ಪ್ರವಾಸಿಗರ ಸ್ವರ್ಗ ಯುರೋಪ್ ಖಂಡದಲ್ಲೊಂದು ಸುತ್ತು

Written By:
Subscribe to Oneindia Kannada

ದೇಶ ಸುತ್ತು, ಇಲ್ಲಾ ಕೋಶ ಓದು ಎಂಬ ಮಾತು ಕನ್ನಡಿಗರಿಗೆ ಚಿರಪರಿಚಿತ. ಜ್ಞಾನ ವೃದ್ಧಿ ಮಾಡಿಕೊಳ್ಳಲು ಜಗತ್ತನ್ನು ಸುತ್ತಿದರೂ ಸಾಧ್ಯವಿದೆ ಎಂದು ನಮ್ಮ ಹಿರಿಯರು ಹೇಳಿದ್ದಾರೆ. ಹಾಗಾದರೆ ಒಂದು ಸುಂದರ ಪ್ರವಾಸಕ್ಕೆ ನಾವು ಹೊರಟರೆ ಹೇಗೆ? ಅದು ಯುರೋಪ್ ಗೆ.

ಕೆಲವರು ಪ್ರವಾಸ ಮಾಡುವುದಕ್ಕೂ ಜ್ಞಾನ ವೃದ್ಧಿಗೂ ಸಂಬಂಧ ಇಲ್ಲ ಎಂದು ಅಪಾದನೆಯನ್ನು ತೆಗೆಯಬಹುದು. ಇರಲಿ ಬಿಡಿ, ಯುರೋಪ್ ತಿರುಗಾಟ ಅಂದ ತಕ್ಷಣ ಹತ್ತಾರು ದೇಶಗಳು ತಲೆಯ ಒಳೆಗೆ ಬರಬಹುದು. ಆದರೆ ನಾವು ಇದೀಗ ನಿಮ್ಮ ಮುಂದೆ ಇಡುವ ಪಟ್ಟಿ ಸ್ಪಷ್ಟ ಚಿತ್ರಣವೊಂದನ್ನು ಕಟ್ಟಿಕೊಡಲು ನೆರವಾಗುತ್ತದೆ.

1. ಸ್ವಿಟ್ಜರ್ಲೆಂಡ್
ಸ್ವಿಡ್ಜರ್ಲ್ಯಾಂಡ್ ಬಗ್ಗೆ ಹೊಸದಾಗಿ ಹೇಳುವುದು ಏನಿದೆ? ಹಿಮಚ್ಛಾದಿತ ಪರ್ವತಗಳು, ಸುಂದರ ಪರಿಸರ, ಸಾಹಸಮಯ ತಾಣಗಳು, ಸ್ಕೈಯಿಂಗ್, ಪ್ಯಾರಾಗ್ಲೈಡಿಂಗ್.. ಅಬ್ಬಾ ಹೇಳುತ್ತಾ ಹೋದರೆ ಮುಗಿಯುವುದೇ ಇಲ್ಲ.

travel

ನೀವು ಹೋಗಲೇಬೇಕಾದ ತಾಣಗಳು:
Jungfraujochನ ಹಿಮದ ಅರಮನೆ, ಸಿಂಹ ವೀಕ್ಷಣಾಲಯ, ಟಿಟಿಲ್ಸ್ ಪರ್ವತ, ಟಿಟಿಲ್ಸ್ ಗೊಂಡೊಲಾ, ಟಿಟಿಲ್ಸ್ ಕ್ಲಿಫ್ ವಾಕ್, Zermatt (ಝೆರ್ಮ್ಯಾಟ್) ನಿಂದ Zweisimmen ಮೊಂಟ್ರಿಯಕ್ಸ್ , ಬ್ಲಾಂಕ್ ಪರ್ವತ, ಜಿನೀವಾ ಮತ್ತು ಬ್ರೇಂಜ್ ನ ಸರೋವರ ಗೆ ಭೇಟಿ ನೀಡಲೇಬೇಕು.

2. ಯುನೈಟೆಡ್ ಕಿಂಗ್ ಡಮ್
ಇಂಗ್ಲೆಂಡ್ ಒಂದು ನಡುಗಡ್ಡೆ. ವೇಲ್ಸ್, ಸ್ಕಾಟ್ ಲ್ಯಾಂಡ್ ಹೇಳಿಕೊಳ್ಳಲು ಸಾಕಷ್ಟಿದೆ. ಯುನೈಟೆಡ್ ಕಿಂಗ್ ಡಮ್ ಅನ್ನು ಪ್ರವಾಸಿಗನ ಅಷ್ಟೂ ಇಚ್ಛೆ ಪೂರೈಸುವ ಅಂತಿಮ ತಾಣ ಎಂದು ಕರೆಯಲಾಗುತ್ತದೆ. ಲಂಡನ್ ನಿಂದಲೇ ನಿಮ್ಮ ಪ್ರವಾಸ ಆರಂಭ ಮಾಡಬೇಕು. ಇದೇ ವಾಡಿಕೆ ಬೆಳೆದುಕೊಂಡು ಬಂದಿದೆ.

travel

ನೀವು ಹೋಗಲೇಬೇಕಾದ ತಾಣಗಳು:
ಬಕಿಂಗ್ ಹ್ಯಾಂ ಪ್ಯಾಲೇಸ್, ವೆಸ್ಟ್ ಮಿನಿಸ್ಟರ್ ಅರಮನೆ, ಸಂತ ಪಾಲ್ ಕ್ಯಾಥೆಡ್ರಲ್, ಲಂಡನ್ ಐ, (ಇವು ಲಂಡನ್ ತಾಣಗಳು). ಮ್ಯಾಡಮ್ ಟ್ಯುಸ್ಸಾಡ್ಸ್ ಅರಮನೆ, ಎಡಿನ್ ಬರ್ಗ್ , ಎಡಿನ್ ಬರ್ಗ್ ಕೋಟೆ, ಮಾನ್ಸ್ ಮೆಗ್, ಬೆಲ್ಫಾಸ್ಟ್ ಗ್ರ್ಯಾಂಡ್ ಒಪೆರಾ ಹೌಸ್, ಬೆಲ್ಫಾಸ್ಟ್ ಅರಮನೆ; ಗ್ಲ್ಯಾಸ್ಗೋ (ಗ್ಲಾಸ್ಗೋ) ವಿಶ್ವವಿದ್ಯಾಲಯ, ಬೆಲ್ಸ್ ಸೇತುವೆ, ರಿವರ್ಸೈಡ್ ಮ್ಯೂಸಿಯಂನ್ನು ನೋಡಲೇಬೇಕು.

3. ಗ್ರೀಸ್
ಸುಂದರ್ ಬೀಚ್ ಗಳು, ಜಗದಾಶ್ಚರ್ಯ ಉಂಟುಮಾಡುವ ವಾಸ್ತುಶಿಲ್ಪ ಗ್ರೀಸ್ ಹೆಗ್ಗಳಿಕೆ. ಯುರೋಪಿನ ಅತ್ಯಂತ ರೋಮ್ಯಾಂಟಿಕ್ ತಾಣದ ರೇಸ್ ನಲ್ಲಿ ಎಂದರೆ ಗ್ರೀಸ್ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಬೀಚ್ ಗಳು ಮತ್ತು ನಡುಗಡ್ಡೆಯ ಸೌಂದರ್ಯ ಸವಿಯಲು ಸಾಧ್ಯವಿದೆ. ಗ್ರೀಸ್ ನ ಇತಿಹಾಸವನ್ನು ಅರಿಯಬಹುದು. ಹಿಂದಿನ ದಾಖಲೆಗಳನ್ನು ಇಟ್ಟುಕೊಂಡು ಇಂದಿನ ಜಗತ್ತನ್ನು ಗ್ರೀಸ್ ನಲ್ಲಿ ಕಾಣಬಹುದು.

ನೀವು ಹೋಗಲೇಬೇಕಾದ ತಾಣಗಳು:
ಸಂತೋರಿಮಿ: ಸಿಂಟ್ಯಾಗ್ಮಾ ಸ್ಕ್ವೇರ್, ಗ್ರೀಸ್ ಸಂಸತ್‌ ಭವನ, ವೀರ ಯೋಧ ಸ್ಮಾರಕ, ಪಾರ್ಥೆನಾನ್, ಅಪೊಲೊ ದೇವಾಲಯ, ಅಥೇನ್ಸ್ ಖಜಾನೆ, ಚೀನಾಸ್ ಬಲಿಪೀಠದ, ಜೀಯಸ್ ದೇವಾಲಯ, ಹೇರಾ ದೇವಾಲಯ, ಮೆಟ್ರೂನ್ ದೇವಾಲಯ, ಒಲಂಪಿಯಾ ದೇವಾಲಯ, ಮೈಕೋನೋಸ್ ಪ್ಯಾರಡೈಸ್ ಬೀಚ್, ಕೊಟೆ, ಪರ್ನಾಸೋಸ್

travel

4. ಫ್ರಾನ್ಸ್
ಪ್ರಪಂಚದಲ್ಲಿಯೇ ಅತಿ ಹೆಚ್ಚು ಜನ ಭೇಟಿ ನೀಡುವ ದೇಶ ಎಂದು ಫ್ರಾನ್ಸ್ ಕರೆಸಿಕೊಂಡಿದೆ. ಕಲೆ, ಸಂಸ್ಕೃತಿಯ ನೆಲೆಬೀಡು, ಯುನೆಸ್ಕೋ ಪರಂಪರೆ ತಾಣಗಳ ಸಾಲು, ಸುಂದರ ನಗರ ಪ್ಯಾರೀಸ್. ಹೌದು ಜೀವನದಲ್ಲಿ ಒಮ್ಮೆಯಾದರೂ ಪ್ಯಾರಿಸ್ ಪ್ರಯಾಣ ಮಾಡಲೆಬೇಕು.

travel

ನೀವು ಹೋಗಲೇಬೇಕಾದ ತಾಣಗಳು:
ಐಫೆಲ್ ಟವರ್, ಮ್ಯೂಸೀ ಡಿ ಓರ್ಸೆ, ಲೌವ್ರೆ ಮ್ಯೂಸಿಯಂ, ನೊಟ್ರೆ ಡೇಮ್ ಡೆ ಪ್ಯಾರಿಸ್, ಆರ್ಕ್ ಡಿ ಟ್ರಿಯೋಂಫ್ ಪಲಾಯಿಸ್ ಗಾರ್ನಿಯರ್, ವರ್ಸಲೀಸ್, ಚಾರ್ಟ್ರೆಸ್ ಕ್ಯಾಥೆಡ್ರಲ್, ಮತ್ತು ಚಾಂಪ್ಸ್-ಐಸೇಸ್ ಗೆ ಭೇಟಿ ನೀಡಲೇಬೇಕು.

5. ಜರ್ಮನಿ
ಜರ್ಮನಿ ಹೆಸರು ಬಂದ ತಕ್ಷಣ ಮಹಾಯುದ್ಧಗಳು ನೆನಪಾಗುತ್ತವೆ. ಆದರೆ ಇಂದು ಜರ್ಮನಿ ಬದಲಾಗಿದೆ. ಜನರನ್ನು ತನ್ನತ್ತ ಕರೆದುಕೊಳ್ಳುತ್ತಿದೆ. ಯಾವಾಗಲೂ ಹಬ್ಬದ ಸಂಭ್ರಮ ಮನೆ ಮಾಡಿರುತ್ತದೆ. ವಿವಿಧ ಸಂಭ್ರಮ ಸಡಗರ ಒಂದೆಲ್ಲಾ ಒಂದು ಕಡೆ ನಡೆಯುತ್ತಲೇ ಇರುತ್ತದೆ. ಜರ್ಮನಿಯಲ್ಲಿ ಸುಂದರ ಕ್ಷಣಗಳನ್ನು ಆಸ್ವಾದಿಸದಿದ್ದರೇ ಜೀವನದಲ್ಲಿ ಒಂದು ಅವಕಾಶ ಕಳೆದುಕೊಂಡಂತೆ.

travel

ನೀವು ಹೋಗಲೇಬೇಕಾದ ತಾಣಗಳು:
ಬರ್ಲಿನ್: ಎರಡನೇ ಮಹಾಯುದ್ಧದ ಯುದ್ಧಭೂಮಿ, ಬ್ರಾಂಡ್ ಬರ್ಗ್ ಗೇಟ್, ರೀಚಸ್ಟ್ ಟ್ಯಾಗ್ ಕಟ್ಟಡ, ಯಹೂದಿಗಳ ಸ್ಮಾರಕ, ಮುನಿಚ್- ನೈಂಪೆನ್ ಬರ್ಗ್ ಪ್ಯಾಲೆಸ್, Hofbräuhaus München, ನ್ಯೂಸ್ವನ್ಸ್ಟೇನ್ ಕ್ಯಾಸಲ್; , ಬವರಿಯಾ- ಡೆಚ್ಯೂಸ್ಟ್ ವಸ್ತುಸಂಗ್ರಹಾಲಯ, ಡ್ಯೂಟ್ಷೆಸ್ಟ್ ಮ್ಯೂಸಿಯಂ, ಮ್ಯೂನಿಚ್ ರೆಸಿಡೆಂಜ್, Alte Pinakothek; ಪ್ರಾಂಕ್ ಫರ್ಟ್: Alte Pinakothek; Frankfurt- Goethe House, Alte Oper, Naturmuseum Senckenberg, Frankfurt Cathedral. ಹೌಸ್, ಆಲ್ಟಾ ಓಪರ್, Naturmuseum ಸೆಂಕೆನ್ಬರ್ಗ್, ಫ್ರಾಂಕ್ಫರ್ಟ್ ಕ್ಯಾಥೆಡ್ರಲ್.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
If Ibn Battuta's quote, 'traveling, it leaves you speechless then turns you into a storyteller' is anything to go by, Europe is the story waiting to be told. A destination for every season, a tour of Europe is a rollercoaster ride- compelling, mesmerizing and irrepressible- all at the same time! Whether it's a relaxed vacation or an adrenalin-pumping adventure- Europe has ample choices for all its visitors and makes sure each and everyone one of you gets just what you're looking for. And for a place, so welcoming, it is imperative that this fascinating continent prominently figure on your travel bucket list of 2016. To make things easier, we bring you the top 5 countries in the European region.
Please Wait while comments are loading...