72 ವಯಸ್ಸಿನ ವೃದ್ಧೆಯ ಫಿಟ್ನೆಸ್ ಪ್ರೀತಿ ಬಗ್ಗೆ ಮಹೀಂದ್ರಾ ಟ್ವೀಟ್
ಬೆಂಗಳೂರು, ಡಿಸೆಂಬರ್ 12: 72 ವರ್ಷ ವಯಸ್ಸಿನ ವೃದ್ಧೆಯೊಬ್ಬರು ಜಿಮ್ ನಲ್ಲಿ ವರ್ಕ್ ಔಟ್ ಮಾಡುತ್ತಿರುವ ವಿಡಿಯೋವೊಂದನ್ನು ಕಂಡು ಉದ್ಯಮಿ ಆನಂದ್ ಮಹೀಂದ್ರಾ ಆನಂದದಿಂದ ಟ್ವೀಟ್ ಮಾಡಿದ್ದಾರೆ.
ಲಾರೆನ್ ಬ್ರೂಜೋನ್ ಎಂಬ ಹೆಸರಿನ ವೃದ್ಧೆ ನಿವೃತ್ತ ಶಿಕ್ಷಕಿಯಾಗಿದ್ದು, ಜಿಮ್ ನಲ್ಲಿ ಬರ್ಪಿ, ಟೈಯರ್ ಫ್ಲಿಪಿಂಗ್, 70ಕೆಜಿ ಡೆಡ್ ಲಿಫ್ಟಿಂಗ್ ನಂತ ಕಠಿಣ ಅಭ್ಯಾಸ ಮಾಡುವ ವಿಡಿಯೋವನ್ನು ಮನೋಜ್ ಕುಮಾರ್ ಎಂಬುವರು ಮೊದಲಿಗೆ ಟ್ವೀಟ್ ಮಾಡಿದ್ದರು. ಇದು ಸ್ಫೂರ್ತಿದಾಯಕ ವಿಡಿಯೋ, ಈಕೆ ವಯಸ್ಸು ಎಂಬುದು ಕೇವಲ ಸಂಖ್ಯೆ ಅಷ್ಟೆ ಎಂಬುದನ್ನು ಸಾಬೀತು, ನನ್ನ ಸಿಕ್ಸ್ ಪ್ಯಾಕ್ ಇವರ ಮುಂದೆ ಏನು ಅಲ್ಲ ಎಂದು ಟ್ವೀಟ್ ಮಾಡುತ್ತಿದ್ದಾರೆ.

ಇದನ್ನು ರೀ ಟ್ವೀಟ್ ಮಾಡಿರುವ ಆನಂದ್ ಮಹೀಂದ್ರಾ, ಇಂಥ ವಿಡಿಯೋ ಬೆಳಗ್ಗೆ ಯಾಕೆ ಹಂಚಿಕೊಂಡ್ರಿ ಮನೋಜ್, ಇದನ್ನು ನೋಡಿದ ಮೇಲೆ ನಾನು ತುಂಬಾ ಸೋಮಾರಿ ಎನಿಸುತ್ತದೆ ಈ ಉಕ್ಕಿನ ಮಹಿಳೆ ನೋಡಿದ ಮೇಲೆ, ನಮ್ಮ ವ್ಯಾಯಾಮ, ಕಸರತ್ತು ಸರಿಯಾಗಿ ಮಾಡದಿರಲು ನೀಡುವ ಸಬೂಬುಗಳನ್ನು ಮೂಲೆಗೆ ಹಾಕಲು ಇದು ಒಳ್ಳೆ ಸ್ಫೂರ್ತಿ ಎಂದಿದ್ದಾರೆ.
Why did you have to share this video in the morning, Manoj!? It's made me feel lazy and flabby compared to this iron woman... Ah well maybe this is the kick in the rear we all needed to stop making excuses about our exercise routines...☹️ https://t.co/9aQkWJp4lj
— anand mahindra (@anandmahindra) December 11, 2019
ಪೀಪಲ್ .ಕಾಂ ಪ್ರಕಾರ 60ನೇ ವಯಸ್ಸಿನಲ್ಲಿ ಕಸರತ್ತು ಆರಂಭಿಸಿದ ಬ್ರುಜೋನ್ ಅವರು ಕನೆಟ್ಕಿಕಟ್ ನ ಕರೋಜಾ ಫಿಟ್ನೆಸ್ ತರಬೇತಿ ಕೇಂದ್ರ ಸೇರಿದರು. ಕಳೆದ ಒಂದು ದಶಕದಿಂದ ತಮ್ಮ ವ್ಯಾಯಾಮ ಕ್ರಮವನ್ನು ತಪ್ಪಿಸದೆ ನಡೆಸಿಕೊಂಡು ಬರುತ್ತಿದ್ದಾರೆ ಎಂದು ಜಿಮ್ ಟ್ರೈನರ್ ಹೇಳಿದ್ದಾರೆ.












Click it and Unblock the Notifications