• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಏರ್ಟೆಲ್ ನಿಂದ ಹೊಸ ಪ್ರೀಪೇಯ್ಡ್ ಯೋಜನೆ, ಏನೇನಿದೆ?

|

ಬೆಂಗಳೂರು, ಸೆಪ್ಟೆಂಬರ್ 27: ಜಿಯೋ ಹಾಗೂ ವೊಡಾಫೋನ್ ಗೆ ಪೈಪೋಟಿ ನೀಡಲು ಭಾರ್ತಿ ಏರ್ ಟೆಲ್ ಹೊಸ ಪ್ರೀಪೇಯ್ಡ್ ಪ್ಲಾನ್ ಬಿಡುಗಡೆ ಮಾಡಿದೆ. ಹೆಚ್ಚು ಕರೆ ಮಾಡುವ ಗ್ರಾಹಕರಿಗೆ ಈ ಪ್ಯಾಕ್ ಹೆಚ್ಚಿನ ಲಾಭ ನೀಡಲಿದೆ ಎಂದು ದೇಶದ ಎರಡನೇ ದೊಡ್ಡ ಟೆಲಿಕಾಂ ಕಂಪನಿ ಏರ್ಟೆಲ್ ಹೇಳಿದೆ

ಜಿಯೋ ವಿರುದ್ಧ ಸಮರ, ಏರ್ಟೆಲ್ ನಿಂದ ಹೊಸ ಕಾಂಬೋ ಆಫರ್

ಪ್ರೀಪೇಯ್ಡ್ ಚಂದಾದಾರ 289 ರೂಪಾಯಿಗಳ ರೀಚಾರ್ಚ್ ನೊಂದಿಗೆ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.ಈ ಪ್ಲಾನ್ ನಲ್ಲಿ ಏರ್ಟೆಲ್ ಗ್ರಾಹಕರಿಗೆ ಅನಿಯಮಿತ ಸ್ಥಳೀಯ ಹಾಗೂ ಎಸ್ಟಿಡಿ ಕರೆ ಸೌಲಭ್ಯ ಸಿಗಲಿದೆ. ಜತೆಗೆ ವಾಯ್ಸ್ ಕಾಲಿಂಗ್ ಗೆ ಯಾವುದೇ FUP ಮಿತಿ ಇರುವುದಿಲ್ಲ.

ಏರ್ಟೆಲ್ ಪ್ರೀಪೇಯ್ಡ್ ಕಾಂಬೋ ಪ್ಯಾಕ್ 35 ರು ನಿಂದ ಆರಂಭ

ಕಾಲಿಂಗ್ ಜೊತೆ ಒಂದು ಜಿಬಿ ಡೇಟಾ ಸಿಗುತ್ತದೆ. ಪ್ರತಿ ದಿನ 100 ಎಸ್ಎಂಎಸ್ ಉಚಿತ. ಈ ಯೋಜನೆ 48 ದಿನಗಳ ವ್ಯಾಲಿಡಿಟಿ ಹೊಂದಿದೆ.

ಏರ್ಟೆಲ್ ನಿಂದ ನೆಟ್ ಫ್ಲಿಕ್ಸ್ ಚಂದಾದಾರಿಕೆ ಉಚಿತ

ಮೂರು ತಿಂಗಳ ಅವಧಿಯ ಯೋಜನೆ ಬೇಕಾದರೆ 495 ರು ಹಾಗೂ 559 ರು ಯೋಜನೆ ತೆಗೆದುಕೊಳ್ಳಬಹುದು. 495 ರುಪಾಯಿ ಯೋಜನೆ 84 ದಿನಗಳ ವ್ಯಾಲಿಡಿಟಿ, ಅನಿಯಮಿತ ಕರೆ, 100 ಎಸ್ಎಂಎಸ್ ಪ್ರತಿದಿನ, 1.4 ಜಿಬಿ ಪ್ರತಿದಿನ ಸಿಗಲಿದೆ. 559 ಯೋಜನೆ 90 ದಿನಗಳ ವ್ಯಾಲಿಡಿಟಿ ಹೊಂದಿದೆ. ಇನ್ನು ಏರ್ಟೆಲ್ 1, 199 ರೂಪಾಯಿ ಪ್ಲಾನ್ ನಲ್ಲಿಯೂ ಬದಲಾವಣೆ ಮಾಡಿದೆ. 90 ಜಿಬಿ ಡೇಟಾ ಬದಲಿಗೆ 120 ಜಿಬಿ ಡೇಟಾ ಸಿಗಲಿದೆ.

English summary
Airtel Rs 289 is a bundled plan that comes with both data and calling benefits. The subscribers of this plan will get 1GB data and unlimited calling (local, STD and roaming) along with 100 SMS per day with a validity of 48 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X