2005ರ ಮುಂಚಿನ ನೋಟುಗಳ ಬಳಸದಿರಿ

All pre-2005 notes to go out of currency from March 31
ಮುಂಬೈ, ಜ. 23: ಕಪ್ಪು ಹಣ ಹಾಗೂ ನಕಲಿ ನೋಟ್ ಹಾವಳಿಗಳ ನಿಯಂತ್ರಣಕ್ಕೆ ಆರ್ ಬಿಐ ಮಹತ್ವದ ಹೆಜ್ಜೆಯಿಟ್ಟಿದೆ. 500 ಹಾಗೂ 1,000 ರೂಪಾಯಿಗಳ ಕರೆನ್ಸಿ ನೋಟ್ ಗಳು ಸೇರಿದಂತೆ 2005ಕ್ಕಿಂತ ಮೊದಲು ಮುದ್ರಣಗೊಂಡಿರುವ ಎಲ್ಲಾ ಕರೆನ್ಸಿನೋಟ್ ‌ಗಳ ಚಲಾವಣೆಯನ್ನು ಹಿಂಪಡೆಯುವ ನಿರ್ಧಾರಕ್ಕೆ ಅದು ಬಂದಿದೆ. ಮಾರ್ಚ್ 31,2014ರ ಬಳಿಕ ಈ ಕಾರ್ಯವನ್ನು ಆರಂಭಿಸಲಾಗುವುದು.

ಎಪ್ರಿಲ್ 1,2014ರಿಂದ ಮೊದಲ್ಗೊಂಡು ಇಂಥ ನೋಟ್ ಗಳನ್ನು ಸಾರ್ವಜನಿಕರು ಬ್ಯಾಂಕ್ ಗಳಲ್ಲಿ ಬದಲಾಯಿಸುವಂತೆ ಕೇಳಿಕೊಳ್ಳಲಾಗುವುದು ಎಂದು ಆರ್ ಬಿಐ ಹೇಳಿಕೆ ತಿಳಿಸಿದೆ. ನೋಟ್ ಹಿಂಬದಿಯಲ್ಲಿ ಮುದ್ರಿತ ವರ್ಷ ಸೂಚಿಸಲ್ಪಡದಿದ್ದರೆ ಅಂತಹ ನೋಟ್ ಗಳು 2005ಕ್ಕಿಂತ ಮೊದಲು ಮುದ್ರಣಗೊಂಡವುಗಳು ಎಂಬುದನ್ನು ಗ್ರಾಹಕರು ಸುಲಭವಾಗಿ ಅಂದಾಜಿಸಬಹುದಾಗಿದೆ. 2005ರ ಬಳಿಕ ಮುದ್ರಣಗೊಂಡ ನೋಟ್ ಗಳ ಕಡೆ ಸಾಲಿನ ಮಧ್ಯದಲ್ಲಿ ಸಣ್ಣ ಅಕ್ಷರದಲ್ಲಿ ಮುದ್ರಣಗೊಂಡ ವರ್ಷವನ್ನು ಕಣ್ಣಿಗೆ ಕಾಣುವಂತೆ ಮುದ್ರಿಸಲಾಗಿದೆ ಎಂದು ಆರ್‌ಬಿಐ ಮಾಹಿತಿ ನೀಡಿದೆ.

* ಬೆಟ್ಟಿಂಗ್, ಹವಾಲಾ, ಬಡ್ಡಿ ವ್ಯವಹಾರಗಳ ಮೂಲಕ ಕಳ್ಳ ವ್ಯವಹಾರ ನಡೆಸುತ್ತಿದ್ದವರಿಗೆ ಆರ್ ಬಿಐ ನಿಯಮದಿಂದ ಸಂಕಷ್ಟ ಶುರುವಾಗಬಹುದು.

* ವಿದೇಶಕ್ಕೆ ಕಪ್ಪು ಹಣ ಸಾಗಾಣಿಕೆ ಮಾಡುತ್ತಿರುವ ರಾಷ್ಟ್ರಗಳಲ್ಲಿ ಭಾರತಕ್ಕೆ 5ನೆ ಸ್ಥಾನ ಬಂದಿದೆ. 2002-11ರ ವೇಳೆಯಲ್ಲಿ ಭಾರತದಿಂದ ಸುಮಾರು 343.04 ಮಿಲಿಯನ್ ಅಮೆರಿಕನ್ ಡಾಲರ್ (4 ಲಕ್ಷ ಕೋಟಿ) ಕಪ್ಪು ಹಣ ವಿದೇಶಕ್ಕೆ ರವಾನೆಯಾಗಿದೆ

* ವಿದೇಶಕ್ಕೆ ಸಾಗಾಣಿಕೆಯಾಗಿರುವ ಕಪ್ಪುಹಣ ಬಜೆಟ್ ನ ಒಟ್ಟು ಶೇ.25ರಷ್ಟು ಆಗಿದ್ದು, ಇದರಲ್ಲಿ ಶಿಕ್ಷಣ, ಸಾರಿಗೆ, ವಿದ್ಯುತ್, ನೀರಾವರಿ, ಕೈಗಾರಿಕೆ, ಮೂಲಭೂತ ಸೌಕರ್ಯ ಸೇರಿದಂತೆ ವಿವಿಧ ರೀತಿಯ ಸೌಕರ್ಯಗಳನ್ನು ಕಲ್ಪಿಸಬಹುದಾಗಿದೆ ಎಂದು ಸಂಸ್ಥೆ ಅಂದಾಜು ಮಾಡಿದೆ.
* ಸುಮಾರು 500 ಬಿಲಿಯನ್ ಡಾಲರ್ (30 ಲಕ್ಷ ಕೋಟಿ) ಕಪ್ಪುಹಣ ಇರುವುದು ಪತ್ತೆಯಾಗಿದ್ದು ಶೇ 33 ರಷ್ಟು ತೆರಿಗೆ ಹಾಕಿ ಲೆಕ್ಕ ಹಾಕಿದರೆ ಬಾಕಿ ಉಳಿಯುವ 10 ಲಕ್ಷ ಕೋಟಿ ರು ಮೊತ್ತ ಭಾರತ ವಿವಿಧ ಯೋಜನೆಗಳಿಗೆ ಬಳಸಬಹುದಾಗಿದೆ ಎಂದು ಅಂದಾಜಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+