ಇನ್ಫೋಸಿಸ್ ಸಿಇಒ ಸ್ಥಾನಕ್ಕೆ ಅಶೋಕ್ ಮೆಮೂರಿ ಆಯ್ಕೆ?
ಬೆಂಗಳೂರು, ನವೆಂಬರ್ 03: ಇನ್ಫೋಸಿಸ್ ತೊರೆದು ಐಗೇಟ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಅಧ್ಯಕ್ಷರಾಗಿದ್ದ ಅಶೋಕ್ ವೆಮೂರಿ ಅವರು ಮತ್ತೊಮ್ಮೆ ಇನ್ಫೋಸಿಸ್ ಮರಳುವ ಸಾಧ್ಯತೆ ಹೆಚ್ಚಿದೆ. ಜತೆಗೆ ಸಿಇಒ ಹುಡುಕಾಟದಲ್ಲಿರುವ ಇನ್ಪೋಸಿಸ್ ಗೆ ಅಶೋಕ್ ಅವರು ಸಿಇಒ ಆಗುವ ಲಕ್ಷಣಗಳು ಕಂಡು ಬಂದಿದೆ.
ಯುಎಸ್ ಸಂಸ್ಥೆ ಐಗೇಟ್ ಅನ್ನು ಪ್ಯಾರೀಸ್ ಮೂಲದ ಕ್ಯಾಪ್ ಜೆಮಿನಿ ಖರೀದಿಸಿತ್ತು. ಸಾಫ್ಟ್ ವೇರ್ ಕನ್ಸಲ್ಟಿಂಗ್ ಕ್ಷೇತ್ರದ ಬಹುದೊಡ್ಡ ಡೀಲ್ ಇದಾಗಿತ್ತು. ಈ ಒಪ್ಪಂದವಾದ ಆರು ತಿಂಗಳ ಬಳಿಕೆ ಐಗೇಟ್ ಸಂಸ್ಥೆಗೆ ಅಶೋಕ್ ರಾಜೀನಾಮೆ ನೀಡಿ ಹೊರ ಬಂದಿದ್ದರು. ಈಗ ಇನ್ಫೋಸಿಸ್ ಸೇರುವಂತೆ ಆಹ್ವಾನ ಸಿಕ್ಕಿದೆ.

ಕಳೆದ ಎರಡು ವಾರಗಳಿಂದ ಎಗೋನ್ ಜೆಹೆಂಡರ್ ಹಾಗೂ ಇನ್ಫೋಸಿಸ್ ಸಮಿತಿ ಹೊಸ ಸಿಇಒ ಹುಡುಕಾಟವನ್ನು ತೀವ್ರಗೊಳಿಸಿದೆ. ಆದರೆ, ಈ ಬಗ್ಗೆ ವೆಮೂರಿ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.
ಇನ್ಫೋಸಿಸ್ ನ ಅಮೆರಿಕ ಹಾಗೂ ಜಾಗತಿಕ ಉತ್ಪಾದನಾ ಮತ್ತು ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾಗಿದ್ದರು. ಸಿಇಒ ಸ್ಥಾನಕ್ಕೆ ಪ್ರಬಲ ಸ್ಪರ್ಧಿಯಾಗಿದ್ದರು. ಅಮೆರಿಕದಲ್ಲಿ ಇನ್ಪೋಸಿಸ್ ಗಟ್ಟಿಯಾಗಿ ನೆಲೆಗೊಳ್ಳಲು ಹಾಗೂ ಸಂಸ್ಥೆ ಅಭಿವೃದ್ಧಿಗೊಳ್ಳಲು ವೆಮೂರಿ ಕಾರಣರಾಗಿದ್ದರು ಎಂದರೆ ತಪ್ಪಾಗಲಾರದು. ಅಮೆರಿಕದಿಂದ ಸಾಕಷ್ಟು ಲಾಭ ಬರುವಂತೆ ಮಾಡುವಲ್ಲಿ ಅಶೋಕ್ ಯಶಸ್ವಿಯಾಗಿದ್ದರು.












Click it and Unblock the Notifications