ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈರಲ್ ಆಯಿತು "ಖಿನ್ನತೆ" ಬಗ್ಗೆ ಆನಂದ್ ಮಹೀಂದ್ರಾ ಟ್ವೀಟ್...

|
Google Oneindia Kannada News

ವಾರದ ಆರಂಭ ಒಂದು ರೀತಿ ಗಡಿಬಿಡಿಯಿಂದ ಕೂಡಿದ್ದರೆ, ಎರಡು ಮೂರನೇ ದಿನಕ್ಕೆ ಕಾಲಿಡುತ್ತಿದ್ದಂತೆ ಕೆಲಸದಲ್ಲಿ ನಿರುತ್ಸಾಹ ಕಾಣಿಸಿಕೊಳ್ಳುತ್ತದೆ. ಹೇಳಲಾರದ ಖಿನ್ನತೆಯೊಂದು ಆವರಿಸುತ್ತದೆ. ಯಾವ ಕೆಲಸವನ್ನೂ ಮನಸ್ಸಿಟ್ಟು ಮಾಡಲು ಆಗದಂಥ ಸ್ಥಿತಿಯದು. ಬಹುಪಾಲು ಉದ್ಯೋಗಿಗಳಲ್ಲಿ ಈ "ಮಿಡ್ ವೀಕ್ ಬ್ಲೂಸ್" ಸರ್ವೇ ಸಾಮಾನ್ಯವೂ ಆಗಿಬಿಟ್ಟಿದೆ.

ಕೆಲಸದಲ್ಲಿ ನಿರಾಸಕ್ತಿ, ಬೇಡದ ಆಲೋಚನೆ, ಕಿರಿಕಿರಿ, ಒತ್ತಡ, ಮುಂದಿನ ಗುರಿಯ ಬಗ್ಗೆ ಅಸ್ಪಷ್ಟತೆ ಇವೆಲ್ಲವೂ ವಾರದ ನಡುವಿನ ಈ ಖಿನ್ನತೆಯ ಲಕ್ಷಣವೇ. ಆದರೆ ಇದರಿಂದ ಹೊರಬರುವ ಮಾರ್ಗವಿದೆಯೇ? ಈ ಕುರಿತು ಪ್ರಖ್ಯಾತ ಉದ್ಯಮಿ ಮತ್ತು ಮಹೀಂದ್ರಾ ಸಂಸ್ಥೆಯ ಮುಖ್ಯಸ್ಥ ಆನಂದ್ ಮಹೀಂದ್ರಾ ಮಾಡಿರುವ ಟ್ವೀಟ್ ಇದೀಗ ವೈರಲ್ ಆಗಿದೆ.

ಆನಂದ್ ಮಹೀಂದ್ರಾ ಟ್ವಿಟ್ಟರಲ್ಲಿ ಕೊಟ್ಟ ಟಾಸ್ಕಿಗೆ ಭರ್ಜರಿ ಪ್ರತಿಕ್ರಿಯೆಆನಂದ್ ಮಹೀಂದ್ರಾ ಟ್ವಿಟ್ಟರಲ್ಲಿ ಕೊಟ್ಟ ಟಾಸ್ಕಿಗೆ ಭರ್ಜರಿ ಪ್ರತಿಕ್ರಿಯೆ

ವಾರದ ಮಧ್ಯದಲ್ಲಿ ಕಾಣಿಸಿಕೊಳ್ಳುವ ಈ ಖಿನ್ನತೆಯಿಂದ ಹೊರಬರಲು ಎರಡು ಸಲಹೆಗಳನ್ನು ಈ ಟ್ವೀಟ್ ಮುಖಾಂತರ ಹಂಚಿಕೊಂಡಿದ್ದಾರೆ ಅವರು.

Anand Mahindra Tweet On Midweek Blues Viral

ಆನಂದ್ ಮಹೀಂದ್ರಾ ಟ್ವೀಟ್ ನಲ್ಲಿ ಏನಿದೆ?: ಮಿಡ್ ವೀಕ್ ಬ್ಲೂಸ್ ಬಗ್ಗೆ ವಿವರಿಸಲು ನಾಲ್ಕು ಬೀದಿ ದೀಪಗಳುಳ್ಳ ಸ್ಕೆಚ್ ಒಂದನ್ನು ಹಂಚಿಕೊಂಡಿದ್ದಾರೆ ಅವರು. ಅದರಲ್ಲಿ "ಕೀಪ್ ಯುವರ್ ಹೆಡ್ ಅಪ್" ಎಂದು ಸಂದೇಶವನ್ನೂ ಬರೆದಿದ್ದಾರೆ. ಇದಕ್ಕೆ ವಿವರಣೆ ನೀಡಿರುವ ಅವರು, ಖಿನ್ನತೆ ಎಂಬುದು ಹೊರಗಿನ ಸಂಗತಿಗಳಿಂದ ಆಗುವುದಲ್ಲ ಎಂದಿದ್ದಾರೆ.

ನೋಡಿ ಭಾರತದ ಮೊದಲ ವರ್ಟಿಕಲ್ ಫಾರೆಸ್ಟ್ ಟವರ್ನೋಡಿ ಭಾರತದ ಮೊದಲ ವರ್ಟಿಕಲ್ ಫಾರೆಸ್ಟ್ ಟವರ್

ಇದರಿಂದ ಹೊರಬರಲು ಎರಡು ಸಲಹೆಗಳನ್ನು ನೀಡಿದ್ದಾರೆ. ಬೆಳಗ್ಗೆ ಪುಟ್ಟ ಧ್ಯಾನ ಹಾಗೂ ಪ್ರಾಣಾಯಾಮ ಮಾಡಿ, ಸಂಜೆ ಕೆಲ ಹೊತ್ತು ವ್ಯಾಯಾಮ ಮಾಡಿ. ಇವೆರಡು ಅಂಶಗಳು ನಮ್ಮನ್ನು ಎಂಥ ಖಿನ್ನತೆಯಿಂದಲೂ ಹೊರಬರುವಂತೆ ಮಾಡುತ್ತವೆ ಎಂದು ಬರೆದುಕೊಂಡಿದ್ದಾರೆ. ಆನಂದ್ ಮಹೀಂದ್ರಾ ಅವರ ಈ ಟ್ವೀಟ್ ವೈರಲ್ ಆಗಿದ್ದು, ಈ ಸಂದೇಶವನ್ನು ಒಪ್ಪಿದ ಹಲವು ಧನಾತ್ಮಕ ಪ್ರತಿಕ್ರಿಯೆಗಳು ಬಂದಿವೆ.

English summary
Business man Anand Mahindra group chairman tweet about midweek blues viral
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X