ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿ ‘ದಿ ಫ್ಯುಯೆಲ್ ಡೆಲಿವರಿ' ಆ್ಯಪ್ ಆಧಾರಿತ ಸೇವೆ ಆರಂಭ

|
Google Oneindia Kannada News

ಬೆಂಗಳೂರು, ಆಗಸ್ಟ್‌ 12: ಮನೆ ಬಾಗಿಲಿಗೆ ಇಂಧನ ತಲುಪಿಸುವ ಆ್ಯಪ್ ಆಧಾರಿತ ಸೇವೆಯ ಸ್ಟಾರ್ಟ್-ಅಪ್ 'ದಿ ಫ್ಯುಯೆಲ್ ಡೆಲಿವರಿ' ತನ್ನ ಕಾರ್ಯಾಚರಣೆಗಳನ್ನು ಉದ್ಯಾನನಗರಿ ಬೆಂಗಳೂರಿನಲ್ಲಿ ಆರಂಭಿಸುತ್ತಿರುವುದಾಗಿ ಘೋಷಿಸಿದೆ.

ಈಗಾಗಲೇ ದೆಹಲಿ ಮತ್ತು ಮುಂಬೈ ಮಹಾನಗರಗಳಲ್ಲಿ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸುತ್ತಿರುವ ಈ ಸ್ಟಾರ್ಟ್-ಅಪ್, ತನ್ನ ವ್ಯವಹಾರ ವಿಸ್ತರಣೆಗೆ ಮೂರನೇ ನಗರವಾಗಿ ಬೆಂಗಳೂರನ್ನು ಆಯ್ಕೆ ಮಾಡಿಕೊಂಡಿದೆ. ಮೂಲ ಸೌಲಭ್ಯ ಅಭಿವೃದ್ಧಿ, ಆತಿಥ್ಯ ಮತ್ತು ಆರೋಗ್ಯ ವಲಯ, ಕಾರ್ಪೊರೇಟ್ ಕಚೇರಿಗಳು, ಐಟಿ ಪಾರ್ಕ್‌ಗಳು, ಉತ್ಪಾದನೆ ಮತ್ತು ಕೈಗಾರಿಕಾ ವಲಯ, ಶಿಕ್ಷಣ ಸಂಸ್ಥೆಗಳು, ಶಾಪಿಂಗ್ ಮಾಲ್‌ಗಳು, ಗೋದಾಮುಗಳು, ಕೃಷಿ ಮತ್ತು ಗಣಿ ಯಂತ್ರೋಪಕರಣಗಳು ಸೇರಿದಂತೆ ವಿವಿಧ ವಲಯಗಳಿಗೆ ದಿ ಫ್ಯುಯೆಲ್ ಡಿಲೆವರಿ ತನ್ನ ಸೇವೆ ಒದಗಿಸಲಿದೆ.

ರಾಜ್ಯದಲ್ಲಿ 222 ಪೆಟ್ರೋಲ್ ಬಂಕ್‌ಗಳ ಅಳತೆಯಲ್ಲಿ ದೋಖಾ ಬಯಲಿಗೆ ಎಳೆದ ಶ್ರೀರೂಪಾರಾಜ್ಯದಲ್ಲಿ 222 ಪೆಟ್ರೋಲ್ ಬಂಕ್‌ಗಳ ಅಳತೆಯಲ್ಲಿ ದೋಖಾ ಬಯಲಿಗೆ ಎಳೆದ ಶ್ರೀರೂಪಾ

ಮುಂದಿನ 12 ರಿಂದ 18 ತಿಂಗಳಲ್ಲಿ ಹಂತ ಹಂತವಾಗಿ ಚಂಡೀಗಢ, ಹೈದರಾಬಾದ್, ಚೆನ್ನೈ ಮತ್ತು ಕೋಲ್ಕತ್ತಾದಂತಹ ಪ್ರಮುಖ ಮಾರುಕಟ್ಟೆಗಳಿಗೆ ತನ್ನ ಕಾರ್ಯಾಚರಣೆ ವಿಸ್ತರಿಸುವ ಯೋಜನೆ ಹೊಂದಿದೆ. ಮುಂದೆ ಓದಿ...

 24x7 ಇಂಧನ ಸೇವೆ ಲಭ್ಯ

24x7 ಇಂಧನ ಸೇವೆ ಲಭ್ಯ

2020ರಲ್ಲಿ ಆರಂಭವಾದ ದಿ ಫ್ಯುಯೆಲ್ ಡೆಲಿವರಿ ಸಂಸ್ಥೆ ಪ್ರಥಮವಾಗಿ ದೆಹಲಿಯಲ್ಲಿ ತನ್ನ ಕಾರ್ಯಾಚರಣೆ ಆರಂಭಿಸಿದ್ದು, 2021ರಲ್ಲಿ ಮುಂಬೈ ನಗರದಲ್ಲೂ ತನ್ನ ಸೇವೆಗೆ ಚಾಲನೆ ನೀಡಿದೆ. ದಿ ಫ್ಯುಯೆಲ್ ಡೆಲಿವರಿ ಸೇವೆಗಳು ದಿನದ 24 ಗಂಟೆ ಹಾಗೂ ವಾರದ ಏಳೂ ದಿನಗಳ ಕಾಲ ಲಭ್ಯವಿರಲಿದ್ದು, ಆಪ್ ಮೂಲಕ ಆರ್ಡರ್‌ಗಳನ್ನು ಪಡೆದು, ಮೊದಲೇ ನಿರ್ಧರಿಸಿದ ಡೆಲಿವರಿ ಸಮಯ ಹಾಗೂ ಎಕ್ಸ್‌ಪ್ರೆಸ್ ಡೆಲಿವರಿ, ಸ್ಥಳದ ಆದ್ಯತೆಯ ಆಧಾರದ ಮೇಲೆ, ಬೇಡಿಕೆಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತದೆ.

 ಇಂಧನ ಕ್ಷೇತ್ರಕ್ಕೆ ಮರು ವ್ಯಾಖ್ಯಾನ ನೀಡುವ ಗುರಿ

ಇಂಧನ ಕ್ಷೇತ್ರಕ್ಕೆ ಮರು ವ್ಯಾಖ್ಯಾನ ನೀಡುವ ಗುರಿ

"ಬೆಂಗಳೂರು ಬೃಹತ್ ವಾಣಿಜ್ಯ ಕೇಂದ್ರವಾಗಿದ್ದು, ಹಲವಾರು ಉತ್ಪಾದನಾ ಸೌಲಭ್ಯಗಳು ಇಲ್ಲಿ ಲಭ್ಯವಿವೆ. ಹೀಗಾಗಿ ಇಲ್ಲಿ ಇಂಧನ ಬೇಡಿಕೆ ಹೆಚ್ಚಿದೆ. ಈ ಸೇವೆ ಆರಂಭಿಸುವ ಮೂಲಕ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಭಾರತದಾದ್ಯಂತ ಉನ್ನತ ಮಟ್ಟದ ಗ್ರಾಹಕ ಸೇವೆ ಒದಗಿಸುವುದು ನಮ್ಮ ಬದ್ಧತೆಯಾಗಿದೆ. ಈ ಮೂಲಕ ಇಂಧನ ಕ್ಷೇತ್ರಕ್ಕೆ ಮರು ವ್ಯಾಖ್ಯಾನ ನೀಡುವ ಗುರಿ ಹೊಂದಿದ್ದೇವೆ. ಇಂಧನ ವಲಯದ ಆಪ್ ಆಧಾರಿತ ಸೇವೆಯು, ‘ಫ್ಯುಯೆಲೆಂಟ್' (ಇಂಧನ ಉದ್ಯಮ)ನಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ಸುಲಭ ಸೌಲಭ್ಯಗಳ ಮೂಲಕ ಗ್ರಾಹಕರ ಅನುಭವವನ್ನು ಹಿಂದೆಂದಿಗಿಂತಲೂ ಉತ್ತಮಗೊಳಿಸುತ್ತದೆ," ಎಂದು ಹೇಳುತ್ತಾರೆ ದಿ ಫ್ಯುಯೆಲ್ ಡಿಲೆವರಿ ಸಂಸ್ಥೆಯ ಸಂಸ್ಥಾಪಕ ಮತ್ತು ಸಿಇಒ ರಕ್ಷಿತ್ ಮಾಥುರ್.

ಬೆಂಗಳೂರು ಮೂಲದ ಮೆಟ್ರೋರೈಡ್‌ನಲ್ಲಿ ಜಾಗತಿಕ ಸಂಸ್ಥೆ ಹೂಡಿಕೆಬೆಂಗಳೂರು ಮೂಲದ ಮೆಟ್ರೋರೈಡ್‌ನಲ್ಲಿ ಜಾಗತಿಕ ಸಂಸ್ಥೆ ಹೂಡಿಕೆ

"ಸಾಲಿನಲ್ಲಿ ನಿಂತು ಇಂಧನ ತುಂಬಿಸುವ ಗೋಜಿಲ್ಲ"

ಕೋವಿಡ್-19 ಸಾಂಕ್ರಾಂಮಿಕ ಸೋಂಕು ಸೃಷ್ಟಿಸಿರುವ ಸಂದಿಗ್ಧ ಸಂದರ್ಭದಲ್ಲಿನ ಈ ಬೆಳವಣಿಗೆಯ ಮೂಲಕ ಇ-ಕಾಮರ್ಸ್ ವಲಯದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮ ಅತ್ಯಂತ ಕಟ್ಟುನಿಟ್ಟಿನಿಂದ ಪಾಲನೆಯಾಗುತ್ತಿದೆ. ಈ ವಿಸ್ತರಣೆ ಬೆಂಗಳೂರಿನಲ್ಲಿ ಕಾಂಟಾಕ್ಟ್ ಲೆಸ್ ಮೋಡ್ (ಸಂಪರ್ಕ ರಹಿತ ವ್ಯವಸ್ಥೆ) ಮೂಲಕ ಇಂಧನ ವಿತರಣೆ ಮಾಡಲಿದೆ. ಮತ್ತು ಇಂಧನ ತುಂಬುವ ಕೇಂದ್ರಗಳಲ್ಲಿ ಉಂಟಾಗುವ ದೀರ್ಘ ಸರತಿ ಸಾಲುಗಳಲ್ಲಿ ನಿಂತು ವಾಹನಗಳಿಗೆ ಇಂಧನ ತುಂಬಿಸುವ ಜಂಜಾಟದಿಂದ ಗ್ರಾಹಕರನ್ನು ರಕ್ಷಿಸುತ್ತದೆ.

 ಗ್ರಾಹಕರು ಮೊಬೈಲ್, ವೆಬ್ ಆ್ಯಪ್ ಮೂಲಕ ಆರ್ಡರ್ ಮಾಡಬಹುದು

ಗ್ರಾಹಕರು ಮೊಬೈಲ್, ವೆಬ್ ಆ್ಯಪ್ ಮೂಲಕ ಆರ್ಡರ್ ಮಾಡಬಹುದು

ಇಂಧನ ವಿತರಣೆ ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದ್ದು, ತೈಲ ಮಾರಾಟ ಕಂಪನಿಗಳು ಈ ವಿಭಾಗದಲ್ಲಿ ಸ್ಟಾರ್ಟ್ ಅಪ್‌ಗಳೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಿವೆ. ಕಂಪನಿಯು ಸರ್ಕಾರಿ ಸ್ವಾಮ್ಯದ ತೈಲ ಕಂಪನಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಸೇವಾ ಮಟ್ಟದ ಒಪ್ಪಂದವು ಭಾರತದಾದ್ಯಂತ ಮನೆ ಬಾಗಿಲಿಗೆ ಇಂಧನ ತಲುಪಿಸುವ ಸೇವೆಗೆ ಅನುಮತಿ ನೀಡುತ್ತದೆ.

ಗ್ರಾಹಕರು ಮೊಬೈಲ್ ಅಥವಾ ವೆಬ್ ಆ್ಯಪ್ ಮೂಲಕ ಆರ್ಡರ್ ಮಾಡಬಹುದಾಗಿದ್ದು, ಗ್ರಾಹಕರ ವಿವರಗಳಾದ ಹೆಸರು, ಮೊಬೈಲ್ ಸಂಖ್ಯೆ, ಇಂಧನ ಪ್ರಮಾಣ, ವಿಳಾಸ ಮತ್ತು ಸ್ಥಳ, ವಿತರಣಾ ಸಮಯದ ಆಧಾರದಲ್ಲಿ ಇಂಧನವನ್ನು ತಲುಪಿಸಲಾಗುತ್ತದೆ.

Recommended Video

ಮೊದಲು ಕನ್ನಡಿಗ ನಾನು ನಂತರ ಭಾರತೀಯ | ನನಗೆ ಮೊದಲು ನನ್ನ ತಾಯಿ ಮುಖ್ಯ | H D kumaraswamy | Oneindia Kannada
 ಮಾಸಿಕ 80-90 ಸಾವಿರ ಲೀಟರ್ ಇಂಧನ ಒದಗಿಸುವ ನಿರೀಕ್ಷೆ

ಮಾಸಿಕ 80-90 ಸಾವಿರ ಲೀಟರ್ ಇಂಧನ ಒದಗಿಸುವ ನಿರೀಕ್ಷೆ

ಕಂಪನಿಯು ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿ ಮತ್ತು ನಿಯೋಜನೆಗೆ ಐಒಟಿ (ಇಂಟರ್ನೆಟ್ ಆಫ್ ಥಿಂಗ್ಸ್) ಒಳಗೊಂಡಿದೆ. ಎಲ್ಲಾ ವಿತರಣಾ ವಾಹನಗಳ ನೈಜ-ಸಮಯದ ಮೇಲ್ವಿಚಾರಣೆ ಮತ್ತು ಟ್ರ್ಯಾಕಿಂಗ್, ತಡೆರಹಿತ ಲಾಜಿಸ್ಟಿಕ್ಸ್ ನಿರ್ವಹಣೆ ಮಾಡಲಿದೆ. ಉದ್ಯಮದ ಮಾನದಂಡಗಳಿಗೆ ಅನುಗುಣವಾಗಿ ಮನೆ ಬಾಗಿಲಿಗೆ ಇಂಧನ ತಲುಪಿಸುವ ಸೇವೆಯು ಮಾಸಿಕ 80-90 ಸಾವಿರ ಲೀಟರ್ ಇಂಧನ ಒದಗಿಸುವ ನಿರೀಕ್ಷೆಯಿದೆ. ಈ ಮೂಲಕ, ಮನೆ ಬಾಗಿಲಿಗೆ ಇಂಧನ ತಲುಪಿಸುವ ಮಾರುಕಟ್ಟೆಯು ಮುಂದಿನ 12 ರಿಂದ 18 ತಿಂಗಳಲ್ಲಿ 2,000 ಕೋಟಿ ರೂಪಾಯಿಗಿಂತಲೂ ಅಧಿಕ ಮೌಲ್ಯದ್ದಾಗಲಿದೆ ಎಂಬುದು ತೈಲ ಮಾರುಕಟ್ಟೆ ಕಂಪನಿಗಳ ನಿರೀಕ್ಷೆ.

English summary
App based fuel delivery service start up announced its operation in bengaluru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X