• search

ಚುನಾವಣೆಗೂ ಮುನ್ನ ಜನತೆಗೆ ಮೋದಿ ಸರ್ಕಾರದಿಂದ ಶುಭ ಸುದ್ದಿ

Subscribe to Oneindia Kannada
For Quick Alerts
ALLOW NOTIFICATIONS
For Daily Alerts
    ನರೇಂದ್ರ ಮೋದಿಯಿಂದ ಚುನಾವಣೆಗೂ ಮುಂಚೆನೇ ಬಂತು ಸಿಹಿ ಸುದ್ದಿ | Oneindia Kannada

    ನವದೆಹಲಿ, ಡಿಸೆಂಬರ್ 07: ಲೋಕಸಭೆ ಚುನಾವಣೆಗೂ ಮುನ್ನ ಜನತೆಗೆ ಮೋದಿ ಸರ್ಕಾರದಿಂದ ಶುಭ ಸುದ್ದಿ ಸಿಗುವ ಸಾಧ್ಯತೆ ಕಂಡು ಬಂದಿದೆ. ಏರ್ ಕಂಡೀಷನರ್, ಡಿಶ್ ವಾಷರ್ಸ್, ಟಿವಿ, ಡಿಜಿಟಲ್ ಕೆಮರಾ ಹೀಗೆ ವಿವಿಧ ವಸ್ತುಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಇಳಿಕೆ ಮಾಡುವ ಸೂಚನೆ ಸಿಕ್ಕಿದೆ.

    ಜಿ.ಎಸ್.ಟಿ. ಸಭೆಯಲ್ಲಿ ಈ ಬಗ್ಗೆ ಮಹತ್ವದ ನಿರ್ಣಯ ಕೈಗೊಳ್ಳಲಾಗುತ್ತದೆ. ಶೇಕಡಾ 28ರಷ್ಟು ಜಿ.ಎಸ್.ಟಿ. ಅಡಿಯಲ್ಲಿ ಇರುವ ಅನೇಕ ಸರಕುಗಳ ತೆರಿಗೆಯನ್ನು ತಗ್ಗಿಸಿ ಶೇಕಡಾ 18ರ ಜಿ.ಎಸ್.ಟಿ. ಸ್ತರಕ್ಕೆ ಇಳಿಸಲು ಮುಂದಾಗಿದೆ.

    ಜಿಎಸ್ಟಿ ಬಲವರ್ಧನೆ: ಡಿಜಿಟಲ್ ವ್ಯವಹಾರಕ್ಕೆ ಕ್ಯಾಶ್ ಬ್ಯಾಕ್ ಆಫರ್

    ಹಣಕಾಸು ಸಚಿವ ಅರುಣ್ ಜೇಟ್ಲಿ ನೇತೃತ್ವದಲ್ಲಿ ಜಿ.ಎಸ್.ಟಿ. ಕೌನ್ಸಿಲ್ ಡಿಸೆಂಬರ್ 17ರಂದು ಸಭೆ ನಡೆಸಲಿದೆ. ಜಿ.ಎಸ್.ಟಿ. ಪಟ್ಟಿಯನ್ನು ಮೂರು ಭಾಗಗಳಾಗಿ ವಿಂಗಡಿಸಲು ನಿರ್ಧರಿಸಲಾಗಿದೆ. ಏಪ್ರಿಲ್-ಮೇ 2019ರಲ್ಲಿ ನಡೆಯಲಿರುವ ಚುನಾವಣೆ ದೃಷ್ಟಿಯಿಂದ ತೆರಿಗೆ ಇಳಿಕೆಯಲ್ಲಿ ಭಾರಿ ಬದಲಾವಣೆ ಸಾಧ್ಯತೆಯಿದೆ.

    ಜಿಎಸ್ಟಿ ವ್ಯಾಪ್ತಿಗೆ ಪೆಟ್ರೋಲ್ : ರಾಜ್ಯಗಳಿಂದ ವಿರೋಧ

    ಸಿಮೆಂಟ್ ಮಾತ್ರ ಶೇಕಡಾ 28ರ ಜಿ.ಎಸ್.ಟಿ. ಅಡಿಯಲ್ಲಿಯೇ ಉಳಿಯಲಿದೆ. ಮಿಕ್ಕಂತೆ, ದರ ಕಡಿತದ ಬಗ್ಗೆ ಈಗಾಗಲೇ ಚರ್ಚೆ ನಡೆಯುತ್ತಿದೆ. ಶೇ 18ರ ಪ್ರಮಾಣದಲ್ಲಿ ತೆರಿಗೆ ಕಟ್ಟಬೇಕಿದ್ದ ಕೆಲ ವಸ್ತುಗಳು ಶೇಕಡಾ 5ರ ಜಿ.ಎಸ್.ಟಿ. ಪಟ್ಟಿಗೆ ಸೇರಲಿವೆ. ಇಲ್ಲಿ ತನಕ(ನವೆಂಬರ್ ಅಂತ್ಯಕ್ಕೆ) ಸರ್ಕಾರಕ್ಕೆ 7.76 ಲಕ್ಷ ಕೋಟಿ ಆದಾಯವನ್ನು ಜಿಎಸ್ಟಿ ತಂದು ಕೊಟ್ಟಿದೆ.

    ಯಾವ ಯಾವ ವಸ್ತು ಮೇಲೆ ತೆರಿಗೆ ಇಲ್ಲ

    ಯಾವ ಯಾವ ವಸ್ತು ಮೇಲೆ ತೆರಿಗೆ ಇಲ್ಲ

    ಲಕೋಟೆಯಲ್ಲಿ ಪ್ಯಾಕ್ ಮಾಡದ ಆಹಾರ ಧಾನ್ಯಗಳು, ಹಾಲು, ಮೊಟ್ಟೆ, ಮೊಸರು, ಲಸ್ಸಿ, ಪನ್ನೀರ್, ಬ್ರಾಂಡ್ ಅಲ್ಲದ ನೈಸರ್ಗಿಕ ಜೇನು ತುಪ್ಪ, ತರಕಾರಿ, ಪ್ಯಾಕ್ ಮಾಡದ ಗೋಧಿ, ಮೈದಾ, ಕಡಲೆ ಹಿಟ್ಟು, ಉಪ್ಪು, ಗರ್ಭನಿರೋಧಕಗಳು, ಕಚ್ಛಾ ಸೆಣಬು, ಕಚ್ಛಾ ರೇಷ್ಮೆ ಜಿಎಸ್ಟಿಯಿಂದ ಮುಕ್ತವಾಗಿವೆ. ಇನ್ನು ಶಿಕ್ಷಣ ಮತ್ತು ಆರೋಗ್ಯ ವಲಯವನ್ನು ಜಿಎಸ್ಟಿಯಿಂದ ಹೊರಗಿಡಲಾಗಿದೆ. ಎರಡೂ ಸೇವೆಗಳ ಮೇಲೆ ಯಾವುದೇ ತೆರಿಗೆ ಇರುವುದಿಲ್ಲ

    ದೆಹಲಿಯಲ್ಲಿ ಜುಲೈ ತಿಂಗಳು ನಡೆದ ಜಿಎಸ್ಟಿ ಮಂಡಳಿ ಸಭೆಯಲ್ಲಿ ನ್ಯಾಪ್ಕಿನ್, ಕೈಮಗ್ಗ, ಕರಕುಶಲ ಉತ್ಪನ್ನ ಸೇರಿದಂತೆ 40ಕ್ಕೂ ಅಧಿಕ ಸರಕು, ಸೇವೆಗಳ ತೆರಿಗೆ ಹೊರೆ ಇಳಿಸುವ ಪ್ರಸ್ತಾವನೆ ಬಂದಿತ್ತು. ಆದರೆ, ನಿರೀಕ್ಷೆಗೂ ಮೀರಿ 90ಕ್ಕೂ ಅಧಿಕ ಸಾಮಾಗ್ರಿಗಳ ಮೇಲಿನ ತೆರಿಗೆಯನ್ನು ತಗ್ಗಿಸಲಾಗಿದೆ.

    ಜಿಎಸ್ಟಿ ವ್ಯಾಪ್ತಿಗೆ ಬಂದರೂ ಇಂಧನ ಬೆಲೆ ತಗ್ಗಲ್ಲ?

    ಕೇವಲ ಮೂರು ಸ್ತರಗಳಲ್ಲಿ ತೆರಿಗೆ ಇರಲಿ

    ಕೇವಲ ಮೂರು ಸ್ತರಗಳಲ್ಲಿ ತೆರಿಗೆ ಇರಲಿ

    ಶೇ. 5, 12, 18 ಮತ್ತು ಶೇ. 28ರ ಸ್ತರದಲ್ಲಿ 1300ಕ್ಕೂ ಹೆಚ್ಚು ವಸ್ತುಗಳು ಹಾಗೂ 500ಕ್ಕೂ ಅಧಿಕ ಸೇವೆಗಳ ಮೇಲೆ ತೆರಿಗೆ ವಿಧಿಸಲಾಗುತ್ತಿದೆ. ಚಿನ್ನಕ್ಕೆ ಶೇ. 3 ಮತ್ತು ಬೆಲೆಬಾಳುವ ಹರಳುಗಳಿಗೆ ಶೇ. 0.25 ತೆರಿಗೆ ವಿಧಿಸಲಾಗುತ್ತಿದೆ. ಈಗ ಶೇ. 12 ಮತ್ತು 18ನ್ನು ವಿಲೀನಗೊಳಿಸಿ ಶೇ. 15ರ ಹೊಸ ಸ್ತರ ಪರಿಚಯಿಸುವ ಚಿಂತನೆ ಇದೆ. ಈ ಪ್ರಸ್ತಾವನೆಗೆ ಒಪ್ಪಿಗೆ ಸಿಕ್ಕರೆ ನವೆಂಬರ್ 2018ರಿಂದ ಕೇವಲ ಮೂರು ಸ್ತರಗಳಲ್ಲಿ ಮಾತ್ರ ಜಿಎಸ್ಟಿ ಇರಲಿದೆ ಎಂದು ವಿತ್ತ ಸಚಿವಾಲಯದ ಮೂಲಗಳು ಹೇಳಿವೆ.

    ಜಿಎಸ್ಟಿ: ಜನ ಸಾಮಾನ್ಯರ 5 ಈಡೇರದ ನಿರೀಕ್ಷೆಗಳು

    ವಿದ್ಯುಚ್ಛಕ್ತಿ ಮೇಲೆ ಏಕರೂಪ ತೆರಿಗೆ ತರಬೇಕು

    ವಿದ್ಯುಚ್ಛಕ್ತಿ ಮೇಲೆ ಏಕರೂಪ ತೆರಿಗೆ ತರಬೇಕು

    ವಿದ್ಯುಚ್ಛಕ್ತಿ ಮೇಲೆ ಏಕರೂಪ ತೆರಿಗೆ ತರಬೇಕು ಎಂಬ ಬೇಡಿಕೆ ಇದ್ದರೂ, ಕಷ್ಟಸಾಧ್ಯ. ಎಲ್ಲಾ ರಾಜ್ಯಗಳ ಆದಾಯ ಸೇರಿ 31,000 ಕೋಟಿ ರು ವಾರ್ಷಿಕ ಆದಾಯದ ಈ ಕ್ಷೇತ್ರದಲ್ಲಿ ಜಿಎಸ್ಟಿ ಜಾರಿಯಾದರೆ ವಿದ್ಯುತ್ ಆಧಾರಿತ ಉತ್ಪನ್ನಗಳ ಮೇಲಿನ ತೆರಿಗೆ ಕೂಡಾ ಪರಿಷ್ಕರಣೆಗೊಳ್ಳಬೇಕಾಗುತ್ತದೆ. ಅಲ್ಲದೆ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಎರಡಕ್ಕೂ ಆದಾಯ ಖೋತಾ ಹಾಗೂ ನಷ್ಟ ಎದುರಾಗಲಿದೆ. ಒಂದು ವೇಳೆ ಶೇ 5ರಷ್ಟು ತೆರಿಗೆ ಜಾರಿಗೆ ಬಂದರೆ, ರಾಜ್ಯ ಸರ್ಕಾರ ತನ್ನ ನಷ್ಟ ಸರಿದೂಗಿಸಲು ಜಿಎಸ್ಟಿಯೇತರ ಸೆಸ್ ಹಾಕಬಹುದು. ಒಟ್ಟಾರೆ, ಗ್ರಾಹಕನ ಮೇಲೆ ಹೊರೆ ತಪ್ಪಿದ್ದಲ್ಲ

    ಜಿಎಸ್ಟಿ ದರ ಕಡಿತ : ಯಾವ್ಯಾವ ಉತ್ಪನ್ನಗಳು ಸೋವಿಯಾಗಿವೆ

    ಜಿಎಸ್ಟಿ ವ್ಯಾಪ್ತಿಗೆ ಪೆಟ್ರೋಲ್

    ಜಿಎಸ್ಟಿ ವ್ಯಾಪ್ತಿಗೆ ಪೆಟ್ರೋಲ್

    ಜಿಎಸ್ ಟಿ ಪೆಟ್ರೋಲಿಯಂ ಮತ್ತು ಆಲ್ಕೋಹಾಲ್ ಉತ್ಪನ್ನಗಳಿಗೆ ಅನ್ವಯವಾಗಲ್ಲ. ಇದರಿಂದ ಸರ್ಕಾದರ ಬೊಕ್ಕಸಕ್ಕೆ ಭಾರೀ ನಷ್ಟವಾಗುವ ಸಾಧ್ಯತೆ ಇದೆ. ಜಿಎಸ್ಟಿ ವ್ಯಾಪ್ತಿಗೆ ಪೆಟ್ರೋಲಿಯಂ ಉತ್ಪನ್ನಗಳನ್ನು ತರುವುದರಿಂದ ಪೆಟ್ರೋಲ್ ಮೇಲಿನ ಬೆಲೆ ನಿಯಂತ್ರಣ ಸಾಧ್ಯವಿದ್ದು, ಪ್ರತಿ ಲೀಟರ್ ಪೆಟ್ರೋಲ್ ಬೆಲೆ 38ರು ಆಗಲಿದೆ ಎಂಬ ಎಣಿಕೆಯಿದೆ. ಆದರೆ, ಶೇ 18ರ ಜಿಎಸ್ಟಿ ವ್ಯಾಪ್ತಿಗೆ ಬಂದರೆ ಮಾತ್ರ ಬೆಲೆ ತಗ್ಗಲಿದೆ ಆದರೆ, ಪೆಟ್ರೋಲ್-ಡಿಸೇಲ್ ಮೇಲೆ ಸಂಪೂರ್ಣ ಜಿಎಸ್ಟಿ ಪ್ರಪಂಚದಲ್ಲಿ ಎಲ್ಲೂ ಜಾರಿಗೆ ಬಂದಿಲ್ಲ. ಭಾರತದಲ್ಲೂ ಜಿಎಸ್ಟಿ ಜೊತೆ ಆಯಾ ರಾಜ್ಯಗಳ ಸೆಸ್ ಹಾಗೂ ಇನ್ನಿತರ ತೆರಿಗೆಗಳ ಸಮ್ಮಿಶ್ರದೊಂದಿಗೆ ಜಾರಿಗೊಳಿಸಬೇಕಾಗುತ್ತದೆ.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    The Council, chaired by FM Arun Jaitley is expected to meet in the week beginning December 17, to discuss the proposal in what could effectively set 18% as the highest GST tax slab, except only three categories of goods and services.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more