ಜಿಯೋ ವಿರುದ್ಧ ಸಮರ, ಏರ್ಟೆಲ್ ನಿಂದ ಹೊಸ ಕಾಂಬೋ ಆಫರ್

ಬೆಂಗಳೂರು, ಸೆಪ್ಟೆಂಬರ್ 14: ರಿಲಯನ್ಸ್ ಜಿಯೋ ವಿರುದ್ಧ ದರ ಸಮರ ನಡೆಸಿರುವ ಭಾರ್ತಿ ಏರ್ಟೆಲ್ ತನ್ನ ಗ್ರಾಹಕರಿಗೆ ಮತ್ತೊಮ್ಮೆ ಹೊಸ ಕಾಂಬೋ ಆಫರ್ ಘೋಷಿಸಿದೆ. ಇತ್ತೀಚೆಗೆ ಪ್ರಕಟಿಸಿದ್ದ 95 ರು ಗಳ ರೀಚಾರ್ಜ್ ಯೋಜನೆಯನ್ನು ಉತ್ತಮ ಪಡಿಸಿ 97 ರುಗಳ ಹೊಸ ಕಾಂಬೋ ಆಫರ್ ನೀಡುತ್ತಿದೆ.

ಗ್ರಾಹಕರ ಬೇಡಿಕೆಯನ್ನು ಪರಿಗಣಿಸಿ ಕಾಂಬೋ ಆಫರ್ಸ್ ಶುರು ಮಾಡಲಾಗಿದೆ. ಒಂದೇ ಪ್ಲಾನ್ ನಲ್ಲಿ ಕರೆ ಸೌಲಭ್ಯ, ಡೇಟಾ, ಅಗತ್ಯ ವ್ಯಾಲಿಡಿಟಿ, ಕಡಿಮೆ ವೆಚ್ಚದ ನಿರ್ವಹಣೆ ಎಲ್ಲಾ ಬೇಡಿಕೆಗಳಿಗೆ ತಕ್ಕಂತೆ ಈ ಯೋಜನೆ ರೂಪಿಸಲಾಗಿದೆ ಎಂದು ಏರ್ಟೆಲ್ ಹೇಳಿದೆ.

35 ರೂಪಾಯಿ, 65 ರೂಪಾಯಿ, 95 ರೂಪಾಯಿ ರೀಚಾರ್ಜ್ ಯೋಜನೆಗಳನ್ನು ಕಳೆದ ತಿಂಗಳು ಪ್ರಕಟಿಸಿತ್ತು. ಆದರೆ, ಇದೆಲ್ಲವೂ ಸೀಮಿತ ಪ್ರದೇಶಕ್ಕೆ ಮಾತ್ರ ಲಭ್ಯವಿತ್ತು. ಆದರೆ, 97ರು ಗಳ ಪ್ರೀಪೇಯ್ಡ್ ಯೋಜನೆ ಭಾರತದೆಲ್ಲೆಡೆ ಲಭ್ಯವಿದೆ.

28 ದಿನಗಳ ವ್ಯಾಲಿಡಿಟಿ ಹೊಂದಿರುವ ಜಿಯೋದ 98ರುಪಾಯಿ ಪ್ರೀಪೇಯ್ಡ್ ರೀಚಾರ್ಜ್ ಪ್ಯಾಕ್ ನಲ್ಲಿ ಅನಿಯಮಿತ ವಾಯ್ಸ್ ಕಾಲ್, 300 ಎಸ್ಎಂ ಎಸ್, ಜಿಯೋ ಆಪ್ ಗಳ ಬಳಕೆಗೆ ಅನುಮತಿ ಸಿಗಲಿದೆ. ಉತ್ತಮ ವೇಗದ ಇಂಟರ್ನೆಟ್ ಡೇಟಾ ಪಡೆಯಬಹುದು. ಮಿಕ್ಕಂತೆ 100 ರು ಗಿಂತ ಕಡಿಮೆ ದರದಲ್ಲಿರುವ ಏರ್ ಟೆಲ್ ನ ಆಫರ್ ಗಳ ವಿವರ ಇಲ್ಲಿದೆ...

97ರು ಪ್ಯಾಕೇಜ್ ನಲ್ಲಿ ಏನೇನಿದೆ?

97ರು ಪ್ಯಾಕೇಜ್ ನಲ್ಲಿ ಏನೇನಿದೆ?

97ರು ಗಳ ಕಾಂಬೋ ಆಫರ್ ನಲ್ಲಿ 350 ನಿಮಿಷಗಳ ಸ್ಥಳೀಯ, ಎಸ್ಟಿಡಿ, ರೋಮಿಂಗ್ ವಾಯ್ಸ್ ಕಾಲ್ಸ್ ಲಭ್ಯ. ಜೊತೆಗೆ 3ಜಿ/4ಜಿ ಡೇಟಾ 1.5 ಜಿಬಿ ಸಿಗಲಿದೆ. 200 ಸ್ಥಳೀಯ ಹಾಗೂ ಎಸ್ಟಿಡಿ ಎಸ್ಎಂಎಸ್ ಅಲ್ಲದೆ, ವ್ಯಾಲಿಡಿಟಿ 28 ದಿನಗಳ ತನಕ ಇರಲಿದೆ. ಏರ್ ಟೆಲ್ ವೆಬ್ ಸೈಟ್, ಮೈ ಏರ್ ಟೆಲ್ ಆಪ್ ಮೂಲಕ ರೀಚಾರ್ಜ್ ಮಾಡಿಸಿಕೊಳ್ಳಬಹುದಾಗಿದೆ. 95 ರು ಹಾಗೂ 99 ರುಗಳ ಮತ್ತೆರಡು ಯೋಜನೆಗಳನ್ನು ಏರ್ ಟೆಲ್ ಹೊಂದಿದ್ದು, ಜಿಯೋದ 98ರು ಗಳ ಯೋಜನೆಗೆ ಟಾಂಗ್ ನೀಡಲು ಸಜ್ಜಾಗಿದೆ.

ಏರ್ಟೆಲ್ ನ 35 ರೂಪಾಯಿ ಪ್ಲಾನ್

ಏರ್ಟೆಲ್ ನ 35 ರೂಪಾಯಿ ಪ್ಲಾನ್

ಏರ್ಟೆಲ್ ನ 35 ರೂಪಾಯಿ ಪ್ಲಾನ್ ನಲ್ಲಿ 26.66 ರೂಪಾಯಿ ಟಾಕ್ ಟೈಂ ಸಿಗಲಿದೆ. ಒಂದು ಸೆಕೆಂಡ್ ಗೆ ಒಂದು ಪೈಸೆಯಂತೆ ಲ್ಯಾಂಡ್ ಲೈನ್ ಹಾಗೂ ಎಸ್.ಟಿ.ಡಿ. ಕರೆ ಲಭ್ಯವಾಗಲಿದೆ. 100 ಎಂಬಿ 3ಜಿ ಇಂಟರ್ನೆಟ್ ಡೇಟಾ ಗ್ರಾಹಕರಿಗೆ ಸಿಗಲಿದ್ದು, ಇದು 28 ದಿನಗಳ ವ್ಯಾಲಿಡಿಟಿ ಹೊಂದಿದೆ.

65 ರುಪಾಯಿಗಳ ಪ್ರೀಪೇಯ್ಡ್ ರೀಚಾರ್ಜ್

65 ರುಪಾಯಿಗಳ ಪ್ರೀಪೇಯ್ಡ್ ರೀಚಾರ್ಜ್

65 ರುಪಾಯಿಗಳ ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯಲ್ಲಿ 65 ರೂಪಾಯಿ ಟಾಕ್ ಟೈಂ ಸಿಗಲಿದೆ. ಪ್ರತಿ ಒಂದು ಸೆಕೆಂಡ್ ಗೆ ಒಂದು ಪೈಸೆಯಂತೆ ಎಸ್ಟಿಡಿ ಕರೆ ಸಿಗಲಿದೆ. 200 ಎಂಬಿ 3ಜಿ/4ಜಿ ಇಂಟರ್ನೆಟ್ ಡೇಟಾ ಲಭ್ಯವಾಗಲಿದೆ. ಇದರ ವ್ಯಾಲಿಡಿಟಿ ಕೂಡಾ 28 ದಿನಗಳು

 95 ರುಪಾಯಿ ಪ್ರೀಪೇಯ್ಡ್ ರೀಚಾರ್ಜ್

95 ರುಪಾಯಿ ಪ್ರೀಪೇಯ್ಡ್ ರೀಚಾರ್ಜ್

28 ದಿನಗಳ ವ್ಯಾಲಿಡಿಟಿ ಹೊಂದಿರುವ 95 ರುಪಾಯಿ ಪ್ರೀಪೇಯ್ಡ್ ರೀಚಾರ್ಜ್ ಪ್ಯಾಕ್ ನಲ್ಲಿ 95 ರು ಗಳ ಫುಲ್ ಟಾಕ್ ಟೈಮ್, ಪ್ರತಿ ಒಂದು ಸೆಕೆಂಡ್ ಗೆ ಒಂದು ಪೈಸೆಯಂತೆ ಎಸ್ಟಿಡಿ ಕರೆ ಸಿಗಲಿದೆ. 500 ಎಂಬಿ 3ಜಿ/4ಜಿ ಇಂಟರ್ನೆಟ್ ಡೇಟಾ ಪಡೆಯಬಹುದು.

ಏರ್ ಟೆಲ್ ನ 47ರುಪಾಯಿ ಯೋಜನೆ

ಏರ್ ಟೆಲ್ ನ 47ರುಪಾಯಿ ಯೋಜನೆ

ಏರ್ ಟೆಲ್ ನ 47ರುಪಾಯಿ ಯೋಜನೆಯು 28 ದಿನಗಳ ಕಾಲ ವ್ಯಾಲಿಡಿಟಿ ಹೊಂದಿದೆ. 150 ನಿಮಿಷಗಳ ಸ್ಥಳೀಯ, ಎಸ್ಟಿಡಿ ಹಾಗೂ ರಾಷ್ಟ್ರೀಯ ರೋಮಿಂಗ್ ಕಾಲ್ಸ್ ಲಭ್ಯವಿದೆ. 50 ಎಸ್ ಎಂ ಎಸ್(ಸ್ಥಳೀಯ ಪ್ಲಸ್ ಎಸ್ಟಿಡಿ) ಹಾಗೂ 500 ಎಂಬಿ 2ಜಿ/3ಜಿ /4ಜಿ ಡೇಟಾ ಸಿಗಲಿದೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+