ಬ್ಯಾಂಕಾಕ್ ಮಧುಚಂದ್ರವನ್ನು ಸುಖಕರವಾಗಿಸಲು 6 ಟಿಪ್ಸ್

Posted By:
Subscribe to Oneindia Kannada

ಹನಿಮೂನ್ ಅಥವಾ ಮಧುಚಂದ್ರ ಹೆಸರು ಹೇಳಿದ ಕೂಡಲೆ ಕೆಲ ನವಜೋಡಿಗಳ ಕಿವಿ ಕೆಂಪಾದರೆ, ಕೆಲವರ ಕಣ್ಣು ಕೆಂಪಾಗುತ್ತದೆ, ಕೆಲವರು ನಾಚಿ ನುಗ್ಗೆಕಾಯಿಯಾಗುತ್ತಾರೆ. ಆದರೆ, ಮದುವೆಯಾಗಿ ನಾವು ಎಷ್ಟು ಪ್ಲಾನಿಂಗ್ ಮಾಡುತ್ತೇವೋ ಮಧುಚಂದ್ರಕ್ಕೆ ಕೂಡ ಅಷ್ಟೇ ಆಸ್ಥೆಯಿಂದ ಯೋಜನೆ ಮಾಡಿಕೊಳ್ಳಬೇಕಾಗುತ್ತದೆ.

ಇತ್ತೀಚಿನ ವರ್ಷಗಳಲ್ಲಿ ಬ್ಯಾಂಕಾಕ್ ಮದುವೆಯಾದ ಹೊಸಜೋಡಿಗಳ ಅತ್ಯಂತ ಫೆವರಿಟ್ ಹನಿಮೂನ್ ತಾಣವಾಗಿದೆ. ಅಲ್ಲಿನ ಫುಕೆಟ್, ಕೋಹ್ ಸಮುಯ್‌ಗೆ ತೆರಳಿ ನೆನಪಿನಲ್ಲುಳಿಯುವ ಸಮಯ ಕಳೆದು ವಾಪಸ್ ಬರುತ್ತಾರೆ. ಸ್ಫಟಿಕದಷ್ಟು ಸ್ವಚ್ಛ ನೀರು, ಅಲ್ಲಿನ ಆದರಾತಿಥ್ಯ ಹೊಸಜೋಡಿಗಳಿಗೆ ಅಚ್ಚಳಿಯದ ಹೊಸ ಅನುಭವ ನೀಡುತ್ತದೆ.

ಮದುವೆಯ ನಂತರ ಬ್ಯಾಂಕಾಕ್ ಗೆ ಹೋಗಬಯಸುವವರು 6 ಅತ್ಯುತ್ತಮ ಟಿಪ್ಸ್ ಗಳನ್ನು ಇಲ್ಲಿ ನೀಡಲಾಗಿದೆ. ಅವುಗಳನ್ನು ಅನುಸರಿಸಿ ಸುಮಧುರ ಅನುಭವಗಳೊಂದಿಗೆ ವಾಪಸ್ ಸ್ವದೇಶಕ್ಕೆ ಬಂದು ಹೊಸಜೀವನ ಆರಂಭಿಸಬಹುದು.

6 steps to plan your perfect honeymoon in Bangkok!

ತಯಾರಿ 1 : ವರ್ಷದ ಯಾವ ಸಮಯದಲ್ಲಿ ನೀವು ಬ್ಯಾಂಕಾಂಕ್ ಗೆ ಹೋಗುತ್ತೀರೆಂದು ನಿರ್ಧರಿಸಿ. ಹನ್ನೆರಡು ತಿಂಗಳೂ ಅತಿಥಿಗಳನ್ನು ಬ್ಯಾಂಕಾಕ್ ಸ್ವಾಗತಿಸುತ್ತಾದರೂ ವರ್ಷದ ಕೊನೆಯಲ್ಲಿ ಅಥವಾ ಆರಂಭದಲ್ಲಿ ಹವಾಮಾನ ಅತ್ಯುತ್ತಮವಾಗಿರುತ್ತದೆ. ಅಲ್ಲದೆ, ಮಧುಚಂದ್ರ ಯಾವ ರೀತಿಯದಾಗಿರಬೇಕೆಂದು ಮೊದಲೇ ನಿರ್ಧರಿಸಿ. ಸಾಹಸಮಯವಾಗಿರಬೇಕಾ ಅಥವಾ ಸುಮ್ಮನೆ ಜಾಲಿಯಾಗಿ ಸುತ್ತಾಡಿ ಬರಬೇಕಾ. ಇದನ್ನು ನೀವು ಮೊದಲು ನಿರ್ಧರಿಸಿದರೆ ಮುಂದಿನ ಪ್ಲಾನಿಂಗ್ ಸರಳವಾಗಿರುತ್ತದೆ.

ತಯಾರಿ 2 : ಬಜೆಟ್ ಎಷ್ಟೆಂದು ಮೊದಲು ನಿಮ್ಮ ಅರ್ಧಾಂಗಿಯೊಡನೆ ನಿರ್ಧರಿಸಿ. ಮೊದಲನೋಟಕ್ಕೆ ತುಂಬಾ ದುಬಾರಿ ತಾಣವೆಂದು ಅನ್ನಿಸಿದರೂ ಬ್ಯಾಂಕಾಕ್ ಅಂತ ತುಟ್ಟಿ ಪ್ರವಾಸಿತಾಣವೇನಲ್ಲ. ಆದರೆ, ಮೊದಲೇ ಬಜೆಟ್ ನಿರ್ಧರಿಸದರೆ, ಶಾಪಿಂಗ್ ಮಾಡಲು ಅತ್ಯುತ್ತಮ ಸ್ಥಳವಾದ್ದರಿಂದ ಕೊಳ್ಳಲು ಖರ್ಚಿಗೆ ಎಷ್ಟು ಬೇಕೆಂದು ಮೊದಲೇ ತೆಗೆದಿಡಬಹುದು. ಖರ್ಚುವೆಚ್ಚಗಳಿಗೆ ಇಂತಿಷ್ಟು ಅಂತ ಮೊದಲೇ ನಿಗದಿಪಡಿಸಿದರೆ ಮುಂದಿನದು ಸರಳ.

ತಯಾರಿ 3 : ಟಿಕೆಟ್ ಬುಕ್ ಮಾಡಿ. ನಾಲ್ಕೈದು ತಿಂಗಳು ಮೊದಲೇ ಟಿಕೆಟ್ ಬುಕ್ ಮಾಡಿದರೆ ಹಲವರ ಅಭಿಪ್ರಾಯ. AirAsiaದಲ್ಲಿ ಪ್ರಯಾಣ ಮಾಡುವುದರಿಂದ ಹಲವಾರು ಲಾಭಗಳಿವೆ. ಕೊಡುಗೆಗಳು ಚಾಲ್ತಿಯಲ್ಲಿದ್ದಾಗ ಟಿಕೆಟ್ ಬುಕ್ ಮಾಡಿದರೆ ಹಣ ಉಳಿಸಬಹುದು. ಉದಾಹರಣೆಗೆ ಬೇಸಿಗೆಯಲ್ಲಿ ಕಡಿಮೆ ಬೆಲೆ ಅಂದ್ರೆ 4499 ರು.ಗೆ ಟಿಕೆಟ್ ದೊರೆಯುತ್ತದೆ. ಇಲ್ಲಿ ಉಳಿಸಿದ ಹಣವನ್ನು ಮಧುಚಂದ್ರದಲ್ಲಿ ಉಳಿದ ಖರ್ಚಿಗೆ ಬಳಸಿಕೊಳ್ಳಬಹುದು. ಒಂದು ನೆನಪಿರಲಿ, ಅಂದುಕೊಂಡದ್ದಕ್ಕಿಂತ ಹೆಚ್ಚು ಖರ್ಚು ಮಾಡಬೇಡಿ.

ತಯಾರಿ 4 : ಟಿಕೆಟ್ ಬುಕ್ ಆದ ನಂತರ ಪ್ಯಾಕ್ ಮಾಡಿಕೊಳ್ಳಲು ಏನೇನು ಬೇಕೆಂದು ಪಟ್ಟಿ ಮಾಡಿಕೊಳ್ಳಿ. ಉಳಿದ ಸಾಮಾನುಗಳ ಜೊತೆಗೆ ವಿಮಾನದ ಟಿಕೆಟ್, ಪಾಸ್ಪೋರ್ಟ್, ಗುರುತಿನ ಚೀಟಿ, ಅಲ್ಲಿ ವಾಹನ ಚಲಾಯಿಸುವ ಇಚ್ಛೆಯಿದ್ದರೆ ಡ್ರೈವಿಂಗ್ ಲೈಸೆನ್ಸ್ ಮುಂತಾದವುಗಳನ್ನು ಮರೆಯದೆ ಪ್ರತ್ಯೇಕವಾಗಿ ತೆಗೆದಿಟ್ಟುಕೊಳ್ಳಿ. ಅಲ್ಲದೆ, ಆಯಾ ದೇಶದ, ಆಯಾ ವಾತಾವರಣಕ್ಕೆ ಸರಿಹೊಂದುವಂಥ ಬಟ್ಟೆಬರೆಗಳನ್ನು ತೆಗೆದಿಟ್ಟುಕೊಳ್ಳಿ.

ತಯಾರಿ 5 : ಅಲ್ಲಿ ಏನೇನು ಚಟುವಟಿಕೆಗಳಲ್ಲಿ ಭಾಗವಹಿಸಬೇಕೆಂಬುದನ್ನೂ ಗುರುತುಹಾಕಿಕೊಳ್ಳಿ. ಸ್ಟೆಪ್ 1ರಲ್ಲಿ ಹನಿಮೂನ್ ಹೇಗಿರಬೇಕೆಂದು ಮೊದಲೇ ನಿರ್ಧರಿಸಿರುತ್ತೀರಿ. ಕೆಲವರು, ಸುಮ್ಮನೆ ಜಾಲಿಯಾಗಿ ಅಡ್ಡಾಡಿಕೊಂಡು ಸಂಗಾತಿಯ ಜೊತೆ ಬೆರೆತು ಹೆಚ್ಚು ಅರಿತುಕೊಳ್ಳಲು ಬಯಸುತ್ತಾರೆ. ಕೆಲವರು ಟ್ರೆಕ್ಕಿಂಗ್, ರಾಕ್ ಕ್ಲೈಂಬಿಂಗ್ ಮಾಡುತ್ತ ಅಡ್ವೆಂಚರಸ್ ಆಗಿರಲು ಬಯಸುತ್ತಾರೆ. ಒಬ್ಬೊಬ್ಬರಿಗೆ ಒಂದೊಂದಲ್ಲಿ ಆಸಕ್ತಿ. ಹೇಗಿರಬೇಕೆಂದು ಮೊದಲೇ ನಿರ್ಧರಿಸಿ ಮತ್ತು ಅದಕ್ಕೆ ಸಮಯ ಮೀಸಲಿಡಿ.

ತಯಾರಿ 6 : ಸಾಕಷ್ಟು ಹುಡುಕಾಟ ನಡೆಸಿ ಸರಿಯಾದ ರೆಸಾರ್ಟ್ ಬುಕ್ ಮಾಡಿ. ಏಕೆಂದರೆ ಅಲ್ಲಿರುವ ವಾತಾವರಣ, ಅನುಕೂಲತೆಗಳು ಕಳೆಯುವ ಅತ್ಯಮೂಲ್ಯ ಸಮಯವನ್ನು ಇನ್ನಷ್ಟು ಆನಂದದಾಯಕ ಮಾಡುತ್ತವೆ. ಬ್ಯಾಂಕಾಕ್ ನಲ್ಲಿ ಹಲವಾರು ಪಂಚತಾರೆ ಹೋಟೆಲುಗಳಿದ್ದರೂ ನಿಮಗೆ ಬೇಕಾದ ಚಟುವಟಿಕೆಗಳು ಇವೆಯಾ ಇಲ್ಲವಾ ಎಂಬುದನ್ನು ನೋಡಿಕೊಂಡು ರೆಸಾರ್ಟ್ ಬುಕ್ ಮಾಡಿ. ಮತ್ತು ಅದು ನಿಮ್ಮ ಬಜೆಟ್ಟಿಗೂ ಹೊಂದುವಂತಿರಬೇಕು.

ಇಷ್ಟೆಲ್ಲಾ ತಯಾರಿಗಳು ಮುಗಿದನಂತರ ಬ್ಯಾಗ್ ಪ್ಯಾಕ್ ಮಾಡಿಕೊಂಡು ಏರ್ ಏಷ್ಯಾ ವಿಮಾನ ಹತ್ತಿ ವಿಶಿಷ್ಟವಾದ ಹನಿಮೂನ್ ಅನುಭವಕ್ಕೆ ತೆರೆದುಕೊಳ್ಳಿ.

ಏರ್ ಎಷ್ಯಾ ಅತ್ಯುತ್ತಮ ಸೇವೆ ನೀಡುತ್ತಿದ್ದು, ಬೆಂಗಳೂರು, ಕೊಚ್ಚಿ, ಕೊಲ್ಕತಾ, ಚೆನ್ನೈ ಸೇರಿದಂತೆ ದೇಶದ ಹಲವಾರು ನಗರಗಳಿಂದ ನೇರವಾಗಿ ಸಂಚರಿಸುತ್ತದೆ. ಅಂತಾರಾಷ್ಟ್ರೀಯ ಟಿಕೆಟ್ ಬುಕ್ ಮಾಡುವಾಗ ಸಾಕಷ್ಟು ಹಣ ಉಳಿಸುವುದರಿಂದ ಇತರ ಖರ್ಚುಗಳಿಗೆ ಉಳಿದ ಹಣವನ್ನು ಬಳಸಬಹುದು. ಏಪ್ರಿಲ್ 23ರೊಳಗೆ ಟಿಕೆಟ್ ಬುಕ್ ಮಾಡಿದರೆ ಪ್ರತಿ ಟಿಕೆಟ್ಟಿಗೆ 4499 ರು. ಮಾತ್ರ ಇರುತ್ತದೆ.

ಉಳಿಸಿದ ಹಣದಿಂದ ಏನೇನು ಮಾಡಬಹುದೆಂದು ಸುಮ್ಮನೆ ಒಮ್ಮೆ ಕಲ್ಪನೆ ಮಾಡಿಕೊಳ್ಳಿ. ಹನಿಮೂನ್ ನಲ್ಲಿದ್ದಾಗ ನಿಮ್ಮ ಮುದ್ದಿನ ಹೆಂಡತಿಗೆ ಅಚ್ಚರಿ ಮೂಡುವಂತೆ ಒಂದು ಉಡುಗೊರೆಯನ್ನೂ ಕೊಂಡು ಅವರನ್ನು ಆನಂದಪಡಿಸಬಹುದು. ಇಂತಹ ಕೊಡುಗೆಗಳನ್ನು ಮಿಸ್ ಮಾಡಿಕೊಳ್ಳಬೇಡಿ ಮತ್ತು ನಿಮ್ಮ ಮಧುಚಂದ್ರವನ್ನು ಮತ್ತಷ್ಟು ಸುಖಕರ ಮಾಡಿಕೊಳ್ಳಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
One of the most important parts of planning for a wedding is planning for the honeymoon. People might start smiling or giving sly glances when the topic of honeymoon is brought up, but the fact is that this trip that the newlywed couple takes also requires a lot of planning.
Please Wait while comments are loading...