ವಿಮಾನಯಾನ ಸಂಸ್ಥೆಗಳಿಗೆ ಮತ್ತೊಂದು ಹೊಡೆತ: ಜೆಟ್ ಇಂಧನ ಬೆಲೆ 50% ಏರಿಕೆ

ನವದೆಹಲಿ, ಜೂ 1: ಕೊರೊನಾವೈರಸ್ ಲಾಕ್‌ಡೌನ್‌ನಿಂದಾಗಿ ನಷ್ಟವನ್ನು ಎದುರಿಸುತ್ತಿರುವ ವಿಮಾನಯಾನ ಸಂಸ್ಥೆಗಳಿಗೆ ಮತ್ತೊಂದು ಹೊಡೆತ ಬಿದ್ದಿದೆ. ತೈಲ ಕಂಪನಿಗಳು ವಿಮಾನಕ್ಕೆ ಬಳಸುವ ಇಂಧನ(ಎಟಿಎಫ್) ಬೆಲೆಯನ್ನು ಸುಮಾರು 48 ಪರ್ಸೆಂಟ್ ಅಥವಾ ಪ್ರತಿ ಕಿಲೋಲೀಟರ್‌ಗೆ 11,000 ರುಪಾಯಿ ಹೆಚ್ಚಿಸಿವೆ.

ಈ ಬೆಲೆ ಹೆಚ್ಚಳದಿಂದಾಗಿ ವಾಯುಯಾನ ಟರ್ಬೈನ್ ಇಂಧನ ದೆಹಲಿಯಲ್ಲಿ 33,575 ರುಪಾಯಿ, ಮುಂಬಯಿಯಲ್ಲಿನ ಎಟಿಎಫ್ ಬೆಲೆ 33,070.56 ರುಪಾಯಿ ಪ್ರತಿ ಕಿಲೋಲೀಟರ್‌ಗೆ ಗೆ ಏರಿಕೆಯಾಗಲಿದೆ. ಇನ್ನು ಕೋಲ್ಕತ್ತಾದಲ್ಲಿ 38,543.48 ರುಪಾಯಿ ವೆಚ್ಚವಾಗಲಿದೆ.

ದೇಶೀಯ ವಿಮಾನಯಾನಗಳು ಪ್ರಾರಂಭವಾಗುವುದರೊಂದಿಗೆ, ವಿಮಾನಯಾನ ಟಿಕೆಟ್‌ಗಳನ್ನು ಕೈಗೆಟುಕುವಂತೆ ಮಾಡಲು ನಿಯಂತ್ರಕ ಸಂಸ್ಥೆ, ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ ​​(ಡಿಜಿಸಿಎ) ಮುಂದಿನ ಮೂರು ತಿಂಗಳವರೆಗೆ ಏಳು ಬ್ಯಾಂಡ್‌ಗಳ ಪ್ರಕಾರ ದರವನ್ನು ನಿಗದಿಪಡಿಸಿದೆ. ಈಗ ಎಟಿಎಫ್ ಬೆಲೆಗಳು ಏರಿಕೆಯಾಗುತ್ತಿರುವುದರಿಂದ ಮತ್ತು ಶುಲ್ಕ ಹೆಚ್ಚಳವನ್ನು ಪರಿಗಣಿಸಿ, ವಿಮಾನಯಾನ ಸಂಸ್ಥೆಗಳು ಸೀಮಿತ ವಿಮಾನಗಳೊಂದಿಗೆ ಹಾರಾಟ ಅಥವಾ ಹೆಚ್ಚುವರಿ ವೆಚ್ಚವನ್ನು ಅನುಭವಿಸುವ ಕಷ್ಟಕರ ಆಯ್ಕೆಯನ್ನು ಎದುರಿಸಬೇಕಾಗುತ್ತದೆ.

Another Big Blow To Airlines: Jet Fuel Prices Hiked By 48 Percent

ದೇಶೀಯ ಕಾರ್ಯಾಚರಣೆಗಳು ಕಳೆದ ಸೋಮವಾರ ಸೀಮಿತ ವಿಮಾನಗಳೊಂದಿಗೆ ಪ್ರಾರಂಭವಾದವು, ಮತ್ತು ಇತ್ತೀಚಿನ ದರ ಏರಿಕೆಯು ವಿಮಾನಯಾನ ಸಂಸ್ಥೆಗಳ ಸಂಕಷ್ಟವನ್ನು ಹೆಚ್ಚಿಸುತ್ತದೆ. ವಿಮಾನಯಾನ ಸಂಸ್ಥೆಗಳ ಪ್ರಕಾರ, ಕಡ್ಡಾಯವಾದ ಸಂಪರ್ಕ ತಡೆಯನ್ನು ಮತ್ತು ಸುರಕ್ಷತೆಯ ಕಾಳಜಿಗಳನ್ನು ಒಳಗೊಂಡಂತೆ ವಿವಿಧ ನಿರ್ಬಂಧಗಳಿಂದಾಗಿ ವಿಮಾನ ಪ್ರಯಾಣದ ಬೇಡಿಕೆ ಸರಾಸರಿಗಿಂತ ಕಡಿಮೆಯಾಗಿದೆ.

ಭಾನುವಾರ ಮಾತ್ರ ಒಟ್ಟು 501 ವಿಮಾನಗಳಲ್ಲಿ ಸುಮಾರು 44,593 ಪ್ರಯಾಣಿಕರು ಪ್ರಯಾಣಿಸಿದ್ದಾರೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಟ್ವೀಟ್ ಮಾಡಿದ್ದಾರೆ. ಇದರರ್ಥ 180 ಆಸನಗಳನ್ನು ಹೊಂದಿರುವ ವಿಮಾನದಲ್ಲಿ ಸರಾಸರಿ 100 ಜನರನ್ನು ಕರೆದೊಯ್ಯಲಾಯಿತು.

ವಿಶೇಷವೆಂದರೆ, ಭಾರತದಲ್ಲಿ ವಿಮಾನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವ ಮೊದಲು ಮಾರ್ಚ್‌ನಲ್ಲಿ ಎಟಿಎಫ್ ಬೆಲೆಗಳು ಗಮನಾರ್ಹವಾಗಿ ಕುಸಿದವು. ಬಹಳ ಸೀಮಿತ ವಿಮಾನ ಸಂಚಾರದಿಂದಾಗಿ, ಏಪ್ರಿಲ್‌ನಲ್ಲಿ ಬೆಲೆಗಳು ಮತ್ತಷ್ಟು ಕುಸಿಯಿತು. ಫೆಬ್ರವರಿಯಲ್ಲಿ, ದೆಹಲಿಯ ಎಟಿಎಫ್ ಬೆಲೆ ಪ್ರತಿ ಕಿಲೋಗೆ 60-65,000 ರುಪಾಯಿಯಷ್ಟಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+