ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಸರಕಾರಕ್ಕೆ 2017 ಅಳಿವು-ಉಳಿವಿನ ವರ್ಷ, ಏಕೆ ಗೊತ್ತಾ?

|
Google Oneindia Kannada News

ನವದೆಹಲಿ, ಜನವರಿ 4: ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಎನ್ ಡಿಎಗೆ 2017 ತುಂಬ ಮಹತ್ವದ ವರ್ಷ. ಅಪನಗದೀಕರಣದಿಂದ ಹರಿದು ಬಂದಿರುವ 2.20 ಲಕ್ಷ ಕೋಟಿ ರುಪಾಯಿಯಿಂದ ದೇಶದ ಆರ್ಥಿಕ ಪ್ರಗತಿ ಶೇ 8ಕ್ಕೆ ತಲುಪಿಸುವುದಕ್ಕೆ ಸಾಧ್ಯವಾಗುತ್ತದಾ ಎಂಬ ಬಗ್ಗೆ ತಜ್ಞರು ಕಣ್ಣು ನೆಟ್ಟು ಕುಳಿತಿದ್ದಾರೆ.

ದೇಶದ ಆರ್ಥಿಕ ಪ್ರಗತಿಯನ್ನು ಶೇ 8ಕ್ಕೆ ತಲುಪಿಸಬೇಕು ಅಂದರೆ ಕಾರ್ಪೋರೇಟ್ ತೆರಿಗೆಯನ್ನು ಕಡಿತಗೊಳಿಸಬೇಕಿದೆ, ಬ್ಯಾಂಕ್ ಗಳ ಬ್ಯಾಲೆನ್ಸ್ ಶೀಟ್ ಗಳ ಶುದ್ಧೀಕರಣ ಆಗಬೇಕಿದೆ. ಮತ್ತು ಮೂಲಸೌಕರ್ಯಕ್ಕೆ ಹಣ ಒದಗಿಸಬೇಕಿದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.[ಮೋದಿ ಎಫೆಕ್ಟ್: ಎಸ್ಬಿಐ ಸಾಲದ ಮೇಲಿನ ಬಡ್ಡಿದರ ಇಳಿಕೆ]

2017-18 ಕೇಂದ್ರ ಸರಕಾರದ ಪಾಲಿಗೆ ಅಳಿವು-ಉಳಿವಿನ ವರ್ಷ. ಅದರ ಯಶಸ್ಸು ಅಪನಗದೀಕರಣದ ಮೇಲೆ ನಿಂತಿದೆ. ಕಪ್ಪು ಹಣದ ಆರ್ಥಿಕತೆಯನ್ನು ನಿರ್ನಾಮ ಮಾಡುವುದರಲ್ಲಿ ಯಶಸ್ಸು ಕಂಡರೆ ಭವಿಷ್ಯದಲ್ಲಿ ಬಡ್ಡಿದರದ ಇಳಿಕೆ ಆಗುತ್ತದೆ. ಆ ಮೂಲಕ ನಿರೀಕ್ಷಿತ ಆರ್ಥಿಕ ಅಭಿವೃದ್ಧಿ ಸಾಧಿಸಲು ಸಾಧ್ಯ ಎನ್ನುತ್ತಾರೆ ತಜ್ಞರಾದ ಗಿರೀಶ್ ವನ್ವರಿ.

2017 could be make or break year for govt

ಸದ್ಯಕ್ಕೆ ದೇಶದಲ್ಲಿ ಬಂಡವಾಳ ಹೂಡಿಕೆಯಲ್ಲಿ ಸ್ವಲ್ಪ ಮಟ್ಟಿಗೆ ನಿಧಾನ ಗತಿ ಇದೆ. ಮತ್ತು ಅಪನಗದೀಕರಣದಿಂದ ಗ್ರಾಹಕರ ಖರೀದಿ ಸಾಮರ್ಥ್ಯದಲ್ಲೂ ಹಿನ್ನಡೆ ಕಾಣುತ್ತಿದೆ. ಈ ಬಗ್ಗೆ ಅಧಿಕಾರಿಗಳಿಗೆ ಅರಿವಿದೆ. ಅದು ಸುಧಾರಿಸಲು ಬೇಕಾದ ಅಗತ್ಯ ಕ್ರಮ ತೆಗೆದುಕೊಳ್ಳುತ್ತಾರೆ.[ನೋಟು ನಿಷೇಧದ 50ದಿನ: ಸಮೀಕ್ಷೆಯಲ್ಲಿ ಮತ್ತೆ ಮೋದಿಗೆ ಉಘೇ..ಉಘೇ..]

ಆರ್ಥಿಕತೆಗೆ ಚೈತನ್ಯ ತುಂಬಲು ಈಗ ಸಂಗ್ರಹವಾಗಿರುವ 2.2 ಲಕ್ಷ ಕೋಟಿ ರುಪಾಯಿ ಸಾಕಾಗುತ್ತದೆ. ಇದರಿಂದ ಜಿಡಿಪಿಯಲ್ಲೂ ಶೇ 1.5ರಷ್ಟು ಹೆಚ್ಚಾಗುತ್ತದೆ ಎಂದು ಖಾಸಗಿ ಕಂಪನಿಯೊಂದರ ಆರ್ಥಿಕ ಸಲಹೆಗಾರರೊಬ್ಬರು ಅಭಿಪ್ರಾಯಪಡುತ್ತಾರೆ.

ರಸ್ತೆ, ರೈಲ್ವೆ ಯೋಜನೆಗಳು ಹಾಗೂ ಇತರ ನಿರ್ಮಾಣ ವಲಯದಲ್ಲಿ ಸರಕಾರ ಹಣ ಹೂಡುವ ಮೂಲಕ ಆರ್ಥಿಕತೆಗೆ ಚೈತನ್ಯ ತುಂಬಬಹುದಾಗಿದೆ. ಇದರಿಂದ ಉದ್ಯೋಗ ಸೃಷ್ಟಿ ಕೂಡ ಆಗುತ್ತದೆ. ಆದರೆ ಮಾರ್ಚ್ ವರೆಗೆ ಅಪನಗದೀಕರಣದ ಪರಿಣಾಮ ಇದ್ದೇ ಇರುತ್ತದೆ. ಇದರ ಜತೆಗೆ ಜಾಗತಿಕ ವಿದ್ಯಮಾನ ಹಾಗೂ ಜಿಎಸ್ ಟಿ ಜಾರಿ ಬಗ್ಗೆ ಕೂಡ ಕುತೂಹಲದ ಕಣ್ಣಿಡಲಾಗಿದೆ.[ಭಾಯಿಯೋ ಔರ್ ಬೆಹೆಣೋ... ಮೋದಿ ಭಾಷಣದ ಮುಖ್ಯಾಂಶಗಳು]

ಇನ್ನು ಎರಡು ವರ್ಷದಲ್ಲಿ ಭಾರತ ಶೇ 8ರಷ್ಟು ಆರ್ಥಿಕ ಅಭಿವೃದ್ಧಿ ಸಾಧಿಸಲು ಸಮರ್ಥವಾಗಿದೆ. ಜಾಗತಿಕ ಆರ್ಥಿಕ ಸ್ಥಿತಿಯಿಂದ ಕಚ್ಚಾ ತೈಲ ಬೆಲೆ ಹಾಗೂ ಅಗತ್ಯ ವಸ್ತುಗಳ ಬೆಲೆ ಕಡಿಮೆಯಾಗಿ, ಉತ್ತಮವಾದ ಮಳೆಯಾಗಿ, ದೇಶಿಯ ಮಾರುಕಟ್ಟಿಯಲ್ಲಿ ಅಭಿವೃದ್ಧಿ ಕಂಡುಬಂದರೆ ದೇಶದ ಜಿಡಿಪಿ ಹೆಚ್ಚಾಗುವುದರಲ್ಲಿ ಯಾವ ಅನುಮಾನವೂ ಇಲ್ಲ ಎಂಬುದು ಆರ್ಥಿಕ ತಜ್ಞರ ಅಭಿಮತ.

English summary
Year 2017 could well be a 'make or break year' for the NDA government, depending on how it manages to utilise the likely gains of Rs 2.20 lakh crore on account of demonetisation to spur economic growth to over 8 percent, say experts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X