ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರಕ್ಕೆ 10,000 ಕೋಟಿ ಬಾಕಿ ತೀರಿಸಿದ ಏರ್‌ಟೆಲ್

|
Google Oneindia Kannada News

ನವದೆಹಲಿ, ಫೆಬ್ರವರಿ 17: ಕೆಲವು ದಿನಗಳ ಹಿಂದಷ್ಟೆ ಸುಪ್ರೀಂಕೋರ್ಟ್ ಟೆಲಿಕಾಂ ಕಂಪೆನಿಗಳು ಹಾಗೂ ಸರ್ಕಾರದ ವಿರುದ್ಧ ಛಾಟಿ ಬೀಸಿದ ಪರಿಣಾಮವಾಗಿ ಏರ್‌ಟೆಲ್ 10,000 ಕೋಟಿ ಬಾಕಿ ಹಣ ತೀರಿಸಿದೆ.

ಸೋಮವಾರ ಈ ಬಗ್ಗೆ ಅಧಿಕೃತ ಹೇಳಿಕೆಯನ್ನು ಏರ್‌ಟೆಲ್ ನೀಡಿದ್ದು, ದೂರವಾಣಿ ನಿಗಮಕ್ಕೆ 10,000 ಕೋಟಿ ಹಣವನ್ನು ಪಾವತಿಸಿದ್ದೇವೆ. ಇನ್ನುಳಿದ ಬಾಕಿ ಹಣವನ್ನು ಕಂಪೆನಿಯ ಸ್ವ ಮೌಲ್ಯಮಾಪನ ಮಾಡಿದ ನಂತರ ಪಾವತಿಸುವುದಾಗಿ ಹೇಳಿದೆ.

ಈಗ ನೀಡಲಾಗಿರುವ 10,000 ಕೋಟಿ ಹಣವನ್ನು ಭಾರತಿ ಏರ್‌ಟೆಲ್, ಹೆಕ್ಸಾಕಾಮ್, ಟೆಲಿನೋರ್ ದೂರವಾಣಿ ಸಂಸ್ಥೆಗಳಿಗಾಗಿ ನೀಡಲಾಗಿದೆ. ಇನ್ನೂ ಕೋಟ್ಯಂತರ ಹಣವನ್ನು ಏರ್‌ಟೆಲ್ ಪಾವತಿ ಮಾಡಬೇಕಿದೆ.

 Airtel Payed 10,000 Crore To Central Government

ಪರವಾನಗಿ ಶುಲ್ಕ ಸೇರಿ ಇನ್ನೂ ಕೆಲವು ಶುಲ್ಕ ಮತ್ತು ದಂಡಗಳನ್ನು ಏರ್‌ಟೆಲ್ ಪಾವತಿಸಬೇಕಿದ್ದು, 10,000 ಕೋಟಿ ನೀಡಿದ ಹೊರತಾಗಿ ಇನ್ನೂ ಸುಮಾರು 35,000 ಕೋಟಿ ಹಣ ಬಾಕಿ ಉಳಿಸಿಕೊಂಡಿದೆ.

ಟೆಲಿಕಾಂ ಸಂಸ್ಥೆಗಳ ಬಾಕಿ ಹಣ ಪಾವತಿ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಇತ್ತೀಚೆಗೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಕಾನೂನನ್ನು ಪಾಲಿಸಲಾಗುತ್ತಿಲ್ಲ, ಸುಪ್ರೀಂಕೋರ್ಟ್ ಅನ್ನು ಮುಚ್ಚಿಬಿಡೋಣವೇ? ಎಂದು ಪ್ರಶ್ನೆ ಮಾಡಿದ್ದರು.

ಸುಪ್ರೀಂ ಸೂಚನೆ ಬಳಿಕ ದೂರವಾಣಿ ಇಲಾಖೆಯು ಎಲ್ಲಾ ಟೆಲಿಕಾಂ ಸಂಸ್ಥೆಗಳಿಗೆ ನೊಟೀಸ್ ನೀಡಿ, ಬಾಕಿ ಹಣ ಪಾವತಿಸುವಂತೆ ಒತ್ತಡ ಹೇರಿತ್ತು.

English summary
Bharti Airtel paid 10,000 crore to the telecom department of the central government. It says the balance amount will pay after the self-assessment exercise.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X