ಮಾಲ್ವೇರ್ ಕಾಟ, ಬ್ಯಾಂಕಿಂಗ್ ಆಪ್ ಬಳಕೆ ಬಗ್ಗೆ ಎಚ್ಚರ
ಬೆಂಗಳೂರು, ಜನವರಿ 05: ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಷನ್ ಸೇರಿದಂತೆ ಮೊಬೈಲ್ ಹಾಗೂ ಆನ್ಲೈನ್ ಮೂಲಕ ವ್ಯವಹಾರ ನಡೆಸುವ ಆಪ್ ಗಳ ಮೇಲೆ ಮಾಲ್ವೇರ್ ದಾಳಿ ಮಾಡುತ್ತಿರುವ ಆತಂಕಕಾರಿ ಸುದ್ದಿ ಬಂದಿದೆ.
ಗ್ಲೋಬಲ್ ಐಟಿ ಸೆಕ್ಯೂರಿಟಿ ಕಂಪನಿ ಕ್ವಿಕ್ ಹೀಲ್ ಪ್ರಕಟಣೆಯಂತೆ, ಆಂಡ್ರಾಯ್ಡ್ ಬ್ಯಾಂಕಿಂಗ್ ಅಪ್ ಮೇಲೆ ಟ್ರೋಜನ್(Android.banker.A2f8a) ದಾಳಿ ಮಾಡುತ್ತಿದ್ದು, ಎಚ್ ಡಿ ಎಫ್ ಸಿ, ಐಸಿಐಸಿಐ, ಎಸ್ ಬಿ ಐ ಸೇರಿದಂತೆ ಸುಮಾರು 232 ಬ್ಯಾಂಕುಗಳ ಮೊಬೈಲ್ ಅಪ್ಲಿಕೇಷನ್ ನ ಮಾಹಿತಿ ಕದ್ದು ಹಾಳು ಮಾಡುವ ಸಾಧ್ಯತೆಯಿದೆ.

ಸ್ಮಾರ್ಟ್ ಫೋನಿನಲ್ಲಿರುವ ಬ್ಯಾಂಕಿಂಗ್ ಆಪ್ ನಲ್ಲಿರುವ ಮಾಹಿತಿ ಕದ್ದು, ನಕಲಿ ಸೂಚನೆಯೊಂದನ್ನು ರವಾನೆ ಮಾಡಿ ಪಾಸ್ವರ್ಡ್ ಹಾಗೂ ಲಾಗಿನ್ ಮಾಹಿತಿ ಪಡೆಯುವ ಹ್ಯಾಕರ್ಸ್ ಗಳ ತಂತ್ರದ ಬಗ್ಗೆ ಕ್ವಿಕ್ ಹೀಲ್ ಎಚ್ಚರಿಸಿದೆ.
ನಕಲಿ ಎಸ್ ಎಂ ಎಸ್ ಹಾಗೂ ಮೇಲ್ ಗೆ ಯಾವುದೇ ಪ್ರತಿಕ್ರಿಯೆ ನೀಡಬೇಡಿ, ನಕಲಿ ಆಪ್ ಗಳನ್ನು ಡೌನ್ಲೋಡ್ ಮಾಡಬೇಡಿ, Unknown Sources app ಡಿಸೆಬಲ್ ಮಾಡಿರಿ ಎಂದು ಕ್ವಿಕ್ ಹೀಲ್ ಹೇಳಿದೆ.
ಒಟಿಪಿ ಕೂಡಾ ಓದಬಲ್ಲ ಈ ಮಾಲ್ವೇರ್ ಅತ್ಯಂತ ಭಯಾನಕವಾಗಿದ್ದು, ಎರಡು ಸ್ತರದ ಭದ್ರತೆಯನ್ನು ಮೀರಿ ನಿಮ್ಮ ಮಾಹಿತಿ ಕದಿಯುವ ಸಾಮರ್ಥ್ಯ ಹೊಂದಿದೆ. ನಿಮ್ಮ ಮೊಬೈಲಿನ ರಿಂಗಿಂಗ್, ಸಂದೇಶಗಳ ಸೆಟ್ಟಿಂಗ್ಸ್ ಕೂಡಾ ಬದಲಾಯಿಸಬಲ್ಲುದು. ಇತ್ತೀಚೆಗೆ ಭಾರತದಲ್ಲಿ ಲಕ್ಷಕ್ಕೂ ಅಧಿಕ ಡೆಬಿಟ್ ಕಾರ್ಡಿನ ಮಾಹಿತಿ ಸೋರಿಕೆ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಈ ಸುದ್ದಿ ಬಂದಿರುವುದು ಗ್ರಾಹಕರನ್ನು ಬೆಚ್ಚಿಬೀಳಿಸಿದೆ.











Click it and Unblock the Notifications