ಸ್ವಾತಂತ್ರ್ಯೋತ್ಸವ ಸಂಭ್ರಮ : ಏರ್ ಇಂಡಿಯಾದಿಂದಲೂ ಭಾರಿ ಡಿಸ್ಕೌಂಟ್!

ನವದೆಹಲಿ, ಆಗಸ್ಟ್ 13: ಅತಿ ಕಡಿಮೆ ಬೆಲೆಗೆ ವಿಮಾನಯಾನ ಒದಗಿಸುವ ಬಜೆಟ್ ಏರ್ ಲೈನ್ಸ್ ಗೋ ಏರ್ ಈಗ ತನ್ನ ಗ್ರಾಹಕರಿಗೆ ಹೊಸ ಆಫರ್ ಒದಗಿಸಿದ ಬೆನ್ನಲ್ಲೇ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಕೂಡಾ ತನ್ನ ಪ್ರಯಾಣಿಕರಿಗೆ ಆಫರ್ ನೀಡುತ್ತಿದೆ.

ಗೋ ಏರ್ ನಲ್ಲಿ 1, 099 ರೂಪಾಯಿಯಿಂದ ಆರಂಭಗೊಂಡು ಟಿಕೆಟ್ ಖರೀದಿಸಿ, ಪ್ರಯಾಣಿಸಬಹುದಾಗಿದೆ. ಇದೇ ರೀತಿ ಏರ್ ಇಂಡಿಯಾದಲ್ಲೂ ಕೂಡಾ ಅಧಿಕೃತ ವೆಬ್ ಸೈಟ್ ಮೂಲಕ ಮಾಡುವ ಬುಕ್ಕಿಂಗ್ ಗೆ ಕೊಡುಗೆ ಸಿಗಲಿದೆ.

ಆಗಸ್ಟ್ 15ರೊಳಗೆ ಬುಕ್ಕಿಂಗ್ ಮಾಡುವ ದೇಶಿ ಹಾಗೂ ವಿದೇಶಿ ಪ್ರಯಾಣಕ್ಕೂ ಅನ್ವಯವಾಗಲಿದೆ. ಪ್ರೋಮೊ ಕೋಡ್ 18INDAYಬಳಸಬಹುದು. ಏರ್ ಇಂಡಿಯಾ ಎಕ್ಸ್ ಪ್ರೆಸ್, ಅಲೆಯನ್ಸ್ ಏರ್ ಫ್ಲೈಟ್ಸ್ ಗಳಿಗೆ ಇದು ಅನ್ವಯವಾಗುವುದಿಲ್ಲ.

Air India offers discount on flight tickets in Independence Day sale

ಇದೇ ರೀತಿ ಏರ್ ಏಷ್ಯಾ ಇಂಡಿಯಾ ಕೂಡಾ ತನ್ನ ಪ್ರಯಾಣಿಕರಿಗೆ ಶೇ 45ರಷ್ಟು ರಿಯಾಯಿತಿ ನೀಡುತ್ತಿದೆ. ಬೆಂಗಳೂರು, ಕೋಲ್ಕತ್ತಾ, ಅಮೃತ್ ಸರ್, ನವದೆಹಲಿ, ರಾಂಚಿ, ಹೈದರಾಬಾದ್ ಪ್ರಯಾಣಕ್ಕೆ ಏರ್ ಏಷ್ಯಾ ವೆಬ್ ಸೈಟ್ ಮೂಲಕ ಬುಕ್ ಮಾಡಿ ರಿಯಾಯಿತಿ ಪಡೆಯಬಹುದು.

ಆಗಸ್ಟ್ 19ರಿಂದ ಫೆಬ್ರವರಿ 2019ರ ನಡುವಿನ ಪ್ರಯಾಣಕ್ಕೆ ಇದು ಮಾನ್ಯತೆ ಸಿಗಲಿದೆ. ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಜೆಟ್ ಏರ್ ವೇಸ್ ಕೂಡಾ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಶೇ 30ರಷ್ಟು ರಿಯಾಯಿತಿಯನ್ನು ಎಕಾನಮಿ ಹಾಗೂ ಪ್ರೀಮಿಯರ್ ಕ್ಲಾಸ್ ದರದ ಮೇಲೆ ನೀಡುತ್ತಿದೆ. ಇದು ರಿಟರ್ನ್ ಟಿಕೆಟ್ ದರವನ್ನು ಒಳಗೊಂಡಿರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+