Areca nut Price: ದೀಪಾವಳಿ ಸಮಯದಲ್ಲೇ ಅಡಿಕೆ ದರ ಹೆಚ್ಚಳ

Areca nut Price: ಇದೀಗ ದೇಶಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಇದೇ ವೇಳೆಯಲ್ಲೇ ಅಡಿಕೆ ಬೆಲೆ ಇದೀಗ ಹೆಚ್ಚಾಗಿದ್ದು, ಇದರಿಂದ ಬೆಳೆಗಾರರ ಮುಖದಲ್ಲಿ ಮಂದಹಾಸ ಹೆಚ್ಚಾದಂತಾಗಿದೆ. ಹಾಗಾದರೆ, ಎಷ್ಟು ಏರಿಕೆ ಆಗಿದೆ ಎನ್ನುವ ಸಂಪೂರ್ಣ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಇದೀಹ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಅಡಿಕೆ ದರ ಹೆಚ್ಚಾಗಿದ್ದು, ಇದರಿಂದ ಬೆಳೆಗಾರರ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದೆ. ಕಳೆದ ಎರಡು ದಿನಗಳಿಂದ ಅಡಿಕೆ ದರ ಕ್ವಿಂಟಲ್‌ಗೆ 51,000 ರೂಪಾಯಿ ತಲುಪಿದೆ. ಒಂದು ವಾರದ ಹಿಂದೆ ಕ್ವಿಂಟಲ್ ಅಡಿಕೆ ದರ 41,000 ದಿಂದ 45,000 ರೂಪಾಯಿ ಆಸುಪಾಸಿನಲ್ಲಿತ್ತು. ಇದೀಗ ಹೆಚ್ಚಾಗಿರುವುದರಿಂದ ಬೆಳೆಗಾರರ ಮುಖದಲ್ಲಿ ಬೆಳಕಿನ ಕಳೆ ಹೆಚ್ಚಾದಂತಾಗಿದೆ.

Areca nut Price increase During Deepavali festival Season Know statistics details

ಬೆಳೆಗಾರರು ಅಡಿಕೆ ಮಾರಾಟ ಮಾಡಲು ಹಿಂದೇಟು ಹಾಕಿದ್ದರು. ಇದೀಗ ಅಡಿಕೆ ದರ 51,000 ರೂಪಾಯಿ ತಲುಪುತ್ತಿದ್ದಂತೆ ಬೆಳೆಗಾರರು ನಾಮುಂದು ತಾಮುಂದು ಎಂಬಂತೆ ಮಾರಾಟ ಮಾಡಲು ಮುಂದಾಗಿದ್ದಾರೆ. ಅದರಲ್ಲೂ ಚನ್ನಗಿರಿ ಭಾಗದಲ್ಲಿ ಸುಮಾರು 39,000 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಈ ಬಾರಿ ಉತ್ತಮ ಮುಂಗಾರು ಮಳೆ ಆಗಿರುವುದರಿಂದ ಅಡಿಕೆ ಬೆಳೆಗಾರರಿಗೆ ನೀರಿನ ಕೊರತೆ ಕಾಣುವುದಿಲ್ಲ. ಅಡಿಕೆ ಕೊಯ್ಲು ಮುಂದುವರೆದಿದ್ದು, ಇನ್ನೂ ಒಂದು ತಿಂಗಳ ಕಾಲ ನಡೆಯಲಿದೆ.

ಕಳೆದ ವರ್ಷಕ್ಕಿಂತ ಈ ಬಾರಿ ಇಳುವರಿ ಹೆಚ್ಚಾಗಿದ್ದು, ಕ್ವಿಂಟಲ್‌ಗೆ ಕನಿಷ್ಠ 43,299 ರೂಪಾಯಿ, ಗರಿಷ್ಠ 51,000 ರೂಪಾಯಿ, ಸರಾಸರಿ 49,407 ರೂಪಾಯಿ ದರ ಇದೆ. ಇದರಿಂದ ಬೆಳೆಗಾರತು ಅಡಿಕೆ ಮಾರಾಟ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ. ಯಾಕೆಂದರೆ, ಅಡಿಕೆ ದರ ಯಾವಾಗ ಕಡಿಮೆ ಆಗುತ್ತೋ ಯಾವಾಗ ಜಾಸ್ತಿಯಾಗುತ್ತೋ ಹೇಳುವುದಕ್ಕೆ ಆಗುವುದಿಲ್ಲ. ಚಿನ್ನ, ಬೆಳ್ಳಿ ದರದಂತೆ ಏರಿಳಿತ ಆಗುತ್ತಿರುತ್ತದೆ.

ಜಲಮೂಲಗಳು ಭರ್ತಿ: ಇನ್ನು 2023ರಲ್ಲಿ ಮುಂಗಾರು ಮಳೆ ಕೈಕೊಟ್ಟ ಕಾರಣ ಜಲಮೂಲಗಳೆಲ್ಲ ಬತ್ತಿಹೋಗಿದ್ದವು. ಪರಿಣಾಮ ಬೋರ್ ವೆಲ್‌ಗಳಲ್ಲಿ ಅಂತರ್ಜಲ ಮಟ್ಟ ಕುಸಿತ ಆಗಿತ್ತು. ಇನ್ನು ಇದೀಗ 2024ರ ಜೂನ್‌ ಆರಂಭವಾಗುತ್ತಿದ್ದಂತೆ ಮುಂಗಾರು ಮಳೆ ಚುರುಕು ಪಡೆದು ಜಲಮೂಲಗಳು ಉಕ್ಕಿ ಹರಿದ ಪರಿಣಾಮ ಬೋರ್ ವೆಲ್‌ಗಳು ಚೇತರಿಕೆ ಕಂಡಿವೆ.

2024ರ ಜನವರಿ 15ರಂದು ರಾಶಿ ಅಡಿಕೆ ಗರಿಷ್ಠ ದರ 50,500 ರೂಪಾಯಿ ಗಡಿ ತಲುಪಿತ್ತು. ಫೆಬ್ರವರಿಯಲ್ಲಿ‌ ದಿಢೀರ್‌ 48,000 ರೂಪಾಯಿಗೆ ಕುಸಿತ ಕಂಡಿತ್ತು. ಮಾರ್ಚ್‌ನಲ್ಲಿ ತುಸು ಚೇತರಿಕೆ ಕಂಡು 50,000 ರೂಪಾಯಿಗೆ ತಲುಪಿತ್ತು. ಏಪ್ರಿಲ್‌ನಲ್ಲಿ ಗರಿಷ್ಠ 54,000 ರೂಪಾಯಿ ಮುಟ್ಟಿತ್ತು. ಮೇನಲ್ಲಿ ಗರಿಷ್ಠ ದರ 55,000 ರೂಪಾಯಿ ತಲುಪಿ, ಮತ್ತೆ ಕುಸಿತ ಕಂಡಿತ್ತು. ಜೂನ್‌ನ ಎರಡನೇ ವಾರದಿಂದ ಮತ್ತೆ ಕುಸಿತವಾಗಿದ್ದು, ಜುಲೈನಲ್ಲಿ 51,000 ರೂಪಾಯಿ ಆಗಿತ್ತು. ಆಗಸ್ಟ್‌ನಲ್ಲಿ ಹೊಸ ಅಡಿಕೆ 42,000 ರೂಪಾಯಿಗೆ ಇಳಿಕೆಯಾಗಿತ್ತು. ಮತ್ತೆ ಇದೀಗ ಅಕ್ಟೋಬರ್ ಅಂತ್ಯದಲ್ಲಿ ಏರಿಕೆ ಕಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+