ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೀಪಾವಳಿಗೆ ಜಿಯೋ 5ಜಿ ಸೇವೆ ಆರಂಭ ಎಂದ ಮುಕೇಶ್‌ ಅಂಬಾನಿ, ಎಲ್ಲೆಲ್ಲಿ ಗೊತ್ತಾ?

|
Google Oneindia Kannada News

ನವದೆಹಲಿ, ಆಗಸ್ಟ್‌ 29: ರಿಲಯನ್ಸ್ ಜಿಯೋ ಈ ವರ್ಷ ದೀಪಾವಳಿಯ ವೇಳೆಗೆ ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ಚೆನ್ನೈನಂತಹ ಪ್ರಮುಖ ನಗರಗಳಲ್ಲಿ ಹೈ-ಸ್ಪೀಡ್ 5ಜಿ ಟೆಲಿಕಾಂ ಸೇವೆಗಳನ್ನು ಪ್ರಾರಂಭಿಸಲು ಸಿದ್ಧವಾಗಿದೆ ಎಂದು ರಿಯಲನ್ಸ್‌ ಮುಖಸ್ಥ ಮುಕೇಶ್‌ ಅಂಬಾನಿ ಹೇಳಿದ್ದಾರೆ.

ದೀಪಾವಳಿಯ ತರುವಾಯ 2023ರ ಡಿಸೆಂಬರ್‌ನೊಳಗೆ ದೇಶದಾದ್ಯಂತ ಪ್ರತಿಯೊಂದು ಪಟ್ಟಣ ಮತ್ತು ತಾಲೂಕುಗಳಿಗೆ ತನ್ನ 5ಜಿ ನೆಟ್‌ವರ್ಕ್ ವಿಸ್ತರಿಸಲು ಉದ್ದೇಶಿಸಿದೆ ಎಂದು ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಷೇರುದಾರರನ್ನು ಉದ್ದೇಶಿಸಿ ರಿಲಯನ್ಸ್ ಅಧ್ಯಕ್ಷ ಮುಖೇಶ್ ಅಂಬಾನಿ ಈ ಘೋಷಣೆ ಮಾಡಿದರು.

ಜಿಯೋ 5ಜಿಯ ​​ಇತ್ತೀಚಿನ ಆವೃತ್ತಿಯನ್ನು ಸ್ಟ್ಯಾಂಡ್ ಅಲೋನ್ 5ಜಿ ಎಂದು ಕರೆಯುತ್ತದೆ. ಇದು 5ಜಿ ಮೂಲಸೌಕರ್ಯದಲ್ಲಿ 2 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡಲಿದೆ. ಆಟಿಎಲ್‌ನ ಟೆಲಿಕಾಂ ಆರ್ಮ್ ರಿಲಯನ್ಸ್ ಜಿಯೋ ಇನ್ಫೋಕಾಮ್ ಭಾರತದ 5ಜಿ ತರಂಗಾಂತರ ಹರಾಜು ಬಿಡ್ಡಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿದೆ. ರಿಲಯನ್ಸ್ ಮುಖ್ಯಸ್ಥ ಮುಕೇಶ್‌ ಅಂಬಾನಿ 5ಜಿ ಸೇವೆಗಳ ಪ್ರಾರಂಭದ ವಿವರಗಳನ್ನು ತಿಳಿಯಲು ಹೂಡಿಕೆದಾರರು ಕುತೂಹಲದಿಂದ ಕಾಯುತ್ತಿದ್ದರು.

ರಿಲಯನ್ಸ್ ಜಿಯೋ ಇನ್ಫೋಕಾಮ್ 700 ಎಂಎಚ್‌ಝಡ್‌, 800ಎಂಎಚ್‌ಝಡ್‌, 1800ಎಂಎಚ್‌ಝಡ್‌, 3300ಎಂಎಚ್‌ಝಡ್‌ ಮತ್ತು 26ಜಿಎಚ್‌ಝ್‌ ಬ್ಯಾಂಡ್‌ಗಳಲ್ಲಿ ಸ್ಪೆಕ್ಟ್ರಮ್ ಅನ್ನು ಸ್ವಾಧೀನಪಡಿಸಿಕೊಂಡಿದೆ. ದೂರಸಂಪರ್ಕ ಇಲಾಖೆಯು ಇತ್ತೀಚೆಗೆ ನಡೆಸಿದ 5ಜಿ ಹರಾಜಿನಲ್ಲಿ ಕೇಂದ್ರ ಸರ್ಕಾರವು ಸುಮಾರು 1.5 ಲಕ್ಷ ಮೌಲ್ಯದ ಬಿಡ್‌ಗಳನ್ನು ಪಡೆದುಕೊಂಡಿದೆ.

ಆರು ವರ್ಷಗಳ ಹಿಂದೆ ಪ್ರಾರಂಭವಾದ ಜಿಯೋ ಅತಿ ಕಡಿಮೆ ಅವಧಿಯಲ್ಲಿ ಅತಿ ದೊಡ್ಡ 4ಜಿ ನೆಟ್‌ವರ್ಕ್‌ನ ಬಳಕೆ ಸಮಯದಲ್ಲಿ ಅನೇಕ ವಿಶ್ವ ದಾಖಲೆಗಳನ್ನು ಸೃಷ್ಟಿಸಿದೆ. ಜಿಯೋದ 4ಜಿ ನೆಟ್‌ವರ್ಕ್ 400 ಮಿಲಿಯನ್‌ಗಿಂತಲೂ ಹೆಚ್ಚು ಮತ್ತು ಸಂತೋಷಕರ ಗ್ರಾಹಕರಿಗೆ ಅತ್ಯುನ್ನತ ಗುಣಮಟ್ಟದ, ಅತ್ಯಂತ ಕೈಗೆಟುಕುವ ಡಿಜಿಟಲ್ ಸೇವೆಗಳನ್ನು ಒದಗಿಸುತ್ತದೆ. ಜಿಯೋ ಈಗ ತನ್ನ 5ಜಿ ಸೇವೆಗಳೊಂದಿಗೆ ಇದನ್ನು ಇನ್ನಷ್ಟು ಹೆಚ್ಚಿಸುವ ನಿರೀಕ್ಷೆಯಿದೆ.

ಅಕ್ಟೋಬರ್ ವೇಳೆಗೆ ಭಾರತವು 5ಜಿ ಸೇವೆಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ ಎಂದು ಕೇಂದ್ರ ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಕಳೆದ ವಾರ ಹೇಳಿದ್ದರು. 5G ಎಂಬುದು ಐದನೇ ತಲೆಮಾರಿನ ಮೊಬೈಲ್ ನೆಟ್‌ವರ್ಕ್ ಆಗಿದ್ದು, ಇದು ದೊಡ್ಡ ಪ್ರಮಾಣದ ಡೇಟಾವನ್ನು ಅತ್ಯಂತ ವೇಗವಾಗಿ ವೇಗದಲ್ಲಿ ರವಾನಿಸುವ ಸಾಮರ್ಥ್ಯವನ್ನು ಹೊಂದಿದೆ.

 ಬಳಕೆದಾರರ ಅನುಭವ ಹೆಚ್ಚಳ

ಬಳಕೆದಾರರ ಅನುಭವ ಹೆಚ್ಚಳ

3ಜಿ ಮತ್ತು 4ಜಿ ಗೆ ಹೋಲಿಸಿದರೆ, 5ಜಿ ಅತ್ಯಂತ ಹೆಚ್ಚು ವೇಗವನ್ನು ಹೊಂದಿದೆ. ಇದು ವಿವಿಧ ಕ್ಷೇತ್ರಗಳಲ್ಲಿ ಬಳಕೆದಾರರ ಅನುಭವವನ್ನು ಹೆಚ್ಚಿಸುತ್ತದೆ. ಇದು ಕಡಿಮೆ ವಿಳಂಬದೊಂದಿಗೆ ಹೆಚ್ಚಿನ ಪ್ರಮಾಣದ ಡೇಟಾ ಸಂದೇಶಗಳನ್ನು ಪ್ರಕ್ರಿಯೆಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. 5G ನೆಟ್‌ವರ್ಟ್‌ ಗಣಿಗಾರಿಕೆ, ವೇರ್‌ಹೌಸಿಂಗ್, ಟೆಲಿಮೆಡಿಸಿನ್ ಮತ್ತು ಉತ್ಪಾದನೆಯಂತಹ ಕ್ಷೇತ್ರಗಳಲ್ಲಿ ರಿಮೋಟ್ ಡೇಟಾ ಮಾನಿಟರಿಂಗ್‌ನಲ್ಲಿ ಹೆಚ್ಚಿನ ಬೆಳವಣಿಗೆಯನ್ನು ತರುವ ನಿರೀಕ್ಷೆಯಿದೆ.

 ವಿಶ್ವದಲ್ಲೇ ಅತ್ಯಂತ ವೇಗವಾದ ಸೇವೆ

ವಿಶ್ವದಲ್ಲೇ ಅತ್ಯಂತ ವೇಗವಾದ ಸೇವೆ

ಡಿಸೆಂಬರ್ 2023 ರ ವೇಳೆಗೆ ಇನ್ನು 18 ತಿಂಗಳುಗಳಲ್ಲಿ ಇಡೀ ಭಾರತವನ್ನು ಆವರಿಸಲು ಜಿಯೋ 5ಜಿ ಅನ್ನು ಇತರ ನಗರಗಳು ಮತ್ತು ಪಟ್ಟಣಗಳಿಗೆ ಹಂತ ಹಂತವಾಗಿ ವಿಸ್ತರಿಸಲಾಗುವುದು. 5ಜಿ ಯೋಜನೆಯು ವಿಶ್ವದಲ್ಲೇ ಅತ್ಯಂತ ವೇಗವಾದ ಸೇವೆಯಾಗಿದೆ ಎಂದು ಜಿಯೋ ಹೇಳಿಕೊಂಡಿದೆ. ಇತರ ಆಪರೇಟರ್‌ಗಳಿಗಿಂತ ಭಿನ್ನವಾಗಿ ಜಿಯೋದ 5ಜಿ ನೆಟ್‌ವರ್ಕ್ 4ಜಿ ನೆಟ್‌ವರ್ಕ್‌ನಲ್ಲಿ ಶೂನ್ಯ ಅವಲಂಬನೆಯೊಂದಿಗೆ ಅದ್ವಿತೀಯವಾಗಿರುತ್ತದೆ. ಸ್ಟ್ಯಾಂಡ್-ಅಲೋನ್ 5ಜಿ ಆರ್ಕಿಟೆಕ್ಚರ್‌ನ ಮೂರು ಪಟ್ಟು ಪ್ರಯೋಜನ, 5G ವ್ಯಾಪ್ತಿ, ಸಾಮರ್ಥ್ಯ, ಗುಣಮಟ್ಟ ಮತ್ತು ಕೈಗೆಟುಕುವ ಸಾಟಿಯಿಲ್ಲದ ಸಂಯೋಜನೆಯನ್ನು ನೀಡಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

 ಶಕ್ತಿಯುತ ಸೇವೆ ನೀಡಲು ಜಿಯೋಗೆ ಸಹಾಯ

ಶಕ್ತಿಯುತ ಸೇವೆ ನೀಡಲು ಜಿಯೋಗೆ ಸಹಾಯ

ಜಿಯೋ 5ಜಿ ನಿಜವಾದ 5ಜಿ ಆಗಿರುತ್ತದೆ. ಕಂಪನಿಯು ಅತ್ಯುನ್ನತ ತಂತ್ರಜ್ಞಾನದೊಂದಿಗೆ ಅದ್ವಿತೀಯ 5ಜಿ ಸೇವೆಯನ್ನು ನೀಡುತ್ತದೆ. ಸ್ಟ್ಯಾಂಡ್-ಅಲೋನ್ 5ಜಿ ಕಡಿಮೆ ಲೇಟೆನ್ಸಿ, ಯಂತ್ರದ ಸಂವಹನ, 5ಜಿ ಧ್ವನಿ, ಎಡ್ಜ್ ಕಂಪ್ಯೂಟಿಂಗ್ ಮತ್ತು ನೆಟ್‌ವರ್ಕ್ ಸ್ಲೈಸಿಂಗ್ ಮತ್ತು ಮೆಟಾವರ್ಸ್‌ನಂತಹ ಹೊಸ ಮತ್ತು ಶಕ್ತಿಯುತ ಸೇವೆಗಳನ್ನು ನೀಡಲು ಜಿಯೋಗೆ ಸಹಾಯ ಮಾಡುತ್ತದೆ ಎಂದು ಅಂಬಾನಿ ದೃಢಪಡಿಸಿದರು.

 ಕ್ವಾಂಟಮ್ ಸೆಕ್ಯುರಿಟಿ, ಸುಧಾರಿತ ವೈಶಿಷ್ಟ್ಯ

ಕ್ವಾಂಟಮ್ ಸೆಕ್ಯುರಿಟಿ, ಸುಧಾರಿತ ವೈಶಿಷ್ಟ್ಯ

ಜಿಯೋ ಸ್ಥಳೀಯವಾಗಿ ಎಂಡ್-ಟು-ಎಂಡ್ 5ಜಿ ಸ್ಟಾಕ್ ಅನ್ನು ಅಭಿವೃದ್ಧಿಪಡಿಸಿದೆ. ಇದು ಸಂಪೂರ್ಣವಾಗಿ ದೇಶಿಯವಾಗಿದೆ. ಸಾಫ್ಟ್‌ವೇರ್ ಅನ್ನು ಕ್ವಾಂಟಮ್ ಸೆಕ್ಯುರಿಟಿಯಂತಹ ಸುಧಾರಿತ ವೈಶಿಷ್ಟ್ಯಗಳಿಗೆ ಬೆಂಬಲದೊಂದಿಗೆ ಡಿಜಿಟಲ್‌ನಲ್ಲಿ ನಿರ್ವಹಿಸಲಾಗಿದೆ. ಈಗಾಗಲೇ ಈ ಮೇಡ್-ಇನ್-ಇಂಡಿಯಾ 5ಜಿ ಸ್ಟಾಕ್ ಅನ್ನು ಜಿಯೋ 5ಜಿ ನೆಟ್‌ವರ್ಕ್‌ನಲ್ಲಿ ನಿಯೋಜಿಸಲಾಗಿದೆ. ಮೊದಲ ದಿನದಿಂದಲೇ ನೂರಾರು ಮಿಲಿಯನ್ ಬಳಕೆದಾರರಿಗೆ ಸೇವೆ ಸಲ್ಲಿಸಲು ಸಾಕಷ್ಟು ತಯಾರಿ ನಡೆಸಲಾಗಿದೆ ಎಂದು ಮುಖೇಶ್ ಅಂಬಾನಿ ಹೇಳಿದರು.

English summary
Reliance Jio is all set to launch high-speed 5G telecom services in major cities like Delhi, Mumbai, Kolkata and Chennai by Diwali this year, Reliance Chairman Mukesh Ambani said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X