ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ರಿವೇಂಜ್ ಪೋರ್ನ್' ವಿರುದ್ಧ ಮೈಕ್ರೋಸಾಫ್ಟ್ ಸಮರ

By Mahesh
|
Google Oneindia Kannada News

ಬೆಂಗಳೂರು, ಜುಲೈ 24: ಸಾಫ್ಟ್ ವೇರ್ ದಿಗ್ಗಜ ಮೈಕ್ರೋಸಾಫ್ಟ್ ಸಂಸ್ಥೆ 2015 ಆರಂಭದಲ್ಲೇ ಭಾರಿ ಹೊಡೆತಕ್ಕೆ ಸಿಲುಕಿದ ಸುದ್ದಿ ತಿಳಿದಿರಬಹುದು. ಸುಮಾರು 20,355 ಕೋಟಿ ರು ನಷ್ಟ ಅನುಭವಿಸಿದರೂ ಮೈಕ್ರೋಸಾಫ್ಟ್ ಈಗ ಗೂಗಲ್ ನಂತೆ ದಿಟ್ಟ ಹೆಜ್ಜೆಯೊಂದನ್ನು ಇಟ್ಟಿದೆ.

ರಿವೇಂಜ್ ಪೋರ್ನ್ ವಿರುದ್ಧ ಗೂಗಲ್ ನಂತರ ಮೈಕ್ರೋಸಾಫ್ಟ್ ಕೂಡಾ ಸಮರ ಸಾರಿದೆ. ಈ ಮೂಲಕ ಅನೇಕ ಸಂತ್ರಸ್ತರಿಗೆ ನೆರವಾಗುವ ಕಾರ್ಯಕ್ಕೆ ಮುಂದಾಗಿದೆ.

ಮೈಕ್ರೋಸಾಫ್ಟ್ ನ ಬಿಂಗ್, ಎಕ್ಸ್ ಬಾಕ್ಸ್ ಲೈವ್ ಗೇಮಿಂಗ್ ಜಾಲ, ಒನ್ ಡ್ರೈವ್, ಕ್ಲೌಡ್ ಸೇವೆ ಮುಂತಾದೆಡೆ ಅಶ್ಲೀಲತೆ ಎಂದು ಕಂಡು ಬಂದ ಚಿತ್ರ, ವಿಡಿಯೋಗಳಿಗೆ ಕಡಿವಾಣ ಬೀಳಲಿದೆ. [ಎಂಎಸ್ ಆಫೀಸ್ 2016 ವೈಶಿಷ್ಟ್ಯಗಳು]

Microsoft cracks down on revenge porn as well

ಏನಿದು ರಿವೇಂಜ್ ಪೋರ್ನ್: ಒಮ್ಮೆ ಪ್ರೀತಿಸುತ್ತಿದ್ದ ನಂತರ ಭಗ್ನ ಪ್ರೇಮಿಯಾಗಿರುವ ಹುಡುಗನೊಬ್ಬ ತನ್ನ ಮಾಜಿ ಅಥವಾ ಹಾಲಿ ಲವರ್ ಜೊತೆಗೆ ಕೂಡಿ ಕಳೆದ ಖಾಸಗಿ ವಿಡಿಯೋಗಳನ್ನು ಪೋರ್ನ್ ವೆಬ್ ಸೈಟ್ ಗೆ ಸೇರಿಸುವುದು. ಇದು ತಿರಸ್ಕರಿಸಿದ ಪ್ರೇಮಿಯ ವಿರುದ್ಧ ತೆಗೆದುಕೊಳ್ಳುವ ಒಂದು ದ್ವೇಷಪೂರಿತ ಚಟವಾಗಿದೆ.

ಭಗ್ನಪ್ರೇಮಿಗಳು ಈ ರೀತಿ ಖಾಸಗಿ ವಿಡಿಯೋಗಳನ್ನು ಸಾರ್ವಜನಿಕವಾಗಿ ಸಿಗುವಂತೆ ಮಾಡಿ ಪ್ರೇಮಿಯ ಮಾನ ತೆಗೆಯುತ್ತಾರೆ.

ಇದರ ನಿಯಂತ್ರಣ ಹೇಗೆ? : ಈ ಸಂದರ್ಭದಲ್ಲಿ ಇಂಥ ಅಶ್ಲೀಲ ವೆಬ್ ತಾಣಗಳಿಂದ ಸರ್ಚ್ ಇಂಜಿಗ್ ಗೆ ಬರುವ ಚಿತ್ರಗಳು, ವಿಡಿಯೋಗಳನ್ನು ಗೂಗಲ್ ಈಗಾಗಲೇ ನಿರ್ಬಂಧಿಸಿದೆ. ಈಗ ಈ ಸಾಲಿಗೆ ಮೈಕ್ರೋಸಾಫ್ಟ್ ನ ಸರ್ಚ್ ಇಂಜಿನ್ ಬಿಂಗ್ ಕೂಡಾ ಸೇರಿದೆ.

ಇತ್ತೀಚೆಗೆ ಹಾಲಿವುಡ್ ನ ಅನೇಕ ಸೆಲೆಬ್ರಿಟಿಗಳ ನಗ್ನ ಚಿತ್ರಗಳು ಈ ರೀತಿ ಸಾಮಾಜಿಕ ಜಾಲ ತಾಣ ಮುಟ್ಟಿತ್ತು. ಭಾರತಲ್ಲಿ ಎಷ್ಟೋ ಪ್ರಕರಣದಲ್ಲಿ ಇಂಥ ಸನ್ನಿವೇಶಗಳಲ್ಲಿ ಮಾನ ಹರಾಜಾದ ಕಾರಣ ಅತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳಿವೆ.

ಮೈಕ್ರೋಸಾಫ್ಟ್ ಹಾಗೂ ಗೂಗಲ್ ಈಗ ಅಂಥ ವಿಡಿಯೋ, ಚಿತ್ರಗಳಿಗೆ ತಡೆಯೊಡ್ಡಿದರೂ ಹಿಂಬಾಗಿಲಿನಿಂದ ಸಂತ್ರಸ್ತರಿಗೆ ಕಿರುಕುಳ ಕೊಡುವ ಪ್ರಕ್ರಿಯೆ ಮುಂದುವರೆದಿದೆ. ಅದರೆ, ಹೆಚ್ಚೆಚ್ಚು ಜನರಿಗೆ ಇಂಥ ಚಿತ್ರಗಳು ತಲುಪದಂತೆ ಮಾಡುವ ಕಾಯಕದಲ್ಲಿ ಗೂಗಲ್ ಹಾಗೂ ಮೈಕ್ರೋಸಾಫ್ಟ್ ಒಂದಾಗಿದೆ.

English summary
In an attempt to help victims of revenge porn, Microsoft’s Bing Search engine has joined hands with Google to ban search results to such videos and links.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X