ಜುಲೈನಲ್ಲಿ 50 ಲಕ್ಷ ಜನರು ಉದ್ಯೋಗ ಕಳೆದುಕೊಂಡಿದ್ದಾರೆ: CMIE

ನವದೆಹಲಿ, ಆಗಸ್ಟ್‌ 18: ಜುಲೈ ತಿಂಗಳಿನಲ್ಲಿ ವೇತನ ಪಡೆಯುವ ಸುಮಾರು ಐದು ಮಿಲಿಯನ್ ಜನರು (50 ಲಕ್ಷ) ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಕೇಂದ್ರದ ಮಾನಿಟರಿಂಗ್ ಇಂಡಿಯನ್ ಎಕಾನಮಿ ತಿಳಿಸಿದೆ.

ಅನೌಪಚಾರಿಕ ವಲಯದಿಂದ ಪ್ರೇರಿತವಾದ ಒಟ್ಟಾರೆ ಉದ್ಯೋಗ ದರದಲ್ಲಿ ಚೇತರಿಕೆಯ ಹೊರತಾಗಿಯೂ ಜುಲೈನಲ್ಲಿ ಸುಮಾರು ಐದು ಮಿಲಿಯನ್ ಸಂಬಳ ಪಡೆಯುವ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಈ ವಿಭಾಗದಲ್ಲಿ ಒಟ್ಟು ಉದ್ಯೋಗ ನಷ್ಟವು 18.9 ದಶಲಕ್ಷಕ್ಕೆ ತಲುಪಿದೆ ಎಂದು ಕೇಂದ್ರದ ಮಾನಿಟರಿಂಗ್ ಇಂಡಿಯನ್ ಎಕಾನಮಿ ತಿಳಿಸಿದೆ. ಸಂಬಳ ಪಡೆಯುವ ವರ್ಗದಲ್ಲಿ ಉದ್ಯೋಗ ನಷ್ಟವು ಆತಂಕದ ಮೂಲವಾಗಿದೆ.

2020ರ ಏಪ್ರಿಲ್‌ನಲ್ಲಿ 17.7 ಮಿಲಿಯನ್ ಸಂಬಳದ ಉದ್ಯೋಗಗಳು ಮತ್ತು ಮೇ ತಿಂಗಳಲ್ಲಿ 0.1 ಮಿಲಿಯನ್ ಉದ್ಯೋಗಗಳು ಕಳೆದುಹೋಗಿವೆ ಎಂದು ಸಿಎಮ್‌ಐಇ ಡೇಟಾ ತೋರಿಸುತ್ತದೆ. ಜೂನ್‌ನಲ್ಲಿ 3.9 ಮಿಲಿಯನ್ ಉದ್ಯೋಗಗಳನ್ನು ಗಳಿಸಿದ್ದರೂ, ಜುಲೈನಲ್ಲಿ ಹೆಚ್ಚುವರಿ ಐದು ಮಿಲಿಯನ್ ಉದ್ಯೋಗಗಳು ನಷ್ಟವಾಗಿವೆ.

50 Lakh Salaried People Lost Jobs In July: CMIE

"ನಿವ್ವಳ ಆಧಾರದ ಮೇಲೆ, ಜುಲೈ ವೇಳೆಗೆ ಲಾಕ್ ಡೌನ್ ಪ್ರಾರಂಭವಾದಾಗಿನಿಂದ ಸಂಬಳ ಪಡೆಯುವ ನೌಕರರ ದುಃಸ್ಥಿತಿ ಹದಗೆಟ್ಟಿದೆ. ಅವರ ಉದ್ಯೋಗ ನಷ್ಟವು 18.9 ಮಿಲಿಯನ್‌ಗೆ ಏರಿದೆ" ಎಂದು ಸಿಎಮ್ಐಇ ಹೇಳಿದೆ.

ಭಾರತದಲ್ಲಿನ ಎಲ್ಲಾ ಉದ್ಯೋಗಗಳಲ್ಲಿ ಕೇವಲ ಶೇಕಡಾ 21ರಷ್ಟು ಮಾತ್ರ ಸಂಬಳದ ಉದ್ಯೋಗದ ರೂಪದಲ್ಲಿದೆ ಎಂದು ಅಂದಾಜಿಸಲಾಗಿದೆ. ಅವರಲ್ಲಿ ಉದ್ಯೋಗ ನಷ್ಟವು ಏಪ್ರಿಲ್‌ನಲ್ಲಿನ ಎಲ್ಲಾ ಉದ್ಯೋಗ ನಷ್ಟಗಳಲ್ಲಿ ಕೇವಲ ಶೇಕಡಾ 15 ನಷ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+