Get Updates
Get notified of breaking news, exclusive insights, and must-see stories!

Navanaami unveils Megaleio: ಹೈದ್ರಾಬಾದ್‌ನಲ್ಲಿ ಐಷಾರಾಮಿ 50 ಅಂತಸ್ತಿನ ಅಪಾರ್ಟ್‌ಮೆಂಟ್: ಹೇಗಿದೆ ನೋಡಿ...

ಮುತ್ತಿನ ನಗರಿ ಹೈದರಾಬಾದ್‌ನಲ್ಲಿ 50 ಅಂತಸ್ತಿನ ಐಷಾರಾಮಿ ಅಪಾರ್ಟ್‌ಮೆಂಟ್ ನಿರ್ಮಾಣ ಮಾಡಲಾಗಿದೆ. ಈ ಅಪಾರ್ಟ್‌ಮೆಂಟ್ ಬಗ್ಗೆ ನೀವು ಕೇಳಿದರೆ ಕಳೆದೇ ಹೋಗ್ತೀರಾ... ಅಷ್ಟಕ್ಕೂ ಇದರಲ್ಲಿ ಏನೆಲ್ಲಾ ಇದೆ ಅನ್ನೋದನ್ನು ವಿವರವಾಗಿ ನೋಡೋಣ.

ದಕ್ಷಿಣ ಭಾರತದ ಪ್ರಮುಖ ರಿಯಲ್ ಎಸ್ಟೇಟ್ ಡೆವಲಪರ್ 'ನವನಾಮಿ' ಪ್ರಾಜೆಕ್ಟ್‌ ಪ್ರೈವೇಟ್ ಲಿಮಿಟೆಡ್ ಸಂಸ್ಯೆಯು 150 ಐಷಾರಾಮಿ ನಿವಾಸಗಳನ್ನು ಒಳಗೊಂಡಿರುವ 50 ಮಹಡಿಗಳ ಎತ್ತರದ 'ಮೆಗಾಲಿಯೋ' ಅವಳಿ ವಸತಿ ಸಮುಚ್ಚಯಗಳನ್ನು ಅನಾವರಣಗೊಳಿಸಿದೆ.

A luxurious 50-storey apartment in Hyderabad See what it s like

ಒಟ್ಟು 4.1 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಿರುವ ಮೆಗಾಲಿಯೋದ ಸುತ್ತಲಿನ ಪ್ರದೇಶ ಒಟ್ಟು 1200 ಎಕರೆ ಇದೆ. ಇದು ಹಸಿರಿನಿಂದ ಸುತ್ತುವರಿದ ನೈಸರ್ಗಿಕ ಪ್ರದೇಶವಾಗಿದು ನೋಡಲು ಆಕರ್ಷಕವಾಗಿದೆ. ಜೊತೆಗೆ ಸಂರಕ್ಷಿತ ಜಲಮೂಗಳಾದ ಹಿಮಾಯತ್ ಸಾಗರ್ ಮತ್ತು ಓಸ್ಮಾನ್ ಸಾಗರ್‌ನ ಸಮೀಪದಲ್ಲೇ ಗಗನ ಚುಂಬಿಯಂತೆ ವಸತಿ ಸಮುಚ್ಚಯಗಳನ್ನು ನಿರ್ಮಸಿಲಾಗಿದೆ.

ನಗರದಲ್ಲಿ ಇತ್ತೀಚೆಗೆ ಅಯೋಜಿಸಿದ್ದ 'ಮೆಗಾಲಿಯೋ ಗ್ರ್ಯಾಂಡ್ ಲಾಂಚ್' ಕಾರ್ಯಕ್ರಮದ ಮೂಲಕ ನವನಾಮಿಯ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ನವೀನ್‌ಗಡ್ಡೆ ತಮ್ಮ ಕನಸಿನ ಯೋಜನೆಯನ್ನು ಅನಾವರಣಗೊಳಿಸಿದರು.

ಇದಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೊಗಾಲಿಯೋ ಸುಮಾರು 800 ರಿಂದ 900 ಕೋಟಿ ರೂಪಾಯಿ ವೆಚ್ಚದ ಯೋಜನೆಯಾಗಿದೆ. ಒಟ್ಟು 150 ವಸತಿಗಳನ್ನು ಶ್ರೀಮಂತಿಕೆ ಮತ್ತು ಅತ್ಯಾಧುನಿಕತೆಯ ಆಧಾರದಲ್ಲಿ ಮೂರು ಘಟಕಗಳಾಗಿ ವಿಂಗಡಿಸಲಾಗಿದೆ. ಸ್ಕೈಲೈನ್ ಟವರ್‌ನ ಫ್ಲಾಟ್‌ಗಳು 11,111 ಚದರ ಅಡಿ ಮತ್ತು ಯುನಿಟಿ ಟವರ್‌ನ ನಿವಾಸಗಳು 9999 ಚದರ ಅಡಿ ಮತ್ತು 8888 ಚದರ ಅಡಿ ವಿಸ್ತೀರ್ಣದಿಂದ ಕೂಡಿವೆ.

A luxurious 50-storey apartment in Hyderabad See what it s like

ಈ ಪ್ರತಿ ಫ್ಲಾಟ್‌ನ ಬೆಲೆ 8 ಕೋಟಿ ರೂಪಾಯಿನಿಂದ ಆರಂಭವಾಗುತ್ತದೆ ಎಂದು ನವೀನ್ ಗಡ್ಡೆ ತಿಳಿಸಿದರು. ಇದೇ ವೇಳೆ ಡಿಸೈನ್‌ ಹೌಸ್‌ನ ಪ್ರಧಾನ ವಾಸ್ತುಶಿಲ್ಪಿ ರಾಜೀವ್ ಕುಮಾರ್‌ ಶರ್ಮಾ, ನವನಾಮಿ ನಿರ್ದೇಶಕ ಕೃಷ್ಣಕಾಂತ್‌ ಕೋಟಗಿರಿ ಉಪಸ್ಥಿತರಿದ್ದರು.

ಬಲಿಷ್ಠಗೊಳ್ಳುತ್ತಿದೆ ಭಾರತದ ರಿಯಲ್ ಎಸ್ಟೇಟ್

ಭಾರತದ ಆರ್ಥಿಕತೆ ಗರಿಗೆದರಿದಂತೆಲ್ಲಾ ರಿಯಲ್ ಎಸ್ಟೇಟ್ ಬಲಿಷ್ಠಗೊಳ್ಳುತ್ತಿದೆ. ಪ್ರಮುಖ ನಗರಗಳಲ್ಲಿ ಅಪಾರ್ಟ್ಮೆಂಟ್ ಇತ್ಯಾದಿ ವಾಸಸ್ಥಳಗಳಿಗೆ ಬಹಳ ಬೇಡಿಕೆ ಬಂದಿದೆ. ನೈಟ್ ಫ್ರಾಂಕ್ ಇಂಡಿಯಾ ಸಂಸ್ಥೆ (Knight Frank India) ಬಿಡುಗಡೆ ಮಾಡಿದ ವರದಿಯೊಂದರ ಪ್ರಕಾರ 2023ರ ಜುಲೈನಿಂದ ಸೆಪ್ಟೆಂಬರ್ ಕ್ವಾರ್ಟರ್​ನಲ್ಲಿ ಭಾರತದ ಎಂಟು ಪ್ರಮುಖ ನಗರಗಳಲ್ಲಿ 82,612 ವಾಸದ ಮನೆಗಳು (Residential Property) ಮಾರಾಟವಾಗಿವೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಇವುಗಳ ಮಾರಾಟ ಶೇ. 12ರಷ್ಟು ಹೆಚ್ಚಳವಾಗಿದೆ.

ಮುಂಬೈ, ಬೆಂಗಳೂರು, ದೆಹಲಿ ಎನ್​ಸಿಆರ್, ಚೆನ್ನೈ, ಹೈದರಾಬಾದ್, ಪುಣೆ ಮತ್ತು ಅಹ್ಮದಾಬಾದ್ ನಗರಗಳಲ್ಲಿನ ಮನೆಗಳ (Apartments/flats) ಮಾರಾಟವನ್ನು ಅವಲೋಕಿಸಿ ನೈಟ್ ಫ್ರಾಂಕ್ ವರದಿ ಮಾಡಿದೆ. ಇಲ್ಲಿ ಮನೆಗಳ ಸರಾಸರಿ ಬೆಲೆ ಲೆಕ್ಕಾಚಾರದಲ್ಲಿ ಹೈದರಾಬಾದ್ ಅತಿ ಹೆಚ್ಚಳಕಂಡಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಹೈದರಾಬಾದ್​ನಲ್ಲಿ ಅಪಾರ್ಟ್ಮೆಂಟ್, ಫ್ಲ್ಯಾಟ್ ಬೆಲೆ ಶೇ. 11ರಷ್ಟು ಹೆಚ್ಚಾಗಿದೆ. ಬೆಂಗಳೂರನಲ್ಲಿ ಇದು ಶೇ. 6ರಷ್ಟು ಹೆಚ್ಚಾಗಿದೆ. ಆದರೆ, ಚದರಡಿಗೆ ಅತಿಹೆಚ್ಚು ಬೆಲೆ ಇರುವುದು ಮುಂಬೈನಲ್ಲಿ. ನಂತರದ ಸ್ಥಾನ ಬೆಂಗಳೂರಿನದ್ದು.

ನೈಟ್ ಫ್ರ್ಯಾಂಕ್ ವರದಿಯಲ್ಲಿ ಕುತೂಹಲದ ಅಂಶವೊಂದನ್ನು ಕಾಣಬಹುದು. ಮೇಲಿನ ಈ ಎಂಟು ನಗರಗಳ ರೆಸಿಡೆನ್ಷಿಯಲ್ ಮಾರುಕಟ್ಟೆಯಲ್ಲಿ ಜುಲೈನಿಂದ ಸೆಪ್ಟೆಂಬರ್​ವರೆಗೆ 82,612 ಯೂನಿಟ್​ಗಳು ಮಾರಾಟವಾಗಿವೆ. ಇದರಲ್ಲಿ 1 ಕೋಟಿ ರೂಗಿಂತ ಹೆಚ್ಚಿನ ಬೆಲೆಯ ಪ್ರಾಪರ್ಟಿಗಳು ಮಾರಾಟವಾಗಿದ್ದು 28,642.

ಇನ್ನು, 50 ಲಕ್ಷದಿಂದ 1 ಕೋಟಿ ರೂ ಒಳಗಿನ ಬೆಲೆಯ 29,827 ಯೂನಿಟ್​ಗಳು ಸೇಲ್ ಆಗಿವೆ. 50 ಲಕ್ಷದೊಳಗಿನ ಬೆಲೆಯ ಮನೆಗಳು ಮಾರಾಟವಾಗಿದ್ದು 24,143 ಮಾತ್ರವೇ. ಅಂದರೆ, ಜನರು ಸ್ವಂತ ಮನೆಗಾಗಿ ಹೆಚ್ಚು ಖರ್ಚು ಮಾಡುತ್ತಿರುವುದು ಈ ಅಂಕಿ ಅಂಶದಿಂದ ವೇದ್ಯವಾಗುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+