ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಬಾನಿ ಹಿಂದಿಕ್ಕಿದ ಅದಾನಿ, ಇಲ್ಲಿದೆ ಭಾರತದ ಶ್ರೀಮಂತರ ಪಟ್ಟಿ!

|
Google Oneindia Kannada News

ನವದೆಹಲಿ, ಸೆಪ್ಟೆಂಬರ್‌ 21: ಬಿಲಿಯನೇರ್ ಗೌತಮ್ ಅದಾನಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರನ್ನು ಸೋಲಿಸಿ ಐಐಎಫ್‌ಎಲ್‌ ವೆಲ್ತ್ ಹುರುನ್ ಇಂಡಿಯಾ ರಿಚ್ ಲಿಸ್ಟ್ 2022ರಲ್ಲಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಎನಿಸಿದ್ದಾರೆ.

ಕಳೆದ ವರ್ಷಕ್ಕಿಂತ ದಿನಕ್ಕೆ 1,612 ಕೋಟಿ ರೂಪಾಯಿಗಳಂತೆ ಆದಾಯ ಸೇರಿಸಿದ್ದಾರೆ. ಪ್ರಸ್ತುತ 10,94,400 ಕೋಟಿ ರೂಪಾಯಿಗಳ ಸಂಪತ್ತನ್ನು ಹೊಂದಿದ್ದಾರೆ. ಅದಾನಿ ಅವರ ನಿವ್ವಳ ಮೌಲ್ಯ ಈಗ ಅಂಬಾನಿಗಿಂತಲೂ 3 ಲಕ್ಷ ಕೋಟಿ ರೂ. ಹೆಚ್ಚು. ಭಾರತೀಯ ಸಂಪತ್ತು ಸೃಷ್ಟಿಯ ದೃಷ್ಟಿಕೋನದಿಂದ 2022 ಅದಾನಿಯ ಸಂಪತ್ತು ಏರಿಕೆ ಕಂಡಿದೆ. ಭಾರತದಲ್ಲಿ ಅದಾನಿಯನ್ನು ಹೊರತುಪಡಿಸಿ ಐಐಎಫ್‌ಎಲ್‌ ವೆಲ್ತ್ ಹುರುನ್ ಇಂಡಿಯಾ ಶ್ರೀಮಂತ ಪಟ್ಟಿಯ ಸಂಚಿತ ಸಂಪತ್ತಿನ ಬೆಳವಣಿಗೆಯು ಒಟ್ಟಾರೆ 9% ಕ್ಕೆ ಹೋಲಿಸಿದರೆ ಕೇವಲ 2.67% ಆಗಿದೆ ಎಂದು ಹುರುನ್ ಹೇಳಿದೆ.

ತನ್ನ ಸರಕು ವ್ಯಾಪಾರ ಕಂಪನಿಯನ್ನು ಕಲ್ಲಿದ್ದಲು ಬಂದರಿನಿಂದ ಇಂಧನಕ್ಕೆ ಸಂಘಟಿತವಾಗಿ ವಿಸ್ತರಿಸುವ ಮೂಲಕ ಗೌತಮ್ ಅದಾನಿ 1 ಲಕ್ಷ ಕೋಟಿ ರೂಪಾಯಿಗಳ ಮಾರುಕಟ್ಟೆ ಬಂಡವಾಳದೊಂದಿಗೆ ಒಂದಲ್ಲ, ಏಳು ಕಂಪನಿಗಳನ್ನು ನಿರ್ಮಿಸಿದ ಏಕೈಕ ಭಾರತೀಯರಾಗಿದ್ದಾರೆ. ಹತ್ತು ವರ್ಷಗಳ ಕಾಲ ಶ್ರೀಮಂತ ಭಾರತೀಯ ಟ್ಯಾಗ್ ಅನ್ನು ಹಿಡಿದಿಟ್ಟುಕೊಂಡ ನಂತರ ಅಂಬಾನಿ ಈಗ ಈ ವರ್ಷದ ಪಟ್ಟಿಯಲ್ಲಿ 7.94 ಲಕ್ಷ ಕೋಟಿ ರೂಪಾಯಿ ಸಂಪತ್ತಿನೊಂದಿಗೆ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ.

Breaking: ಅಬುಂಜಾ ಮತ್ತು ಎಸಿಸಿ ಸಿಮೆಂಟ್ ಸ್ವಾಧೀನಪಡಿಸಿಕೊಂಡ ಅದಾನಿBreaking: ಅಬುಂಜಾ ಮತ್ತು ಎಸಿಸಿ ಸಿಮೆಂಟ್ ಸ್ವಾಧೀನಪಡಿಸಿಕೊಂಡ ಅದಾನಿ

ಮೊದಲ ಸ್ಥಾನದಿಂದ ಕೆಳಗಿಳಿಸಲ್ಪಟ್ಟಿದ್ದರೂ ಸಹ ಅಂಬಾನಿ ಅವರ ಸಂಪತ್ತು ಕಳೆದ ವರ್ಷ 11% ರಷ್ಟು ಬೆಳೆದಿದೆ. ಏಕೆಂದರೆ ಅವರು ಈ ಅವಧಿಯಲ್ಲಿ ಪ್ರತಿದಿನ ತಮ್ಮ ಸಂಪತ್ತಿಗೆ 210 ಕೋಟಿ ರೂ. ಆದಾಯ ಗಳಿಸಿದ್ದಾರೆ. ಒಟ್ಟಾರೆಯಾಗಿ ಅದಾನಿ ಮತ್ತು ಅಂಬಾನಿ ಭಾರತದ ಅಗ್ರ ಹತ್ತು ಶ್ರೀಮಂತರ ಒಟ್ಟು ಸಂಪತ್ತಿನ 59% ರಷ್ಟನ್ನು ಹೊಂದಿದ್ದಾರೆ.

2012ರಲ್ಲಿ ಅದಾನಿ ಸಂಪತ್ತು ಅಂಬಾನಿಯ ಸಂಪತ್ತಿನ ಆರನೇ ಒಂದು ಭಾಗವಾಗಿತ್ತು. ಹತ್ತು ವರ್ಷಗಳ ನಂತರ ಅದಾನಿ ಅಂಬಾನಿಯನ್ನು ಹಿಂದಿಕ್ಕಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಇನ್ನೂ ಕೆಲವು ದೃಷ್ಟಿಕೋನಗಳಿಗಾಗಿ ಕಳೆದ ವರ್ಷ ಅಂಬಾನಿ ಅದಾನಿಯವರ ಸಂಪತ್ತಿಗಿಂತ 1 ಲಕ್ಷ ಕೋಟಿ ರೂ.ಗಳಷ್ಟು ಮುಂದಿದ್ದರು. ಆದರೆ ಕೇವಲ ಒಂದು ವರ್ಷದಲ್ಲಿ ಅದಾನಿ ಅಂಬಾನಿಯನ್ನು 3 ಲಕ್ಷ ಕೋಟಿಗಳಷ್ಟು ಹೆಚ್ಚಿಗೆ ಆದಾಯ ಗಳಿಸಿದರು.

ವಿದ್ಯುತ್, ಬಂದರು, ನವೀಕರಿಸಬಹುದಾದ ಮತ್ತು ಇಂಧನದಲ್ಲಿ ಗೌತಮ್ ಅದಾನಿ ಆಸಕ್ತಿ ಹೊಂದಿದ್ದಾರೆ. ಟೆಲಿಕಾಂ ಮತ್ತು ಪೆಟ್ರೋಕೆಮಿಕಲ್ಸ್‌ನಲ್ಲಿ ಎರಡನೇ ಸ್ಥಾನದಲ್ಲಿ ಮುಖೇಶ್ ಅಂಬಾನಿ ಇದ್ದಾರೆ. ಮೂರನೇ ಸ್ಥಾನದಲ್ಲಿ ಸೈರಸ್ ಪೂನಾವಾಲಾ ವಿಶ್ವದ ಲಸಿಕೆ ರಾಜನಾಗಿದ್ದಾರೆ. ನಂತರ ಟಾಪ್ 10 ರಲ್ಲಿ ಫಾರ್ಮಾ, ರೀಟೇಲ್ ಮತ್ತು ಹಣಕಾಸು ಸೇವೆಗಳಿವೆ. ಈ ಉದ್ಯಮಿಗಳು ತಮ್ಮ ಕ್ಷೇತ್ರಗಳಲ್ಲಿ ಜಾಗತಿಕ ನಾಯಕರಾಗಿದ್ದಾರೆ ಹುರುನ್ ವರದಿ ಹೇಳಿದೆ.

2.05 ಲಕ್ಷ ಕೋಟಿಯ ಸಂಚಿತ ಸಂಪತ್ತಿಗೆ ಈಗ 41,700 ಕೋಟಿ ರೂಪಾಯಿಗಳನ್ನು ಸೇರಿಸಿ ಸೈರಸ್ ಪೂನವಾಲಾ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಇದ್ದಾರೆ. ಫಾರ್ಮಾ ಉದ್ಯಮಿ ದಿಲೀಪ್ ಶಾಂಘ್ವಿ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್‌ನ ಬ್ಯಾಂಕಿಂಗ್ ಮ್ಯಾಗ್ನೇಟ್ ಉದಯ್ ಕೋಟಕ್ ಅವರು ಟಾಪ್ 10 ರೊಳಗೆ ಕಂಡು ಬಂದಿದ್ದಾರೆ. ಜಯ್ ಚೌಧರಿ ಮತ್ತು ಕುಮಾರ್ ಮಂಗಲಂ ಬಿರ್ಲಾ ಟಾಪ್ 10 ರಿಂದ ನಿರ್ಗಮಿಸಿದ್ದಾರೆ. ಶಿವ ನಾಡರ್ ಮತ್ತು ಗ್ರೂಪ್‌ 1.85 ಲಕ್ಷ ಕೋಟಿ ರೂಪಾಯಿಗಳ ಸಂಪತ್ತಿನೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ನಂತರ ರಾಧಾಕಿಶನ್ ದಮಾನಿ , ವಿನೋದ್ ಶಾಲ್ತಿಲಾಲ್ ಅದಾನಿ, ಎಸ್‌ಪಿ ಹಿಂದುಜಾ & ಗ್ರೂಪ್‌, ಎಲ್‌ಎನ್ ಮಿತ್ತಲ್ & ಗ್ರೂಪ್‌ ಇದೆ.

ಅದಾನಿ ಸಹೋದರ ವಿನೋದ್ ಸಹ ಮುಂದೆ

ಅದಾನಿ ಸಹೋದರ ವಿನೋದ್ ಸಹ ಮುಂದೆ

ಐದು ವರ್ಷಗಳಲ್ಲಿ ಹೋಲಿಸಿದರೆ ಕೆಲವು ಶತಕೋಟ್ಯಾಧಿಪತಿಗಳು ಗಣನೀಯವಾಗಿ ಬೆಳೆದಿದ್ದಾರೆ. ಅವರ ಕಂಪನಿಗಳು ಅಭೂತಪೂರ್ವ ವೇಗದಲ್ಲಿ ಸಂಪತ್ತನ್ನು ಸೃಷ್ಟಿಸಿದ್ದರಿಂದ ಮುಂದೆ ಸಾಗಿದ್ದಾರೆ. ಗೌತಮ್ ಅದಾನಿ ಮತ್ತು ಅವರ ಸಹೋದರ ವಿನೋದ್ ಅವರು ಶ್ರೇಯಾಂಕದಲ್ಲಿ ಮೇಲಕ್ಕೆರುವುದು ಅತ್ಯಂತ ಸ್ಪಷ್ಟವಾಗಿದೆ. ಗೌತಮ್ ಅದಾನಿ 2018ರಲ್ಲಿ 8ನೇ ಶ್ರೇಯಾಂಕದಿಂದ ಮೊದಲ ಸ್ಥಾನಕ್ಕೆ ಏರಿದರೆ, ಅವರ ಸಂಪತ್ತು 15.4 ಪಟ್ಟು ಹೆಚ್ಚಾಗಿದೆ. ಅವರ ಸಹೋದರ ವಿನೋದ್ 49ನೇ ಸ್ಥಾನದಿಂದ ಆರನೇ ಸ್ಥಾನಕ್ಕೆ ಏರಿದರು. ಕಳೆದ ಐದು ವರ್ಷಗಳಲ್ಲಿ ಲಸಿಕೆ ತಯಾರಕ ಸೈರಸ್ ಪೂನಾವಾಲಾ ತಮ್ಮ ಸಂಪತ್ತು 2.8 ಪಟ್ಟು ವೃದ್ಧಿಯಾಗಿಸಿಕೊಂಡು ಮೇಲಕ್ಕೆ ಏರಿದರು. ರಾಧಾಕಿಶನ್ ದಮಾನಿ ಅವರು ತಮ್ಮ ಶ್ರೇಯಾಂಕವನ್ನು 15ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಏರಿದ್ದಾರೆ. ಅವರ ನಿವ್ವಳ ಮೌಲ್ಯವು ಕಳೆದ ಐದು ವರ್ಷಗಳಲ್ಲಿ 3.8 ಪಟ್ಟು ಹೆಚ್ಚಾಗಿದೆ.

ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಗೌತಮ್ ಅದಾನಿ ಹೊಸ ಛಾಪುಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಗೌತಮ್ ಅದಾನಿ ಹೊಸ ಛಾಪು

19 ವರ್ಷದ ಕೈವಲ್ಯ ವೋಹ್ರಾ ಕಿರಿಯ ಶ್ರೀಮಂತೆ

19 ವರ್ಷದ ಕೈವಲ್ಯ ವೋಹ್ರಾ ಕಿರಿಯ ಶ್ರೀಮಂತೆ

ಎನ್‌ಡಿಟಿವಿಯ ಪ್ರಣಯ್ ರಾಯ್ ಮತ್ತು ಅವರ ಪತ್ನಿ ರಾಧಿಕಾ ರಾಯ್ ಅವರು 681ನೇ ಪೋಸ್ಟಿಂಗ್‌ನಲ್ಲಿ ಅದಾನಿ ಎಂಟರ್‌ಪ್ರೈಸಸ್ ಪಾಲನ್ನು ಸ್ವಾಧೀನಪಡಿಸಿಕೊಂಡ ನಂತರ ಮತ್ತು ಕಂಪನಿಗೆ ಮುಕ್ತ ಕೊಡುಗೆಯನ್ನು ಘೋಷಿಸಿ ನಂತರ ರೂ 2,000 ಕೋಟಿಗಳ ಒಟ್ಟು ಸಂಪತ್ತನ್ನು ಹೊಂದಿರುವ ಶ್ರೀಮಂತ ಪಟ್ಟಿಗೆ ಮರುಪ್ರವೇಶಿಸಿದ್ದಾರೆ. ಶ್ರೀಮಂತರ ಪಟ್ಟಿಯಲ್ಲಿ 19 ವರ್ಷದ ಜೆಪ್ಟೊ ಸಂಸ್ಥಾಪಕಿ ಕೈವಲ್ಯ ವೋಹ್ರಾ ಅವರು ಇದ್ದಾರೆ. ಕಳೆದ ವರ್ಷ ಕಿರಿಯರಿಗಿಂತ ಇವರು ನಾಲ್ಕು ವರ್ಷ ಚಿಕ್ಕವರು.

ಒಟ್ಟು 1103 ಮಂದಿ ಹುರುನ್‌ ಶ್ರೀಮಂತರ ಪಟ್ಟಿಯಲ್ಲಿದ್ದಾರೆ

ಒಟ್ಟು 1103 ಮಂದಿ ಹುರುನ್‌ ಶ್ರೀಮಂತರ ಪಟ್ಟಿಯಲ್ಲಿದ್ದಾರೆ

ಹತ್ತು ವರ್ಷಗಳ ಹಿಂದೆ ಕಿರಿಯ ವಯಸ್ಸಿನ ಶ್ರಿಮಂತರ ವಯಸ್ಸು 37 ಆಗಿತ್ತು. ಒಟ್ಟು 1103 ವ್ಯಕ್ತಿಗಳು ಐಐಎಫ್‌ಎಲ್‌ ವೆಲ್ತ್ ಹುರುನ್ ಇಂಡಿಯಾ ರಿಚ್ ಲಿಸ್ಟ್ 2022ರ ಭಾಗವಾಗಿದ್ದಾರೆ. ಕಳೆದ ವರ್ಷಕ್ಕಿಂತ 96ರಷ್ಟು ಹೆಚ್ಚಾಗಿದೆ. ವರದಿಯ ಪ್ರಕಾರ, ಸಂಚಿತ ಸಂಪತ್ತು 9.4% ರಷ್ಟು ಹೆಚ್ಚಾಗಿದೆ, ಆದರೆ ಸರಾಸರಿ ಸಂಪತ್ತು 1% ರಷ್ಟು ಕಡಿಮೆಯಾಗಿದೆ.

415 ಮಂದಿಯ ಸಂಪತ್ತು ಕುಸಿತ

415 ಮಂದಿಯ ಸಂಪತ್ತು ಕುಸಿತ

602 ವ್ಯಕ್ತಿಗಳು ತಮ್ಮ ಸಂಪತ್ತು ಹೆಚ್ಚಾಗುವುದನ್ನು ಅಥವಾ ಹಾಗೆಯೇ ಇರುವುದನ್ನು ಕಂಡರೆ, 415 ಮಂದಿ ತಮ್ಮ ಸಂಪತ್ತಿನಲ್ಲಿ ಕುಸಿತ ಕಂಡಿದ್ದಾರೆ. ಭಾರತವು ಈ ವರ್ಷ 221 ಬಿಲಿಯನೇರ್‌ಗಳನ್ನು ಹೊಂದಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ 16ರಷ್ಟು ಕಡಿಮೆಯಾಗಿದೆ. 2,700 ಕೋಟಿ ರೂ.ಗಳೊಂದಿಗೆ, ಡಾಟಾ ಪ್ಯಾಟರ್ನ್ಸ್‌ನ ರಂಗರಾಜನ್ ಎಸ್ ಪಟ್ಟಿಯಲ್ಲಿ ಕಾಣಿಸಿಕೊಂಡ ಮೊದಲ ರಕ್ಷಣಾ ಮತ್ತು ಏರೋಸ್ಪೇಸ್ ಕಂಪನಿಯಾಗಿದೆ. ಶ್ರೀಮಂತರ ಪಟ್ಟಿಯಲ್ಲಿ 94 ಅನಿವಾಸಿ ಭಾರತೀಯರಿದ್ದು, ಅವರಲ್ಲಿ 88% ಸ್ವಯಂ ನಿರ್ಮಿತರಾಗಿದ್ದಾರೆ. ರೂ 169,000 ಕೋಟಿ ನಿವ್ವಳ ಮೌಲ್ಯದೊಂದಿಗೆ, ಅದಾನಿ ಗ್ರೂಪ್‌ನ ವಿನೋದ್ ಶಾಂತಿಲಾಲ್ ಅದಾನಿ ಮತ್ತು ಕುಟುಂಬವು ಅತ್ಯಂತ ಶ್ರೀಮಂತ ಎನ್‌ಆರ್‌ಐ ಆಗಿದೆ. ಇಲ್ಲಿ ಫಿನ್‌ಟೆಕ್ ವಲಯದಿಂದ ಎಂಟು 8 ಎಂಟು ಹೊಸ ಶ್ರೀಮಂತರ ಪ್ರವೇಶವಾಗಿದೆ. ಕ್ರೇಡ್‌, Upstox ಮತ್ತು OneCard ಆ ಮೂವರು. 82% ಕ್ಕಿಂತ ಹೆಚ್ಚು ಬಿಲಿಯನೇರ್‌ಗಳು 50 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು 0.6% ಮಾತ್ರ 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಪಟ್ಟಿಯಲ್ಲಿರುವ ಸುಮಾರು 280 ಬಿಲಿಯನೇರ್‌ಗಳು ಎರಡನೇ ತಲೆಮಾರಿನ ಉದ್ಯಮಿಗಳಾಗಿದ್ದಾರೆ.

English summary
Billionaire Gautam Adani beat Reliance Industries Chairman Mukesh Ambani to become India's richest person in the IIFL Wealth Hurun India Rich List 2022.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X