ಜೆಟ್ ಇಂಧನ ಬೆಲೆ ಗಗನಕ್ಕೆ; ವಿಮಾನ ಪಯಣವಾಗಲಿದೆ ಇನ್ನೂ ದುಬಾರಿ
ನವದೆಹಲಿ ಮೇ 16: ಇಂಧನ ಬೆಲೆ ಕೇವಲ ಜನಸಾಮಾನ್ಯರಿಗೆ ಮಾತ್ರವಲ್ಲ, ಆಕಾಶದಲ್ಲಿ ಪ್ರಯಾಣಿಕರನ್ನು ಹೊತ್ತು ಹಾರುವ ಹಕ್ಕಿಗಳಾದ ವಿಮಾನಯಾನಗಳ ಸೇವೆ ನೀಡುವ ಕಂಪನಿಗಳಿಗೂ ಬೆಲೆ ಏರಿಕೆ ಬಿಸಿ ತಟ್ಟಿದೆ. ನೀವು ವಿಮಾನದಲ್ಲಿ ಪ್ರಯಾಣಿಸುತ್ತಿದ್ದರೆ ನಿಮಗೆ ಬ್ಯಾಡ್ ನ್ಯೂಸ್ ಎನ್ನಬಹುದು. ಜೆಟ್ ಇಂಧನ ಅಥವಾ ಏವಿಯೇಷನ್ ಟರ್ಬೈನ್ ಇಂಧನ (ಎಟಿಎಫ್) ಬೆಲೆಗಳು ಮತ್ತೊಮ್ಮೆ ಏರಿಕೆಯಾಗಿದೆ.
ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ತನ್ನ ಜೆಟ್ ಇಂಧನ ಬೆಲೆಯನ್ನು 5% ರಷ್ಟು ಹೆಚ್ಚಿಸಿದೆ. ಇದರಿಂದಾಗಿ ಅದರ ಬೆಲೆ ಕಿಲೋಲೀಟರ್‌ಗೆ 6188 ರೂಪಾಯಿಗಳಷ್ಟು ಹೆಚ್ಚಾಗಿದೆ. ಈ ಹೆಚ್ಚಳದ ನಂತರ ದೆಹಲಿಯಲ್ಲಿ ಅದರ ಬೆಲೆ ಪ್ರತಿ ಕಿಲೋಲೀಟರ್‌ಗೆ 1.16 ಲಕ್ಷದಿಂದ 1.23 ಲಕ್ಷಕ್ಕೆ ಏರಿದೆ. ಜನವರಿ 1, 2022 ರಿಂದ ಇದು ಸತತ 9 ನೇ ಬಾರಿಗೆ ಹೆಚ್ಚಳವಾಗಿದೆ. ಏರ್-ಟ್ರಾವೆಲ್-ವಿಲ್-ಕಾಸ್ಟ್ಲಿಯರ್-ಜೆಟ್-ಇಂಧನ-ಬೆಲೆಗಳು-ಹೆಚ್ಚಿಸಲಾಗಿದ್ದು, ಹೌದು ಜೆಟ್ ಇಂಧನ ಬೆಲೆ ಶೇ.5 ರಷ್ಟು ಏರಿಕೆ ಕಂಡಿದ್ದು, ಸರ್ಕಾರಿ ಕಂಪನಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಜೆಟ್ ಇಂಧನ ಬೆಲೆಯನ್ನು ಹೆಚ್ಚಿಸಿದೆ. ಪ್ರತಿ ಕೆಜಿಗೆ 5% ರಷ್ಟು ಇಂದನ ಬೆಲೆಯ ದರದಲ್ಲಿ ಈ ಹೆಚ್ಚಳ ಮಾಡಲಾಗಿದ್ದು, ನಂತರ ಅದರ ದರವು ಕಿಲೋ ಲೀಟರ್‌ಗೆ 1,16,852 ರೂ.ನಿಂದ 1,23,040 ರೂ.ಗೆ ಏರಿಕೆಯಾಗಿದೆ. ಜೆಟ್ ಇಂಧನದ ಈ ಹೊಸ ದರವು ಮೇ 31, 2022 ರವರೆಗೆ ಅನ್ವಯಿಸುತ್ತದೆ.
ಜೆಟ್ ಇಂಧನ ಅಥವಾ ಏವಿಯೇಷನ್ ಟರ್ಬೈನ್ ಇಂಧನ (ಎಟಿಎಫ್) ಬೆಲೆಗಳು ಜನವರಿಯಿಂದ 61.7% ರಷ್ಟು ಹೆಚ್ಚಾಗಿದ್ದು, ಮತ್ತೊಂದೆಡೆ, ನಾವು ರೂಪಾಯಿಯಲ್ಲಿ ಮೂಲಕ ಹೇಳುವುದಾದರೆ, ಜನವರಿ 1ರಿಂದ ಅದರ ಬೆಲೆ ಕಿಲೋಲೀಟರ್‌ಗೆ 46938 ರೂ.ಗಳಷ್ಟು ಹೆಚ್ಚಾಗಿದೆ. ಇದಾದ ಬಳಿಕ ಅದರ ಬೆಲೆ ಕಿಲೋ ಲೀಟರ್‌ಗೆ 72,062 ರೂ.ನಿಂದ 1.23 ಲಕ್ಷ ರೂ.ಗೆ ಏರಿಕೆಯಾಗಿದೆ. ಆದರೆ, ಪೆಟ್ರೋಲ್ ಮತ್ತು ಡೀಸೆಲ್ ವಿಚಾರಕ್ಕೆ ಬಂದರೆ 40ನೇ ದಿನವಾದರೂ ಅದರ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಜಾಗತಿಕವಾಗಿ ಬೆಲೆ ಏರಿಕೆಯ ಪರಿಣಾಮ
ಭಾರತದಲ್ಲಿ ಜೆಟ್ ಇಂಧನ ಬೆಲೆಯನ್ನು ಸತತ 9ನೇ ಬಾರಿಗೆ ಹೆಚ್ಚಿಸಲಾಗಿದೆ. ಕೋವಿಡ್ ಸಾಂಕ್ರಾಮಿಕ ರೋಗದ ನಂತರ ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಜಾಗತಿಕವಾಗಿ ಬೆಲೆ ಏರಿಕೆಯಾಗುತ್ತಿದೆ ಎಂದು ತಜ್ಞರು ಊಹಿಸುತ್ತಿರುವುದು ಇದರ ಹಿಂದಿನ ಕಾರಣ. ಭಾರತವು ತನ್ನ ತೈಲ ಅವಶ್ಯಕತೆಗಳನ್ನು ಪೂರೈಸಲು 85% ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಆದ್ದರಿಂದ, ಜಾಗತಿಕವಾಗಿ ಅದರ ಏರುತ್ತಿರುವ ಬೆಲೆಗಳು ಭಾರತದ ಮೇಲೂ ನೇರ ಪರಿಣಾಮ ಬೀರುತ್ತಿವೆ.

ವಿಮಾನ ಪ್ರಯಾಣ ದುಬಾರಿಯಾಗಲಿದೆ
ಜೆಟ್ ಇಂಧನ ಅಥವಾ ಏವಿಯೇಷನ್ ಟರ್ಬೈನ್ ಇಂಧನ (ಎಟಿಎಫ್) ಬೆಲೆಯಲ್ಲಿ ಹೆಚ್ಚಳದ ನಂತರ, ಇದು ಗ್ರಾಹಕರ ಮೇಲೆ ನೇರ ಪರಿಣಾಮ ಬೀರುತ್ತದೆ. ಜೆಟ್ ಇಂಧನ ಅಥವಾ ಏವಿಯೇಷನ್ ಟರ್ಬೈನ್ ಇಂಧನ (ATF) ಯಾವುದೇ ಏರ್‌ಲೈನ್‌ನ ನಿರ್ವಹಣಾ ವೆಚ್ಚದ ಸುಮಾರು 40% ನಷ್ಟಿದೆ, ಈ ಕಾರಣದಿಂದಾಗಿ ವಿಮಾನ ಪ್ರಯಾಣವು ಈಗ ದುಬಾರಿಯಾಗಬಹುದು ಎಂದು ವರದಿಯಾಗಿದೆ.
-
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್












Click it and Unblock the Notifications