬಹುದು. ಈ ಉಚಿತ ಸೇವಾ ಮಿತಿಯನ್ನು ಮೀರಿದರೆ, ಆಗಸ್ಟ್‌ 14, 2014 ಸುತ್ತೋಲೆಯ ಪ್ರಕಾರ ಗ್ರಾಹಕರು ಹೆಚ್ಚಿಗೆ 20 ರೂಪಾಯಿಯನ್ನು ಪಾವತಿ ಮಾಡಬೇಕಾಗುತ್ತದೆ. ಆದರೆ ಈಗ ಬ್ಯಾಂಕುಗಳಿಗೆ ಹೆಚ್ಚಿನ ವಿನಿಮಯ ಶುಲ್ಕವನ್ನು ಸರಿದೂಗಿಸುವ ನಿಟ್ಟಿನಲ್ಲಿ ಮಾಸಿಕ ಮಿತಿಗಿಂತ ಅಧಿಕ ವಹಿವಾಟು ನಡೆಸಿದರೆ, ಶುಲ್ಕವನ್ನು ಅಧಿಕ ಮಾಡಲಾಗಿದೆ. ಇನ್ನು ಮುಂದೆ 21 ರೂಪಾಯಿ ಶುಲ್ಕವನ್ನು ವಿಧಿಸಲಾಗುತ್ತದೆ. ಈ ಶುಲ್ಕ ಹೆಚ್ಚಳವು ಜನವರಿ 1, 2022 ರಿಂದ ಅನ್ವಯ ಆಗಲಿದೆ," ಎಂದು ಹೇಳಿದೆ.

ಬ್ಯಾಂಕ್‌ಗಳ ಖಾಸಗೀಕರಣ ವಿರೋಧಿಸಿ ಡಿ.16ರಿಂದ ಬ್ಯಾಂಕ್ ಮುಷ್ಕರ; ಸೇವೆಯಲ್ಲಿ ವ್ಯತ್ಯಯಬ್ಯಾಂಕ್‌ಗಳ ಖಾಸಗೀಕರಣ ವಿರೋಧಿಸಿ ಡಿ.16ರಿಂದ ಬ್ಯಾಂಕ್ ಮುಷ್ಕರ; ಸೇವೆಯಲ್ಲಿ ವ್ಯತ್ಯಯ

ಇನ್ನು ಎಚ್‌ಡಿಎಫ್‌ಸಿ, ಆಕ್ಸಿಸ್‌ ಸೇರಿದಂತೆ ಹಲವಾರು ಬ್ಯಾಂಕುಗಳು ತಮ್ಮ ವೆಬ್‌ಸೈಟ್‌ನಲ್ಲಿ ಶುಲ್ಕ ಹೆಚ್ಚಳದ ಮಾಹಿತಿಯನ್ನು ತನ್ನ ಗ್ರಾಹಕರಿಗೆ ನೀಡಿದೆ. "ಜನವರಿ 1, 2022 ರಿಂದ ಎಟಿಎಂ ಶುಲ್ಕವು 21 ರೂಪಾಯಿ ಆಗಲಿದೆ," ಎಂದು ಎಚ್‌ಡಿಎಫ್‌ಸಿ ಬ್ಯಾಂಕ್‌ ತನ್ನ ವೆಬ್‌ಸೈಟ್‌ನಲ್ಲಿ ಹೇಳಿದೆ. ಹಾಗೆಯೇ ಆಕ್ಸಿಸ್‌ ಬ್ಯಾಂಕ್‌ ಕೂಡಾ ಅದೇ ರೀತಿಯಾಗಿ ವೆಬ್‌ಸೈಟ್‌ನಲ್ಲಿ ಉಲ್ಲೇಖ ಮಾಡಿದೆ.

ಇಂಟರ್ ಚೇಂಜ್ ಶುಲ್ಕ ಹೆಚ್ಚಳಕ್ಕೆ ಆರ್‌ಬಿಐ ಅನುಮೋದನೆ

ಈ ನಡುವೆ ಪ್ರತಿ ವಹಿವಾಟಿಗೆ ಇಂಟರ್ ಚೇಂಜ್ ಶುಲ್ಕವನ್ನು ಹೆಚ್ಚಿಸಲು ಆರ್‌‌ಬಿಐ ಅನುಮೋದನೆ ನೀಡಿದೆ. ಹಣಕಾಸು ವಹಿವಾಟಿನ ಶುಲ್ಕವನ್ನು 15 ರೂ.ನಿಂದ 17 ರೂ.ಗೆ ಹೆಚ್ಚಿಸಲಾಗಿದೆ. ಹಣಕಾಸಿಲ್ಲದ ವಹಿವಾಟಿಗೆ ಇಂಟರ್ ಚೇಂಜ್ ಶುಲ್ಕವನ್ನು 5 ರೂ.ನಿಂದ 6 ರೂ.ಗೆ ಹೆಚ್ಚಿಸಲಾಗಿದೆ. ಇದು 1 ಆಗಸ್ಟ್ 2021 ರಿಂದ ಜಾರಿಗೆ ಬಂದಿದೆ.

English summary
ATM Cash Withdrawal to Become Costly Affair From New Year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X